ಚಿರತೆ ಅಂದ್ರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ? ಅದನ್ನು ದೂರದಿಂದ ನೋಡಿದರೆ ಸಾಕು, ಮೈ ನಡುಗಿ, ಬೆಅರಿ, ಪತರುಗುಟ್ಟಿ, ಓಟ ಕೀಳುವವರಿದ್ದಾರೆ. ಆದರೆ ಇಲ್ಲೊಬ್ಬಾತ ಚಿರತೆ ಪಕ್ಕದಲ್ಲೇ ಬಂದರೂ ತುಟಿಕ್ ಪಿಟಕ್ ಎನ್ನದೇ ಕುಳಿದ್ದಾನೆ.. ಇದೀಗ ಆ ವಿಡಿಯೋ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಅಮೆರಿಕಾದ ಎಬಿಸಿ ಸುದ್ದಿ ಸಂಸ್ಥೆ ಈ ವೀಡಿಯೋ ಬಿಡುಗಡೆ ಮಾಡಿದೆ. ಚಿರತೆಗಳ ಬಗ್ಗೆ ಸಂಶೋಧನೆ ನಡೆಸಲು ತೆರಳಿದ್ದ ವ್ಯಕ್ತಿಯೊಬ್ಬರು, ಕಾರು ನಿಲ್ಲಿಸಿ ತಮ್ಮ ಕಾರ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಇದಕ್ಕಿದ್ದಂತೆ ಚಿರತೆ ಕಾರಿನೊಳಗೆ ಹತ್ತಿದೆ. ಇದನ್ನು ಕಂಡು ನಡುಕ ಹುಟ್ಟಿದ್ದರೂ, ಒಂದಿಂಚೂ ಕದಲದೆ, ಚಿರತೆಯನ್ನು ದೃಷ್ಟಿಯಿಟ್ಟು ನೋಡದೆ ಕುಳಿತಿದ್ದಾರೆ. ಕೆಲವು ಸೆಕೆಂಡುಗಳವರೆಗೆ ಕಾರಿನೊಳಗೆ ಏನನ್ನೋ ಹುಡುಕಿದ ಚಿರತೆಗೆ, ಅದೇನನ್ನಿಸಿತೋ, ಆತನಿಗೆ ಏನೂ ಮಾಡದೆ ಹಿಂದಿರುಗಿದೆ. ಆದರೆ ಈ ವೀಡಿಯೋದಲ್ಲಿರುವ ವ್ಯಕ್ತಿಯ ವಿವರವನ್ನು ಎಬಿಸಿ ತಿಳಿಸಿಲ್ಲ.


ಅತ್ತ ಚಿರತೆ ಕಾರಿನಿಂದ ಹೊರ ಹೋಗುತ್ತಿದ್ದಂತೆ, ಇತ್ತ ಈತನಿಗೆ ಹೋದ ಜೀವ ಬಂದಂತಾಗಿದೆ. ಸದ್ಯ ಬದುಕಿದೆನಲ್ಲ ಎನ್ನುತ್ತಾ ಅಲ್ಲಿಂದ ತಕ್ಷಣ ತೆರಳಿದ್ದಾರೆ. ಈ ಘಟನೆಯ ವೀಡಿಯೋ ಇಲ್ಲಿದೆ...