ನವದೆಹಲಿ: ಜಪಾನಿನ ಪೊಲೀಸರು ಶುಕ್ರವಾರದಂದು ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡಿಕ್ಕಿ ಬಂಧಿಸಿದ ಶಂಕಿತನನ್ನು ನಾರಾ ನಗರದ ನಿವಾಸಿ 41 ವರ್ಷದ ಟೆಟ್ಸುಯಾ ಯಮಗಾಮಿ ಎಂದು ಗುರುತಿಸಿದ್ದಾರೆ. ಪೊಲೀಸರು ದಾಳಿಕೋರನನ್ನು ಬಂಧಿಸಿದ್ದು, ಘಟನಾ ಸ್ಥಳದಿಂದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


COMMERCIAL BREAK
SCROLL TO CONTINUE READING

ಶಂಕಿತ ಶೂಟರ್‌ನನ್ನು ನರ ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಅವನೇ ಬಂದೂಕನ್ನು ತಯಾರಿಸಿದ್ದಾನೆಂದು ತೋರುತ್ತಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಜಪಾನ್‌ನ ಸಾರ್ವಜನಿಕ ಪ್ರಸಾರಕ ಸಂಸ್ಥೆ ಎನ್ಎಚ್ಕೆ ವರದಿ ಮಾಡಿದೆ.ಅಬೆ ಅವರನ್ನು ಹತ್ಯೆಗೈದಿರುವ ವ್ಯಕ್ತಿ ಗುಂಡಿನ ದಾಳಿ ನಡೆಸಿದ ತಕ್ಷಣ ಪರಾರಿಯಾಗದೆ ಹಾಗೆಯೇ ಸ್ಥಳದಲ್ಲಿ ನಿಂತಿದ್ದನು ಎಂದು ಸುದ್ದಿ ಮೂಲಗಳು ತಿಳಿಸಿವೆ.


ಇದನ್ನೂ ಓದಿ: Shinzo Abe: ಜಪಾನ್‌ ಮಾಜಿ ಪಿಎಂ ಶಿಂಜೊ ಅಬೆ ಗೌರವಾರ್ಥ ನಾಳೆ ಭಾರತದಲ್ಲಿ ಶೋಕಾಚರಣೆ


ಈ ವ್ಯಕ್ತಿಯು 2005 ರವರೆಗೂ ಮೂರು ವರ್ಷಗಳ ಕಾಲ ಸಮುದ್ರದ ಸ್ವಯಂ ರಕ್ಷಣಾ ಪಡೆಯಲ್ಲಿ ಕೆಲಸ ಮಾಡಿದ್ದನು ಎನ್ನಲಾಗಿದೆ.ಜಪಾನ್‌ನ ಸಂಸತ್ತಿನ ಮೇಲ್ಮನೆಗೆ ಭಾನುವಾರದ ಚುನಾವಣೆಗೆ ಮುನ್ನ ಪಶ್ಚಿಮ ಜಪಾನಿನ ನಗರವಾದ ನಾರಾದಲ್ಲಿ ಶಿಂಜೊ ಅಬೆ ಬೆಳಿಗ್ಗೆ 11.30ಕ್ಕೆ ಪ್ರಚಾರದ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ.ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಲಿಸಲಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.


ಶಿಂಜೋ ಅಬೆ ಅವರ ಮೇಲೆ ಟೆಟ್ಸುಯಾ ಯಮಗಾಮಿ ಗುಂಡು ಹಾರಿಸಿದ್ದೇಕೆ? 


ಸ್ಥಳೀಯ ವರದಿಗಳ ಪ್ರಕಾರ ಶಂಕಿತನು ಅಬೆ ಅವರ ನೀತಿಗಳ ವಿರೋಧಿಯಾಗಿದ್ದನು, ಹಾಗಾಗಿ ಅಬೆ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದನು ಎನ್ನಲಾಗಿದೆ.ಇದೆ ವೇಳೆ ಈಗ, ತೆತ್ಸುಯಾ ಯಮಗಾಮಿ ಅವರ ಮನೆಯಲ್ಲಿ ಸ್ಫೋಟಕಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.


ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಯಾಗಿದ್ದು ಹೇಗೆ?


ಆರಂಭಿಕ ಮಾಧ್ಯಮ ವರದಿಗಳು, ಅಬೆ ಅವರ ಎದೆಗೆ ಗುಂಡು ಹಾರಿಸಲಾಗಿದೆ, ಆದರೆ ಆರಂಭದಲ್ಲಿ ಇದನ್ನು ಹೃದಯ ಶ್ವಾಸನಾಳದ ಸ್ತಂಭನ ಭಾವಿಸಲಾಗಿತ್ತು.ಅಬೆ ಅವರಿಗೆ ಗುಂಡು ಹಾರಿಸಿದ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಅಬೆ ಜಾಗೃತರಾಗಿದ್ದರು ಮತ್ತು ಸ್ಪಂದಿಸುತ್ತಿದ್ದರು ಎಂದು ಸುದ್ದಿ ಮೂಲಗಳು ಹೇಳಿವೆ. ಅವರ ಮೇಲೆ ಗುಂಡು ಹಾರಿಸಿದ ಸಂದರ್ಭದಲ್ಲಿ ಈ ಭಾನುವಾರದಂದು ನಿಗದಿಯಾಗಿದ್ದ ಹೌಸ್ ಆಫ್ ಕೌನ್ಸಿಲರ್‌ಗಳ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.


ಇದನ್ನೂ ಓದಿ: ಶಿಂಜೊ ಅಬೆ ನಿಧನ: ಕೊನೆಯ ಭೇಟಿ ನೆನೆದು ಮೋದಿ ಭಾವುಕ ಪೋಸ್ಟ್‌


ಜಪಾನ್‌ನ ಪ್ರಧಾನ ಮಂತ್ರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಅಬೆ ಅವರು ಅನಾರೋಗ್ಯದ ಕಾರಣಗಳನ್ನು ಉಲ್ಲೇಖಿಸಿ 2020 ರಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರು 2006-07 ಮತ್ತು 2012-20 ರವರೆಗೆ ಎರಡು ಬಾರಿ ಜಪಾನ್‌ನ ಪ್ರಧಾನಿಯಾಗಿದ್ದರು.ಅವರ ನಂತರ ಯೋಶಿಹಿಡೆ ಸುಗಾ ಮತ್ತು ನಂತರ ಫ್ಯೂಮಿಯೊ ಕಿಶಿಡಾ ಅವರು ಅಧಿಕಾರ ವಹಿಸಿಕೊಂಡರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.