ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್(Imran Khan)ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್(Nawaz Sharif) ಹೇಳಿದ್ದಾರೆ. ಪ್ರಧಾನಿ ಕುರ್ಚಿ ಮೇಲೆ ಕುಳಿತಿರುವ ಇಮ್ರಾನ್ ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿರುವ ಷರೀಫ್, ‘ಇಮ್ರಾನ್ ಖಾನ್ ಆತ್ಮಹತ್ಯೆಗಾಗಿ ನಾನು ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ. ಷರೀಫ್ ಸದ್ಯ ಬ್ರಿಟನ್ ರಾಜಧಾನಿ ಲಂಡನ್(London)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ಇಮ್ರಾನ್ ರನ್ನು ಕೈಗೊಂಬೆ ಎಂದು ಪರಿಗಣಿಸಲಾಗಿದೆ


ಪಾಕಿಸ್ತಾನದ ಹಾಲಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ನವಾಜ್ ಷರೀಫ್, ‘ಕ್ರಿಕೆಟ್ ಲೋಕದಿಂದ ರಾಜಕೀಯಕ್ಕೆ ಬಂದ ಇಮ್ರಾನ್ ಖಾನ್ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (IMF) ಹೋಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು. ಹೀಗಾಗಿ ಅವರು ಅದನ್ನು ಯಾವಾಗ ಮಾಡುತ್ತಾರೆಂದು ನಾವು ಕಾಯುತ್ತಿದ್ದೇವೆ. ಭಾರತದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ಕೈಗೊಂಬೆ’ ಎಂದು ಕರೆಯುತ್ತಾರೆ ಮತ್ತು ಅವರು ಅಮೆರಿಕದಲ್ಲಿನ ಮೇಯರ್‌ಗಿಂತ ಕಡಿಮೆ ಅಧಿಕಾರ ಹೊಂದಿದ್ದಾರೆ. ಏಕೆಂದರೆ ಅವರನ್ನು ಹೇಗೆ ಅಧಿಕಾರಕ್ಕೆ ತರಲಾಗಿದೆ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ’ ಅಂತಾ ಷರೀಫ್ ಹೇಳಿದ್ದಾರೆ.


ಇದನ್ನೂ ಓದಿ: Rogue Planets: ಬಾನಂಗಳದಲ್ಲಿ 170 'ದುಷ್ಟ' ಗ್ರಹಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಅವುಗಳಿಂದ ಏನು ಅಪಾಯ?


ಪಾಕ್ ಸೇನಾ ಮುಖ್ಯಸ್ಥರ ವಿರುದ್ಧ ಕಿಡಿಕಿಡಿ


ಪಾಕಿಸ್ತಾನದ ಮಾಜಿ ಪ್ರಧಾನಿ ಷರೀಫ್ ಪಾಕ್ ಸೇನಾ ಮುಖ್ಯಸ್ಥರ ವಿರುದ್ಧ ಕಿಡಿಕಾರಿದ್ದಾರೆ. ‘ಇಮ್ರಾನ್(Imran Khan)  ಸಾಮಾನ್ಯ ಜನರ ಮತಗಳಿಂದ ಅಧಿಕಾರಕ್ಕೆ ಬಂದಿಲ್ಲ, ಆದರೆ ಮಿಲಿಟರಿ ಸ್ಥಾಪನೆಯ ಸಹಾಯದಿಂದ ಅವರು ಪ್ರಧಾನಿಯಾಗಿದ್ದಾರೆ’ ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ 71 ವರ್ಷದ ಷರೀಫ್ ಅವರು ನವೆಂಬರ್ 2019ರಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಚಿಕಿತ್ಸೆಗಾಗಿ 4 ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್(Lahore High Court) ಅವರಿಗೆ ಅನುಮತಿ ನೀಡಿತ್ತು, ಆದರೆ ಅವರು ಹಿಂತಿರುಗಲಿಲ್ಲ.


ಟಾರ್ಗೆಟ್ ಆದ ಇಮ್ರಾನ್ ಖಾನ್!


ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅಂದಿನ ಸರ್ಕಾರಗಳು ಸಾಲ ಪಡೆದಿರುವುದನ್ನು ಇಮ್ರಾನ್ ಖಾನ್ ಕಟುವಾಗಿ ಟೀಕಿಸಿದ್ದಾರೆ. ಹೀಗಿರುವಾಗ ಇದೀಗ ಅವರೇ ದೇಶವನ್ನು ಸಾಲದ ಸುಳಿಯಲ್ಲಿ ಮುಳುಗಿಸಿರುವ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಟಾರ್ಗೆಟ್ ಮಾಡುವ ಅವಕಾಶ ಸಿಕ್ಕಿದೆ. ಇದೇ ಕಾರಣಕ್ಕೆ ಷರೀಫ್ ಅವರ ಹಳೆ ಹೇಳಿಕೆಯನ್ನೇ ಮುಂದಿಟ್ಟುಕೊಂಡು ದಾಳಿ ನಡೆಸುತ್ತಿದ್ದಾರೆ. ಐಎಂಎಫ್‌ಗೆ ಹೋಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇಮ್ರಾನ್ ಖಾನ್(Imran Khan) ಹೇಳುತ್ತಿದ್ದರು. ಈಗ ಆತ ಯಾವಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಕಾಯುತ್ತಿದ್ದೇವೆ ಎಂದು ಷರೀಫ್ ಹೇಳಿದ್ದಾರೆ.


ಇದನ್ನೂ ಓದಿ: Prototype Lickable TV:ಟಿವಿ ಪರದೆಯ ಮೇಲೆ ನೀವು ವಿಕ್ಷೀಸುವ ಆಹಾರದ ಟೇಸ್ಟ್ ಮಾಡಿಸುತ್ತಂತೆ ಈ TV


ಸಾಲದಲ್ಲಿ ಸಿಲುಕಿದ ‘ನಯಾ ಪಾಕಿಸ್ತಾನ’


ಇಮ್ರಾನ್ ಸರ್ಕಾರವು 2018ರಲ್ಲಿ ಅಧಿಕಾರಕ್ಕೆ ಬಂದ ಮೊದಲ 3 ವರ್ಷಗಳಲ್ಲಿ ವಿದೇಶಿ ಸರ್ಕಾರಗಳು ಮತ್ತು ಸಂಸ್ಥೆಗಳಿಂದ $34 ಶತಕೋಟಿ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚಿನ ಸಾಲವನ್ನು ತೆಗೆದುಕೊಂಡಿದೆ. ‘ನಯಾ ಪಾಕಿಸ್ತಾನ್’ ಹೆಸರಿನಲ್ಲಿ ದೇಶದ ಆರ್ಥಿಕತೆಯನ್ನು ಹಾಳು ಮಾಡಿದ ಇಮ್ರಾನ್ ಖಾನ್ ಅವರಂತಹ ಅಸಮರ್ಥರು ದೇಶವನ್ನು ಸಂಕಷ್ಟಕ್ಕೆ ದೂಡಿದ್ದಾರೆಂದು ಷರೀಫ್(Nawaz Sharif) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂವಿಧಾನವನ್ನು ಎಂದಿಗೂ ಸರ್ವೋಚ್ಚ ಎಂದು ಪರಿಗಣಿಸದಿರುವುದು ಮತ್ತು ಪ್ರಮಾಣವಚನವನ್ನು ಎಂದಿಗೂ ಗೌರವಿಸದಿರುವುದು ದೇಶದ ಅವನತಿಗೆ ಕಾರಣ. ಜನರ ಅಭಿಪ್ರಾಯವನ್ನೂ ಒತ್ತೆ ಇಡಲಾಗಿದೆ ಎಂದು ಮಾಜಿ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನವು ಸಮೃದ್ಧಿಯತ್ತ ಸಾಗಲು ಬಯಸಿದರೆ ಹಿಂದಿನ ತಪ್ಪುಗಳಿಂದ ಕಲಿಯುವ ಅವಶ್ಯಕತೆಯಿದೆ ಅಂತಾ ಅವರು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.