ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಮಧ್ಯೆ ಬಹುತೇಕ ಜನರು WhatsApp ಬಳಸಿ ತಮ್ಮ ಬಂಧು-ಮಿತ್ರರ ಜೊತೆಗೆ ಸಮಯ ಕಳೆಯುವಲ್ಲಿ ನಿರತರಾಗಿದ್ದಾರೆ. ವಾಟ್ಸ್ ಆಪ್ ನಲ್ಲಿ ವಾಯ್ಸ್ ಕಾಲಿಂಗ್ ಹಾಗೂ ವಿಡಿಯೋ ಕಾಲಿಂಗ್ ವೈಶಿಷ್ಟ್ಯಗಳು ಸಾಕಷ್ಟು ಜನಪ್ರೀಯವಾಗಿವೆ.  ಇದೀಗ ವಾಟ್ಸ್ ಆಪ್ ಇದರಲ್ಲಿ ಒಂದು ಹೊಸ ವೈಶಿಷ್ಟ್ಯವನ್ನು ಜೋಡಿಸಿದೆ.  ತಮ್ಮ ಚಾಟಿಂಗ್ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ವಾಟ್ಸ್ ಆಪ್ ಅಂಡ್ರಾಯಿಡ್ ಹಾಗೂ ಐಓಎಸ್ ಬಳಕೆದಾರರು ಇನ್ಮುಂದೆ ಗ್ರೂಪ್ ಆಡಿಯೋ ಅಥವಾ ವಿಡಿಯೋ ಕಾಲಿಂಗ್ ನಲ್ಲಿ ಏಕಕಾಲಕ್ಕೆ 8 ಜನರ ಜೊತೆಗೆ ಕನೆಕ್ಟ್ ಆಗಬಹುದಾಗಿದೆ.


COMMERCIAL BREAK
SCROLL TO CONTINUE READING

ಮೊದಲು ಕೇವಲ 4 ಬಳಕೆದಾರರಿಗೆ ಮಾತ್ರ ಇದರಲ್ಲಿ ಅವಕಾಶ ಇತ್ತು
ಈ ನೂತನ ವೈಶಿಷ್ಟ್ಯ ಬರುವುದಕ್ಕೂ ಮೊದಲು ವಾಟ್ಸ್ ಆಪ್ ಗ್ರೂಪ್ ನಲ್ಲಿ ಅತ್ಯಧಿಕ 4 ಸದಸ್ಯರು ಮಾತ್ರ ಏಕಕಾಲಕ್ಕೆ ಕನೆಕ್ಟ್ ಆಗಬಹುದಾಗಿತ್ತು. ವಾಟ್ಸ್ ಆಪ್ ಅಪ್ಡೇಟ್ ಅನ್ನು ಟ್ರ್ಯಾಕ್ ಮಾಡುವ ಚೀನಾದ ಜನಪ್ರೀಯ ತಂತ್ರಜ್ಞಾನದ ವೆಬ್ ಸೈಟ್ 'ಬಿಟಾ ಇನ್ಫೋ' ಟ್ವಿಟ್ಟರ್ ಅಕೌಂಟ್ ಮೇಲೆ ಈ ಮಾಹಿತಿ ಹಂಚಿಕೊಳ್ಳಲಾಗಿದೆ.


ಭಾರತೀಯ ಬಳಕೆದಾರರಿಗೂ ಸಿಗಲಿದೆ ಈ ಸೌಲಭ್ಯ
ಇತ್ತೀಚೆಗಷ್ಟೇ WhatsApp ತನ್ನ ಬೀಟಾ ಅಪ್ಡೇಟ್ ನಲ್ಲಿ ಈ ಕುರಿತು ಹೇಳಿಕೊಂಡಿದ್ದು, ಕಂಪನಿ ತನ್ನ ಎರಡು ಶತಕೋಟಿ ಬಳಕೆದಾರರಿಗೆ ಆಡಿಯೋ ಅಥವಾ ವಿಡಿಯೋ ಗ್ರೂಪ್ ಕಾಲ್ ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ ಎಂದು ಬಹಿರಂಗಪಡಿಸಿತ್ತು. ಅಷ್ಟೇ ಅಲ್ಲ ಇದರಲ್ಲಿ ಭಾರತದ 400 ದಶಲಕ್ಷಕ್ಕೂ ಅಧಿಕ ಜನರೂ ಕೂಡ ಶಾಮೀಲಾಗಿದ್ದಾರೆ ಎಂದಿತ್ತು.


ಇದಕ್ಕಾಗಿ ನಿಮ್ಮ WhatsApp ಖಾತೆಯನ್ನು ಅಪ್ಡೇಟ್ ಮಾಡಬೇಕು 
ಈ ಹೊಸ ಅಪ್ಡೇಟ್ ಪಡೆಯಲು ಐಓಎಸ್ ಬಳಕೆದಾರರು ಟೆಸ್ಟ್ ಫ್ಲೈಟ್ ನಿಂದ 2.20.50.25 ಹಾಗೂ ಅಂಡ್ರಾಯಿಡ್ ಬಳಕೆದಾರರು ಗೂಗಲ್ ಪ್ಲೇ ಸ್ಟಾರ್ ನಿಂದ 2.20.50.25 ಬೀಟಾ ಆವೃತ್ತಿಯನ್ನು ಇನ್ಸ್ಟಾಲ್ ಮಾಡಬೇಕು.