ನವದೆಹಲಿ: ಬಗೆಬಗೆಯ ವಿನ್ಯಾಸದ, ಸ್ಟೈಲ್ ಗಳ ಹೇರ್ ಕಟ್ ಮಾಡಿಸಿಕೊಳ್ಳಬೇಕು ಅನ್ನೋದು ಎಲ್ಲರ ಆಸೆ. ಹಾಗೆ ಎಲ್ಲರೂ ಕತ್ತರಿಯಿಂದ ಹೇರ್ ಕಟ್ ಮಾಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಇಲ್ಲೊಬ್ಬ ಕತ್ತರಿಯನ್ನು ಬಿಟ್ಟು, ಮರ ಕತ್ತರಿಸುವ ಕೊಡಲಿಯಿಂದ ಹೇರ್ ಕಟ್ ಮಾಡ್ತಾನೆ. ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೆ ಇದು ಸತ್ಯ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಇಂತಹ ಒಂದು ವಿಚಿತ್ರವಾದ ವೀಡಿಯೋ ಒಂದನ್ನು 'In The Know: Life' ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದೆ. ಇದರಲ್ಲಿ ಡೇನಿಯಲ್ ಇಸ್ಟೋಮಿನ ಎಂಬಾತ ಮಹಿಳೆಯರ ಕೂದಲನ್ನು ಕೊಡಲಿಯಿಂದ ಕತ್ತರಿಸುತ್ತಾನೆ. ಅದೂ ಎಷ್ಟು ವೇಗವಾಗಿ ಅಂತೀರಾ?? ಒಮ್ಮೆ ನೀವೇ ಆ ವೀಡಿಯೋ ನೋಡಿ. 



ಈ ವೀಡಿಯೋ ನೋಡಿ ಜನ ಎಷ್ಟು ವಿಚಿತ್ರವಾಗಿರುತ್ತಾರೆ, ಅವರ ಕೆಲಸಗಳು ಎಷ್ಟು ವಿಚಿತ್ರವಾಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ. ಆದರೆ ಇಂತಹ ಭಯಾನಕ, ಅಪಾಯಕಾರಿ ಮತ್ತು ಪ್ರಾಣಕ್ಕೆ ಕುತ್ತು ತರುವ ಸಾಹಸಗಳನ್ನು ಎಂದಿಗೂ ಪ್ರಯತ್ನಿಸಬೇಡಿ.