WHO ಎಚ್ಚರಿಕೆ: ಕೋವಿಡ್ -19 ರ ಹೊಸ ರೂಪ `ಡೆಲ್ಟಾ` ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ
ಕೋವಿಡ್ -19 ರ ಹೊಸ ರೂಪ `ಡೆಲ್ಟಾ` ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ
ನವದೆಹಲಿ: ಕೋವಿಡ್ -19 ರ ಹೊಸ ರೂಪಾಂತರ 'ಡೆಲ್ಟಾ' ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus) ಹೇಳಿದ್ದಾರೆ. 104 ದೇಶಗಳನ್ನು ತಲುಪಿರುವ ಡೆಲ್ಟಾ ರೂಪಾಂತರವು (Delta Variant) ಶೀಘ್ರದಲ್ಲೇ ಇಡೀ ವಿಶ್ವದ ಕರೋನಾವೈರಸ್‌ನ ಅತ್ಯಂತ ಪ್ರಬಲ ರೂಪವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus), 10 ವಾರಗಳವರೆಗೆ ಇಳಿಮುಖವಾಗಿದ್ದ ಕರೋನಾ ಪ್ರಕರಣಗಳಲ್ಲಿ ಮತ್ತೆ ಗಮನಾರ್ಹ ಏರಿಕೆಯಾಗಿದ್ದು ಇದರ ಸಾವಿನ ಅಂಕಿ-ಅಂಶಗಳು ಆತಂಕಕಾರಿಯಾಗಿವೆ. "ಡೆಲ್ಟಾ ರೂಪಾಂತರವು (Delta variant) ಪ್ರಪಂಚದಾದ್ಯಂತ ಭೀಕರವಾದ ವೇಗದಲ್ಲಿ ಹರಡುತ್ತಿದೆ. ಪ್ರಕರಣಗಳು ಮತ್ತು ಸಾವುಗಳಲ್ಲಿ ಹೊಸ ಏರಿಕೆಗೆ ಕೂಡ ಇದು ಕಾರಣವಾಗಿದೆ" ಎಂದು ಟೆಡ್ರೊಸ್ ತಿಳಿಸಿದ್ದಾರೆ.
ಇದನ್ನೂ ಓದಿ- Joe Biden - ಅಮೆರಿಕ ವಾರದ ಅಂತ್ಯದ ವೇಳೆ 160 ಮಿಲಿಯನ್ ಜನರಿಗೆ ಲಸಿಕೆ ಗುರಿ ತಲುಪಲಿದೆ
ಕೋವಿಡ್ -19 (Covid 19) ನಿರಂತರವಾಗಿ ಬದಲಾಗುತ್ತಿದೆ ಮತ್ತು ಹೆಚ್ಚು ಸಾಂಕ್ರಾಮಿಕವಾಗುತ್ತಿದೆ. ನಾವು ಕ್ಷೀಣಿಸುತ್ತಿರುವ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಅದು ಜೀವಗಳು, ಜೀವನೋಪಾಯಗಳು ಮತ್ತು ಜಾಗತಿಕ ಆರ್ಥಿಕ ಚೇತರಿಕೆಗೆ ಅಪಾಯವನ್ನುಂಟುಮಾಡುತ್ತದೆ. ಲಸಿಕೆಗಳು (Corona Vaccine) ಕೊರತೆಯಿರುವ ಮತ್ತು ಸೋಂಕು ಹಾನಿಗೊಳಗಾಗುತ್ತಿರುವ ಸ್ಥಳಗಳಿಗೆ ಇದು ಇನ್ನೂ ಕೆಟ್ಟದಾಗಿದೆ. ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಗತ್ತು ಒಗ್ಗೂಡಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು.
"ಡೆಲ್ಟಾ" ಎಂಬ ಕರೋನಾದ ಹೊಸ ರೂಪಾಂತರಾವು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಇದು ಸೋಂಕಿನ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಈಗಾಗಲೇ 104 ದೇಶಗಳಲ್ಲಿ ಆತಂಕ ಸೃಷ್ಟಿಸಿರುವ 'ಡೆಲ್ಟಾ' ಶೀಘ್ರದಲ್ಲೇ ಇಡೀ ವಿಶ್ವದಲ್ಲೇ ಅತ್ಯಂತ ಪ್ರಬಲ ರೂಪ ಪಡೆಯುವ ನಿರೀಕ್ಷೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ- Delta Variant: ಅಮೇರಿಕಾದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಡೆಲ್ಟಾ ರೂಪಾಂತರಿ
ಹೆಚ್ಚಿನ ವ್ಯಾಕ್ಸಿನೇಷನ್ ವ್ಯಾಪ್ತಿ ಇರುವ ಸ್ಥಳಗಳಲ್ಲಿ, ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ತ್ವರಿತವಾಗಿ ಹರಡುತ್ತಿದೆ, ವಿಶೇಷವಾಗಿ ಅಸುರಕ್ಷಿತ ಮತ್ತು ದುರ್ಬಲ ಜನರಿಗೆ ಸೋಂಕು ತಗುಲುತ್ತಿದೆ ಮತ್ತು ಇದು ಆರೋಗ್ಯ ವ್ಯವಸ್ಥೆಗಳ ಮೇಲೆ ಸ್ಥಿರವಾಗಿ ಒತ್ತಡ ಹೇರುತ್ತಿದೆ. ಲಸಿಕೆ ಕಡಿಮೆ ಇರುವ ದೇಶಗಳಲ್ಲಿ ಪರಿಸ್ಥಿತಿ ವಿಶೇಷವಾಗಿ ಕೆಟ್ಟದಾಗಿದೆ ಎಂದು ಅವರು ಎಚ್ಚರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.