ನವದೆಹಲಿ: ಅಮೇರಿಕನ್ ಭಾರತೀಯಳಾದ ಹರಿಣಿ ಲೋಗನ್ ಈಗ ಈ ವರ್ಷದ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಗೆಲ್ಲುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಟ್ವೀಟ್ ಪ್ರಕಾರ, 14 ವರ್ಷ ವಯಸ್ಸಿನ ವಿದ್ಯಾರ್ಥಿನಿ ಹರಿಣಿ ಲೋಗನ್ ಸ್ಪೆಲ್-ಆಫ್ ಸಮಯದಲ್ಲಿ 22 ಪದಗಳನ್ನು ಯಶಸ್ವಿಯಾಗಿ ಉಚ್ಚರಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ 13 ಮತ್ತು 18 ರ ಸುತ್ತುಗಳ ನಡುವೆ, ಅಂತಿಮ ಇಬ್ಬರು ಸ್ಪರ್ಧಿಗಳಾದ ವಿಕ್ರಮ್ ರಾಜು ಮತ್ತು ಹರಿಣಿ ಲೋಗನ್ ಅವರಿಗೆ ಉಚ್ಚರಿಸಲು ತುಂಬಾ ಕಠಿಣ ಪದಗಳನ್ನು ನೀಡಲಾಯಿತು.ಇದಕ್ಕಾಗಿ ಅವರಿಗೆ 90 ಸೆಕೆಂಡ್ ಗಳಲ್ಲಿ ಹೆಚ್ಚಿನ ಪದಗಳನ್ನು ನೀಡಲು ಅವಕಾಶ ನೀಡಲಾಯಿತು.ಆಗ ಹರಿಣಿ ಲೋಗನ್ ಸುಮಾರು 22 ಪದಗಳನ್ನು ಯಶಸ್ವಿಯಾಗಿ ಉತ್ತರಿಸುವ ಮೂಲಕ  ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.