ನಿಗೂಢ ಬಾಹ್ಯಾಕಾಶದಲ್ಲಿ ನಿಜವಾಗಿಯೂ ʼಬಿಳಿ ರಂಧ್ರʼ ಇದೆಯೇ..! ಇಲ್ಲಿದೆ ನೋಡಿ ಉತ್ತರ
ಬಿಳಿ ರಂಧ್ರ ಎಂಬ ಪರಿಕಲ್ಪನೆಯನ್ನು ಮೊದಲಿಗೆ ಬ್ರಿಟಿಷ್ ಗಣಿತಜ್ಞ ರೋಜರ್ ಪೆನ್‌ರೋಸ್ ಎಂಬವರು 1965ರಲ್ಲಿ ಪ್ರಸ್ತಾಪಿಸಿದರು. ಅವರು ಕಪ್ಪು ಕುಳಿಯನ್ನು ವಿವರಿಸುವ ಸಾಪೇಕ್ಷತಾ ಸಿದ್ಧಾಂತಕ್ಕೆ ಪರಿಹಾರವಾಗಿ ಇದನ್ನು ಸೂಚಿಸಿದ್ದರು. ಆದರೆ, ಬಿಳಿ ರಂಧ್ರ ಎನ್ನುವುದು ಇಲ್ಲಿಯ ತನಕ ಎಲ್ಲಿಯೂ ಕಂಡುಬಂದಿಲ್ಲ.
White hole : ಬಿಳಿ ರಂಧ್ರ ಎನ್ನುವುದು ಬಾಹ್ಯಾಕಾಶ/ಸಮಯದ ಒಂದು ಕಾಲ್ಪನಿಕ ಪ್ರದೇಶವಾಗಿದ್ದು, ಅದನ್ನು ಹೊರಗಿನಿಂದ ಪ್ರವೇಶಿಸಲು ಸಾಧ್ಯವಿಲ್ಲ. ಆದರೆ ಶಕ್ತಿ, ವಸ್ತು, ಬೆಳಕು, ಮತ್ತು ಮಾಹಿತಿಗಳು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಬಿಳಿ ರಂಧ್ರ ಎನ್ನುವುದು ಕಪ್ಪು ಕುಳಿಗೆ ವಿರುದ್ಧವಾಗಿರುತ್ತದೆ.
ಬಿಳಿ ರಂಧ್ರ ಎಂಬ ಪರಿಕಲ್ಪನೆಯನ್ನು ಮೊದಲಿಗೆ ಬ್ರಿಟಿಷ್ ಗಣಿತಜ್ಞ ರೋಜರ್ ಪೆನ್‌ರೋಸ್ ಎಂಬವರು 1965ರಲ್ಲಿ ಪ್ರಸ್ತಾಪಿಸಿದರು. ಅವರು ಕಪ್ಪು ಕುಳಿಯನ್ನು ವಿವರಿಸುವ ಸಾಪೇಕ್ಷತಾ ಸಿದ್ಧಾಂತಕ್ಕೆ ಪರಿಹಾರವಾಗಿ ಇದನ್ನು ಸೂಚಿಸಿದ್ದರು. ಆದರೆ, ಬಿಳಿ ರಂಧ್ರ ಎನ್ನುವುದು ಇಲ್ಲಿಯ ತನಕ ಎಲ್ಲಿಯೂ ಕಂಡುಬಂದಿಲ್ಲ. ಅವುಗಳ ಇರುವಿಕೆ ಇಂದಿಗೂ ಕೇವಲ ಒಂದು ಊಹೆ, ಕಲ್ಪನೆಯಷ್ಟೇ ಆಗಿದೆ.
ಇದನ್ನೂ ಓದಿ:ಮಿಯಾಮಿ ಫ್ಲೈಟ್‌ನಲ್ಲಿನ ಬಾತ್‌ರೂಮ್‌ನಲ್ಲಿ ಪೈಲಟ್ ಸಾವು.!...ಮುಂದೇನಾಯ್ತು ಗೊತ್ತಾ?
