Whatsapp : ಇಂದಿನ ಯುಗದಲ್ಲಿ WhatsApp ಮಾನವನ ಜೀವನದ ಒಂದು ಭಾಗವಾಗಿದೆ. ನಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಕಚೇರಿ ಕೆಲಸಗಳಿಗೆ WhatsApp ಬಳಕೆ ಅನಿವಾರ್ಯವಾಗಿದೆ. ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಸೆಕೆಂಡುಗಳಲ್ಲಿ ಹಂಚಿಕೊಳ್ಳಲು ಈ ಅಪ್ಲಿಕೇಶನ್ ತುಂಬಾ ಉಪಯುಕ್ತವಾಗಿದೆ. ಪ್ರಸ್ತುತ ವಿಶ್ವಾದ್ಯಂತ 300 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದಾರೆ. ನಮ್ಮ ಭಾರತ ದೇಶದಲ್ಲಿ ಸುಮಾರು 54 ಕೋಟಿ ಜನರು ಈ ಆಪ್ ಬಳಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ರಷ್ಯಾ ಸರ್ಕಾರ 2025ರ ಆರಂಭದಲ್ಲಿ ವಾಟ್ಸಾಪ್ ಅನ್ನು ನಿಷೇಧಿಸಲಿದೆ ಎಂಬ ಊಹಾಪೋಹಗಳಿವೆ. ಸೆನೆಟರ್ ಆರ್ಟಿಯೋಮ್ ಶೇಕಿನ್ (ಆರ್ಟಿಯೋಮ್ ಶೇಕಿನ್) ಮಾಡಿದ ಕಾಮೆಂಟ್‌ಗಳು ಈ ಊಹಾಪೋಹಗಳಿಗೆ ದಾರಿ ಮಾಡಿ ಕೊಟ್ಟಿದೆ. ಸಂದರ್ಶನವೊಂದರಲ್ಲಿ ಅವರು, ತಮ್ಮ ದೇಶದಲ್ಲಿ ಅಪ್ಲಿಕೇಶನ್ ಅನ್ನು ಬಳಸಬೇಕಾದರೆ, ಅಲ್ಲಿನ ನಿಯಮಗಳನ್ನು ಅನುಸರಿಸಬೇಕು, ಇಲ್ಲದಿದ್ದರೆ ಈ ಅಪ್ಲಿಕೇಶನ್‌ ಅನ್ನು ನಿಷೇಧಿಸಲಾಗುವುದು ಎಂದು ಎಚ್ಚರಿಸಿದ್ದರು. ಆ್ಯಪ್ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳುವ ಸರ್ಕಾರದ ಮನವಿಗೆ ವಾಟ್ಸಾಪ್ ಒಪ್ಪಿಗೆ ನೀಡಿಲ್ಲ ಎಂದು ತೋರುತ್ತದೆ.. ಅದಕ್ಕೆ ಸರ್ಕಾರಿ ಈ ನಿರ್ಧಾರಕ್ಕೆ ಬಂದಿರಬೇಕು..


ಇದನ್ನೂ ಓದಿ:ಜೈಲಿನಿಂದ ರಿಲೀಸ್‌ ಆಗುತ್ತಿದ್ದಂತೆಯೇ ಡ್ರೋನ್‌ ಪ್ರತಾಪ್‌ ಆಕ್ರೋಶ!


ರಷ್ಯಾ ಸರ್ಕಾರವು 2022 ರಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಮೆಟಾ.. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮೂಲ ಕಂಪನಿಯಾಗಿದೆ. ಈ ಕಂಪನಿಗೆ ಸಂಬಂಧಿಸಿದ ಎರಡು ಪ್ಲಾಟ್‌ಫಾರ್ಮ್‌ಗಳನ್ನು ರಷ್ಯಾ ಈಗಾಗಲೇ ನಿಷೇಧಿಸಿದೆ. ಮುಂದಿನ ವರ್ಷ ವಾಟ್ಸಾಪ್ ಅನ್ನು ಸಹ ನಿಷೇಧಿಸಿಲಿದೆ ಎಂದು ಹೇಳಲಾಗುತ್ತಿದೆ.. ರಷ್ಯಾದಲ್ಲಿ ಪ್ರಸ್ತುತ 6 ಕೋಟಿ ವಾಟ್ಸಾಪ್ ಬಳಕೆದಾರರಿದ್ದಾರೆ.


ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತ ಕೇಂದ್ರ ಸರ್ಕಾರ ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದಿತು. ಅಂದಿನಿಂದ, ಸರ್ಕಾರವು ನಕಲಿ WhatsApp ಖಾತೆಗಳ ಮೇಲೆ ಕೇಂದ್ರೀಕರಿಸಿದೆ. ಒಟ್ಟು 75 ಲಕ್ಷದ 38 ಸಾವಿರ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಇದು ನಿರಂತರವಾಗಿ ಮಂದುವರೆದರೆ ರಷ್ಯಾದಂತೆ ಭಾರತದಲ್ಲಿಯೂ ಮುಂದಿನ ವರ್ಷ ವಾಟ್ಸಾಪ್‌ನಲ್ಲಿ ಬ್ಯಾನ್‌ ಆಗಬಹದು..


ಇದನ್ನೂ ಓದಿ:ಕಾಂಗ್ರೆಸ್‌ ಸರ್ಕಾರ ಮತ್ತು ಪೊಲೀಸರ ವಿರುದ್ಧ ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ!


ಇದಕ್ಕೆ ಬಲವಾದ ಕಾರಣಗಳೂ ಸಹ ಇವೆ.. ಆಗೊಮ್ಮೆ ಈಗೊಮ್ಮೆ ನಕಲಿ ಗುಂಪುಗಳನ್ನು ಸೃಷ್ಟಿ ಮಾಡುವ ಖದೀಮರು... ನೆಟ್ಟಿಗರಿಗೆ ಹಣದ ಭರವಸೆ ತೋರಿಸಿ ಬೆಟ್ಟಿಂಗ್ ಬಲೆಗೆ ಬೀಳಿಸುತ್ತಿದ್ದಾರೆ. ಇಂತಹ ಅಕ್ರಮಗಳು ಹೆಚ್ಚಾಗಿ ಚೀನಾದಿಂದ ನಡೆಯುತ್ತಿದ್ದು, ಕೇಂದ್ರವು ಅವುಗಳ ಮೇಲೆ ನಿಗಾ ಇರಿಸಿದೆ. ವಾಟ್ಸಾಪ್ ಕೂಡ ಇಂತಹವುಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.. ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.