ಜಕಾರ್ತ: ಸಮುದ್ರ ಜೀವಿಗಳಲ್ಲಿ ಶಾರ್ಕ್ ಅತ್ಯಂತ ಅಪಯಕಾರಿ ಜಲಚರ. ಆದರೆ ಆ ಶಾರ್ಕ್ ಮೇಲೆ ಕುಳಿತು ಭೂಪನೊಬ್ಬ ಸವಾರಿ ಮಾಡಿದ್ದಾನೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಕೇವಲ 22 ಸೆಕೆಂಡುಗಳ ಈ ವೀಡಿಯೋದಲ್ಲಿ ಸಮುದ್ರ ಡೈವರ್'ಗಳ ಗುಂಪೊಂದು ಶಾರ್ಕ್ ಅನ್ನು ಸ್ಪರ್ಶಿಸಿದ್ದಲ್ಲದೆ, ಅದರ ಮೇಲೆ ಕುಳಿತು ಸವಾರಿ ಮಾಡುವ ಸಾಹಸವನ್ನೂ ಮಾಡಿದ್ದಾರೆ. ಈ ವೀಡಿಯೋವನ್ನು ಇಂಡೋನೇಶಿಯಾದ "ಸೆಂಡರ್ವಾಸಿಹ್ ಕೊಲ್ಲಿಯ [ನ್ಯಾಷನಲ್ ಪಾರ್ಕ್] ನಲ್ಲಿ ಚಿತ್ರಿಕರಿಸಲಾಗಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಸಮುದ್ರದಲ್ಲಿ ಡೈವ್ ಮಾಡುವವರು ಶಾರ್ಕ್ ಗಳಿಂದ ಮೂರೂ ಮೀಟರ್ಗಳ ಅಂತರ ಕಾಯ್ದುಕೊಳ್ಳುವುದು ಅಗತ್ಯ.



ಸಮುದ್ರದಲ್ಲಿ ಜಲಚರಗಳಿಗೆ ತೊಂದರೆ ನೀಡುವುದು, ಮಾರಣಾಂತಿಕ ಸಾಹಸಗಳಿಗೆ ಕೈಹಾಕುವುದು ಕಾನೂನಿಗೆ ವಿರುದ್ಧವಾಗಿದ್ದು, ಜಕರ್ತಾ ಆಡಳಿತ ಮಂಡಳಿ ಈ ವೀಡಿಯೋ ಬಗ್ಗೆ ತನಿಖೆ ಆರಂಭಿಸಿದೆ ಎನ್ನಲಾಗಿದೆ.