ಬಿಳಿ ರಂಧ್ರಗಳು ಹೇಗೆ ಕಾರ್ಯಾಚರಿಸುತ್ತವೆ..? : ಒಂದು ಬೃಹತ್ ನಕ್ಷತ್ರ ಅದರಷ್ಟಕ್ಕೇ ಕುಸಿದು, ಕಪ್ಪು ಕುಳಿಯನ್ನು ನಿರ್ಮಿಸಿದಾಗ ಬಿಳಿ ರಂಧ್ರ ಉಂಟಾಗುತ್ತದೆ. ಆದರೆ, ಎಲ್ಲ ದ್ರವ್ಯಗಳು ಮತ್ತು ಶಕ್ತಿಗಳು ಕಪ್ಪು ಕುಳಿಯಿಂದ ಹೀರಿಕೊಳ್ಳಲ್ಪಡುವ ಬದಲು, ಒಂದಷ್ಟು ದ್ರವ್ಯಗಳು, ಶಕ್ತಿ ಬಾಹ್ಯಾಕಾಶಕ್ಕೆ ಚಿಮ್ಮಲ್ಪಡುತ್ತವೆ. ಈ ರೀತಿ ಚಿಮ್ಮಲ್ಪಟ್ಟ ದ್ರವ್ಯಗಳು ಮತ್ತು ಶಕ್ತಿ ಬಿಳಿ ರಂಧ್ರವನ್ನು ಉಂಟುಮಾಡುತ್ತವೆ. ಈ ರೀತಿ ಬಿಳಿ ರಂಧ್ರದಿಂದ ಚಿಮ್ಮುವ ವಸ್ತುಗಳು ಮತ್ತು ಶಕ್ತಿ ಅತ್ಯಂತ ವೇಗವಾಗಿ ಚಲಿಸುತ್ತಿದ್ದು, ಅದರಲ್ಲಿ ಅತ್ಯಂತ ಶಕ್ತಿಶಾಲಿ ಕಣಗಳಾದ ಫೋಟಾನ್‌ಗಳು, ಇಲೆಕ್ಟ್ರಾನ್‌ಗಳು ಮತ್ತು ಪ್ರೋಟಾನ್‌ಗಳಿರುತ್ತವೆ.
ಒಂದು ವೇಳೆ ನಾವು ಬಿಳಿ ರಂಧ್ರವನ್ನು ಪ್ರವೇಶಿಸಿದರೆ ಏನಾಗುತ್ತದೆ? : ಒಂದು ವೇಳೆ ನಾವು ಏನಾದರೂ ಒಂದು ಬಿಳಿ ರಂಧ್ರಕ್ಕೆ ಪ್ರವೇಶಿಸಿದರೆ, ಅದರ ಅಸಾಧಾರಣ ಗುರುತ್ವಾಕರ್ಷಣಾ ಶಕ್ತಿ ನಮ್ಮನ್ನು ನಜ್ಜುಗುಜ್ಜು ಮಾಡಿಬಿಡುತ್ತದೆ. ಅದರೊಡನೆ, ಅತ್ಯಂತ ಹೆಚ್ಚಿನ ಶಕ್ತಿ ಹೊಂದಿರುವ ಕಣಗಳು ನಮ್ಮನ್ನು ಅಪ್ಪಳಿಸಿ ನಮ್ಮನ್ನು ಕೊಂದು ಹಾಕುವ ಸಾಧ್ಯತೆಗಳಿವೆ. ಆದರೆ, ಇನ್ನೊಂದು ಸಾಧ್ಯತೆಯೂ ಇದ್ದು, ನಾವು ಬಿಳಿ ರಂಧ್ರದ ಮೂಲಕ ಬಾಹ್ಯಾಕಾಶ ಮತ್ತು ಸಮಯದ ಇನ್ನೊಂದು ಪ್ರದೇಶಕ್ಕೆ, ಅಥವಾ ಇನ್ನೊಂದು ಜಗತ್ತಿಗೆ ಒಯ್ಯಲ್ಪಡಬಹುದು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ 290 ರೂಪಾಯಿ!
ಬಿಳಿ ರಂಧ್ರಗಳು ನಿಜಕ್ಕೂ ಇವೆಯೇ? : ಬಿಳಿ ರಂಧ್ರಗಳ ಇರುವಿಕೆ ಇಂದಿಗೂ ಚರ್ಚೆಯ ವಿಚಾರವೇ ಆಗಿದೆ. ಕೆಲವು ವಿಜ್ಞಾನಿಗಳು ಅದರ ಇರುವಿಕೆ ಸಾಧ್ಯವಿದೆ ಎಂದು ನಂಬಿದ್ದರೆ, ಇತರರು ಬಿಳಿ ರಂಧ್ರಗಳು ಸಾಪೇಕ್ಷತಾ ಸಿದ್ಧಾಂತಕ್ಕೆ ಸಂಬಂಧಿಸಿದ ಗಣಿತದ ಸೂತ್ರವಷ್ಟೇ ಎನ್ನುತ್ತಾರೆ. ಬಿಳಿ ರಂಧ್ರಗಳ ಇರುವಿಕೆಯನ್ನು ಬೆಂಬಲಿಸಲು ಯಾವುದೇ ಸಂಕೀರ್ಣ ಪುರಾವೆಗಳು ಲಭ್ಯವಿಲ್ಲ. ಹಾಗೆಂದು ಬಿಳಿ ರಂಧ್ರಗಳು ಖಂಡಿತವಾಗಿಯೂ ಇಲ್ಲವೆಂದು ವಾದಿಸಲು ಬೇಕಾದ ಪುರಾವೆಗಳೂ ನಮ್ಮ ಮುಂದಿಲ್ಲ.
