ನವದೆಹಲಿ: ನೀವು ಅಪರಾಧ (Crime) ಜಗತ್ತಿನ ಬೇರೆ ಬೇರೆ ಕ್ರೈಮ್ ಗಳನ್ನು ನೋಡಿರಬಹುದು. ಕೆಲವು ದೇಶಗಳಲ್ಲಿ ಕಳ್ಳತನ ಮಾಡಿದ್ರೆ, ಕೈ ಕಡಿದು ಬಿಡುತ್ತಾರೆ. ಇನ್ನು ಕೆಲವು ದೇಶಗಳಲ್ಲಿ ರೇಪ್ (Rape) ಮಾಡಿದ್ರೆ ನಾಲ್ಕು ಬೀದಿ ಸೇರುವಲ್ಲಿ ತಲೆ ತೆಗೆದು ಬಿಡುತ್ತಾರೆ.  ಕೆಲವು ದೇಶಗಳಲ್ಲಿ ಕಾಮನ್ ಎನ್ನುವ ತಪ್ಪುಗಳೇ ಅಪರಾಧಗಳಾಗಿ ಬಿಡುತ್ತವೆ. ಈ ದೇಶದಲ್ಲಿ ಕಾರಲ್ಲಿ ಇಂಧನ ಖಾಲಿಯಾದರೆ ಅದು ಮಹಾಪರಾಧ..!ಅದಕ್ಕೆ ಶಿಕ್ಷೆ, ದಂಡ ಎರಡೂ ಕಾಯ್ದಿದೆ. ಯಾವುದೀ ದೇಶ..!?


COMMERCIAL BREAK
SCROLL TO CONTINUE READING

ವಾಹನದಲ್ಲಿ ಇಂಧನ ಖಾಲಿಯಾದರೆ ಅದು ಮಹಾಪರಾಧ..!
ಈ ಪ್ರಪಂಚದಲ್ಲಿ ಹೀಗೂ ಒಂದು ಕಾನೂನು ಇದೆ. ಜರ್ಮನಿ(Germany) ಯಲ್ಲಿ ನೀವು ಎಷ್ಟೆ ಸ್ಫೀಡಲ್ಲಿ ಬೇಕಾದರೆ ಕಾರು ಓಡಿಸಬಹುದು. ಅದು ಅಪರಾಧವಲ್ಲ. ಆದರೆ, ನೀವು ಕಾರು ಓಡಿಸುವಾಗ ಇಂಧನ (Fuel)  ಖಾಲಿಯಾಗಬಾರದು. ಹಾಗೇನಾದರೂ ಆಯಿತೆನ್ನಿ. ಅದು ಮಹಾಪರಾಧ.  ಈ ಅಪರಾಧಕ್ಕಾಗಿ ನಿಮಗೆ ಶಿಕ್ಷೆಯಾಗಬಹುದು. ಅಥವಾ ದಂಡ ನೀಡಬೇಕಾಗಬಹುದು. 


ಇದನ್ನೂ ಓದಿ : Alibaba Founder Jack Ma Found: ಎರಡು ತಿಂಗಳು ಎಲ್ಲಿದ್ದರು ಗೊತ್ತಾ Jack Ma?


ಪೋನಿನಲ್ಲಿ ಹಲೋ ಎನ್ನುವಂತಿಲ್ಲ..!
ಜರ್ಮನಿಯಲ್ಲಿ ಇನ್ನೊಂದು ವಿಚಿತ್ರ ಕಾನೂನು (Law) ಚಾಲ್ತಿಯಲ್ಲಿದೆ. ನಾವೆಲ್ಲಾ ಫೋನ್ ಎತ್ತಿದ ತಕ್ಷಣ ಹಲೋ ಹೇಳಿ ಬಿಡುತ್ತೇವೆ. ನಿದ್ರೆ ಮಂಪರಿನಲ್ಲಿರುವಾಗಲೂ ಹಲೋ ಹೇಳಲು ಮರೆಯುವುದಿಲ್ಲ. ಆದರೆ, ಜರ್ಮನಿಯಲ್ಲಿ ಹಾಗೆ ಮಾಡುವಂತಿಲ್ಲ. ಪೋನ್ (Phone)ಎತ್ತಿ ಹಲೋ ಹೇಳಿದರೆ ಅದು ತಪ್ಪು. ಪೋನ್ ಎತ್ತಿ ನಿಮ್ಮ ಹೆಸರು ಮೊದಲು ಹೇಳಬೇಕು. ಮುಂದೆ ಮಾತು ಶುರುಮಾಡಬೇಕು. 


ಬರ್ತ್ ಡೇಗೆ ಮೊದಲೇ ವಿಶ್ ಮಾಡೋದು ಅಶುಭ :
ಇನ್ನೊಂದು ನಂಬಿಕೆ ಜರ್ಮನಿಯಲ್ಲಿ ಚಾಲ್ತಿಯಲ್ಲಿದೆ. ನಾವೆಲ್ಲಾ ಆಪ್ತರ ಬರ್ತ್ ಡೇ ಮರೆತುಬಿಟ್ಟು ಪಜೀತಿ ಪಟ್ಟಿದ್ದು ಇದೆ. ಹಾಗೇ ಆಗೋದೇ ಬೇಡಾ ಅನ್ನೋ ದೃಷ್ಟಿಯಿಂದ ಅಡ್ವಾನ್ಸ್ ವಿಶ್ (Birthday Wishes) ಮಾಡಿ ಬಿಡುತ್ತೇವೆ ಆದರೆ ಜರ್ಮನಿಯವರು ಹಾಗೆ ಮಾಡುವುದಿಲ್ಲ. ಯಾಕೆಂದರೆ, ಅಡ್ವಾನ್ಸ್ ವಿಶ್ ಮಾಡೋದು ಅಶುಭ ಎಂದು ಜರ್ಮನಿಯಲ್ಲಿ ಪರಿಗಣಿಸಲಾಗುತ್ತದೆ.  ಹಾಗಾಗಿ ಹುಟ್ಟುಹಬ್ಬದ ದಿನವೇ ವಿಶ್ ಮಾಡಬೇಕು..


ಇದನ್ನೂ ಓದಿ : Holocaust On Earth-ಆಗಸದಿಂದ ಭೂಮಿಗಪ್ಪಳಿಸಲಿವೆ ಬೆಂಕಿ ಚೆಂಡುಗಳು, ಇದು ಭೂ- ವಿನಾಶದ ಸಂಕೇತವೇ?


ಯಾವತ್ತಾದರೂ ಜರ್ಮನಿಗೆ ಹೋಗುವ ಸನ್ನಿವೇಶ ಬಂದಾಗ ಇವೆಲ್ಲಾ ನೆನಪಿನಲ್ಲಿಡಿ. ಜರ್ಮನ್ ಮಿತ್ರರಿಗೆ ಯಾವತ್ತಿಗೂ ಅಡ್ವಾನ್ಸ್ ಬರ್ತ್ ಡೇ ವಿಶ್ ಮಾಡಲು ಹೋಗಬೇಡಿ. ನೆನಪಿರಲಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.