ನವದೆಹಲಿ: ಭಾರತ-ಪಾಕ್ ನಡುವಿನ ವಿಚಾರದಲ್ಲಿ ನಾವು ಮಧ್ಯಸ್ಥಿಕೆ ವಹಿಸಿಲ್ಲ, ಆದರೆ ಪ್ರಕ್ಷುಬ್ಧ ಸ್ಥಿತಿ ಕುಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ ಎಂದು ಯುಎಇ ಭಾರತ ರಾಯಭಾರಿ ಅಹ್ಮದ್ ಅಲ್ಬನ್ನಾ ಸೋಮವಾರದಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ ಹಾಗೂ ಪಾಕ್ ನಡುವೆ ನಡೆದಿರುವ ಸಂಘರ್ಷದ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ ಅವರು "ನಾವು ಮಧ್ಯಸ್ಥಿಕೆ ವಹಿಸಿಲ್ಲ, ಇನ್ನು ಮಧ್ಯಸ್ಥಿಕೆ ವಿಚಾರವಾಗಿ ಮಾತನಾಡುವಾಗ, ಎರಡು ಪಕ್ಷಗಳನ್ನು ವಿನಂತಿಸಬೇಕಾಗುತ್ತದೆ. ಆದರೆ ನಾವು ವಿಶೇಷ ಸಂಬಂಧವನ್ನು ಉಭಯ ದೇಶಗಳೊಂದಿಗೆ ಹೊಂದುವ ಮೂಲಕ ಪ್ರಕ್ಷುಬ್ಧ ಸ್ಥಿತಿ ಕುಗ್ಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದೇವೆ. ಎರಡು ದೇಶಗಳ ನಡುವೆ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ನಮ್ಮ ರಾಜಕುಮಾರ್, ಪ್ರಧಾನಿ ಮೋದಿ ಹಾಗೂ ಇಮ್ರಾನ್ ಖಾನ್ ರೊಂದಿಗೆ ಮಾತನಾಡಿದ್ದಾರೆ. ನಮ್ಮ ಪಾತ್ರ ಇಷ್ಟೇ ಎರಡು ದೇಶಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸುವುದು, ಇದರಲ್ಲಿ ಯುಎಇ ಮಹತ್ವದ ಪಾತ್ರ ವಹಿಸಿದೆ" ಎಂದರು.


ಕಳೆದ ಮೂರು ವಾರಗಳಲ್ಲಿ ಅಬುಧಾಬಿ ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್-ನಹ್ಯಾನ್  ಪ್ರಧಾನಿ ಮೋದಿ ಅವರೊಂದಿಗೆ ಎರಡು ಬಾರಿ ಮಾತನಾಡಿದ್ದಾರೆ ಎಂದು ಯುಎಇ ರಾಯಬಾರಿ ಹೇಳಿದರು.  


ಪಾಕ್ ನಲ್ಲಿರುವ ಭಯೋತ್ಪಾದನೆಯನ್ನು ಹೋಗಲಾಡಿಸುವ ಕುರಿತಾಗಿ ಪ್ರಶ್ನಿಸಿದಾಗ ಉತ್ತರಿಸಿದ ಅವರು " ಯಾವುದೇ ನಿರ್ಧಿಷ್ಟ ದೇಶವನ್ನು ವ್ಯಕ್ತಿಯನ್ನು ಉಲ್ಲೇಖಿಸದೆ ಭಯೋತ್ಪಾದನೆಯನ್ನು ಹೋಗಲಾಡಿಸಲು ಎಲ್ಲ ದೇಶಗಳ ಜೊತೆಗೆ ನಾವು ಕಾರ್ಯ ನಿರ್ವಹಿಸುತ್ತೇವೆ. ಆ ಮೂಲಕ ನಮ್ಮ ಪ್ರದೇಶವನ್ನು ಶಾಂತಿಯುತವಾಗಿರಲು ಬಯಸುತ್ತೇವೆ ಎಂದರು.