ವಾಷಿಂಗ್ಟನ್:  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರದಂದು ಮಾತನಾಡುತ್ತಾ  ಉತ್ತರ ಕೊರಿಯಾವು  ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಭಾಗಿಯಾಗಬೇಕೆಂದು ಬಯಸುತ್ತಿದ್ದು, ಆ ಮೂಲಕ  ಎರಡು ಕೊರಿಯಾ ಸೇರಿ ಒಲಂಪಿಕ್ಸ್ ನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  


COMMERCIAL BREAK
SCROLL TO CONTINUE READING

ಮಂಗಳವಾರದಂದು ಮೊದಲ ಮಾತುಕತೆ ನಡೆಸಲು ಸಿದ್ದತೆ ನಡೆಸಿರುವ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ  ಬಗ್ಗೆ ಟ್ರಂಪ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ  ಉತ್ತರ ಕೊರಿಯಾ ದೇಶದ ವಿರುದ್ದ ತೆಗೆದುಕೊಂಡ ಕಠಿಣ ಕ್ರಮಗಳಲ್ಲಿ ತಮ್ಮ ಪಾತ್ರವಿದೆ ಎಂದು ಅಮೇರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ 


ಉಭಯ ದೇಶಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದನ್ನು ಇಚ್ಚಿಸುತ್ತೇನೆ, ಆ ಮೂಲಕ ಬಹುಶಃ  ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯ ಸರಿಹೋಗಬಹುದು , ಹಾಗಾಗಿ ನಾನು ಈ ಎರಡು ದೇಶಗಳ ನಡುವಿನ ಮಾತುಕತೆಗೆ ಬೆಂಬಲ ನೀಡಿದ್ದೇನೆ ಎಂದು ಮೇರಿಲ್ಯಾಂಡ್ನಲ್ಲಿರುವ ಅಧ್ಯಕ್ಷೀಯ ರೆಸಾರ್ಟ್ ಕ್ಯಾಂಪ್ ಡೇವಿಡ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ತಿಳಿಸಿದ್ದಾರೆ.