Viral Video: ಚಲಿಸುವ ಕಾರಿನ ಮೇಲೆ ಹಠಾತ್ ಕಾಣಿಸಿಕೊಂಡ ಹಾವು!
ಚಲಿಸುತ್ತಿದ್ದ ಕಾರಿನ ಮೇಲೆ ವಿಷಕಾರಿ ಹಾವೊಂದು ಹಠಾತ್ ಕಾಣಿಸಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
ನವದೆಹಲಿ: ಹಾವಿನ ಹೆಸರು ಕೇಳುತ್ತಿದ್ದಂತೆಯೇ ಸಾಕಷ್ಟು ಮಂದಿ ಹೆದರಿ ಓಡುತ್ತಾರೆ. ಹೀಗಿರುವಾಗ ಚಲಿಸುತ್ತಿರುವ ಕಾರಿನ ಮೇಲೆ ಹಠಾತ್ ಹಾವೊಂದು ಕಾಣಿಸಿದರೆ ಕಾರಿನ ಚಾಲಕನ ಸ್ಥಿತಿ ಏನಾಗಿರಬೇಡ ಹೇಳಿ!!!
ಅಮೆರಿಕದ ಕಾನ್ಸಾಸ್ ನಲ್ಲಿ ಇಂತಹದೇ ಒಂದು ಘಟನೆ ನಡೆದಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ವಿಷಕಾರಿ ಹಾವೊಂದು ಹಠಾತ್ ಕಾಣಿಸಿಕೊಂಡಿದ್ದು, ಕಿಟಕಿಯೊಳಗೆ ಬರಲು ಪ್ರಯತ್ನಿಸಿದೆ. ಆದರೆ ಚಾಲಕನು ಕೂಡಲೇ ಕಿಟಕಿಗಳನ್ನು ಹಾಕಿ ಸಮಯಪ್ರಜ್ಞೆ ಮೆರೆದಿದ್ದರಿಂದಾಗಿ ಹಾವು ಒಳಪ್ರವೇಶಿಸುವಲ್ಲಿ ವಿಫಲವಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...