ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿನ ಭಯೋತ್ಪಾದಕ ದಾಳಿಯ ನಂತರ, ಜಾಗತಿಕ ಒತ್ತಡವನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪಾಕಿಸ್ತಾನ ನಾಗರಿಕರ ವೀಸಾ ಅವಧಿಯನ್ನು ಕಡಿತಗೊಳಿಸಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಮತ್ತೊಂದು 'ಶಾಕ್' ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಅಮೇರಿಕಾವು ಪಾಕಿಸ್ತಾನ ನಾಗರಿಕರ ವೀಸಾ ಅವಧಿಯನ್ನು 5 ವರ್ಷದ ಬದಲು ಮೂರು ತಿಂಗಳಿಗೆ ಇಳಿಕೆ ಮಾಡಿದೆ. ಹೊಸ ನಿಯಮಗಳ ಪ್ರಕಾರ, ಈಗ ಅಮೇರಿಕಾಗೆ ತೆರಳುವ ಪಾಕಿಸ್ತಾನಿ ನಾಗರೀಕರು ಕೇವಲ ಮೂರು ತಿಂಗಳಿಗಷ್ಟೇ ವೀಸಾ ಪಡೆಯುತ್ತಾರೆ.
 
ಈ ಮೊದಲು ಪಾಕಿಸ್ತಾನಿ ನಾಗರಿಕರಿಗೆ ಐದು ವರ್ಷಗಳ ವೀಸಾ ನೀಡಲಾಗುತ್ತಿತ್ತು. ಇದೀಗ ಯುಎಸ್, ಪಾಕಿಸ್ತಾನಿ ನಾಗರೀಕರಿಗೆ ಕೇವಲ ಮೂರು ತಿಂಗಳಿಗಷ್ಟೇ ವೀಸಾ ನೀಡಲು ನಿರ್ಧರಿಸಿರುವ ಕ್ರಮವನ್ನು ಪಾಕಿಸ್ತಾನಕ್ಕೆ ಆಘಾತವೆಂದು ಪರಿಗಣಿಸಲಾಗಿದೆ.


ವಾಸ್ತವವಾಗಿ, ಈ ಮೊದಲು, ಯುಎಸ್ ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಪಾಕಿಸ್ತಾನದ ಮಣ್ಣಿನಲ್ಲಿ ಭಯೋತ್ಪಾದನೆಯನ್ನು ಆಶ್ರಯಿಸದಂತೆ ಎಚ್ಚರಿಸಿತ್ತು. ಪುಲ್ವಾಮಾ ದಾಳಿಯ ನಂತರ, ಅಮೇರಿಕಾ ಪಾಕಿಸ್ತಾನದ ಮೇಲಿನ ವಾಯುದಾಳಿಗೆ ಸಂಬಂಧಿಸಿದಂತೆ ಭಾರತಕ್ಕೆ ತನ್ನ ಬೆಂಬಲ ವ್ಯಕ್ತ ಪಡಿಸಿತ್ತು ಮತ್ತು ಜೈಶ್ ಉಗ್ರರ ಶಿಬಿರದ ಮೇಲೆ ಐಎಎಫ್ನ ಕ್ರಮವನ್ನು ಸಮರ್ಥಿಸಿಕೊಂಡಿತು.