ಬಿಳಿ ರಂಧ್ರಗಳ ಪರಿಣಾಮಗಳೇನು? : ಒಂದು ವೇಳೆ ಬಿಳಿ ರಂಧ್ರಗಳು ನಿಜವಾಗಿಯೂ ಇವೆ ಎಂದಾದರೆ, ಅವುಗಳು ಜಗತ್ತಿನ ಕುರಿತಾದ ನಮ್ಮ ಅರ್ಥೈಸುವಿಕೆಯ ಮೇಲೆ ಗಂಭೀರ ಪರಿಣಾಮ ಹೊಂದಲಿವೆ. ಹೊಸ ನಕ್ಷತ್ರಗಳು ಮತ್ತು ಗ್ಯಾಲಕ್ಸಿಗಳ ನಿರ್ಮಾಣಕ್ಕೆ ಅವುಗಳು ಕಾರಣವಾಗಿರಬಹುದು. ಅಥವಾ ಇತರ ಜಗತ್ತುಗಳೆಡೆಗೆ ಪ್ರಯಾಣ ಬೆಳೆಸಲು ಅವುಗಳು ಮಾರ್ಗವಾಗಿರಬಹುದು. ಅದರೊಡನೆ, ಬಿಳಿ ರಂಧ್ರಗಳ ಮೂಲಕ ಅಪರಿಮಿತವಾದ ಶಕ್ತಿ ಸಂಪನ್ಮೂಲವನ್ನು ಹೊಂದಲು ಸಾಧ್ಯವಾಗಬಹುದು. ಆದರೆ, ನಮ್ಮ ಮುಂದೆ ಬಿಳಿ ರಂಧ್ರಗಳ ಇರುವಿಕೆಯ ಕುರಿತು ಸ್ಪಷ್ಟವಾದ ಪುರಾವೆಗಳು ಲಭ್ಯವಾಗುವ ತನಕ ಈ ಬಿಳಿ ರಂಧ್ರಗಳು ಕೇವಲ ಒಂದು ರಹಸ್ಯವಾಗಿಯೇ ಉಳಿಯಲಿವೆ.
ಇದನ್ನೂ ಓದಿ: ಪಾಕಿಸ್ತಾನ: ಇಮ್ರಾನ್ ಖಾನ್‌ಗೆ ದೊಡ್ಡ ಹಿನ್ನಡೆ, ಮಾಜಿ ಪ್ರಧಾನಿಯ 9 ಜಾಮೀನು ಅರ್ಜಿ ತಿರಸ್ಕಾರ
ಬಿಳಿ ರಂಧ್ರಗಳು ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಾಹಿತ್ಯ ರಚಿಸುವವರ ಗಮನ, ಆಸಕ್ತಿಗಳನ್ನು ಸಮಾನವಾಗಿಯೇ ಆಕರ್ಷಿಸಿವೆ. ಅವುಗಳ ಇರುವಿಕೆ ಇಂದಿಗೂ ಒಂದು ಚರ್ಚೆಯ ವಿಚಾರವೇ ಆಗಿದ್ದರೂ, ಅವುಗಳು ಈ ಜಗತ್ತಿನ ಒಂದು ವಿಚಿತ್ರ ಮತ್ತು ಅದ್ಭುತ ಸಾಧ್ಯತೆಗಳ ಚಿತ್ರಣವನ್ನು ಕಟ್ಟಿಕೊಡುತ್ತವೆ ಎನ್ನಬಹುದು. ಅವುಗಳ ಇರುವಿಕೆಯ ಕುರಿತು ಸ್ಪಷ್ಟ ಸಾಕ್ಷಿ ಲಭಿಸುವ ತನಕ ಈ ವಾದಗಳು ಮುಂದುವರಿಯಲಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.