ನವದೆಹಲಿ: ತನ್ನ ವಿಸ್ತರಣಾ ನೀತಿಯಿಂದ ಕುಖ್ಯಾತಿ ಪಡೆದಿರುವ ಚೀನಾ ಇದೀಗ ಭೂಮಿಯಲ್ಲಿ ಗುಂಡಿ ತೋಡಲು ಆರಂಭಿಸಿದೆ. ವರದಿಗಳ ಪ್ರಕಾರ ಚೀನಾದ ವಿಜ್ಞಾನಿಗಳು ನೆಲದ ಮೇಲಿನ ಪದರದಲ್ಲಿ ಅಂದರೆ ಕ್ರಸ್ಟ್‌ನಲ್ಲಿ 32,808 ಅಡಿ ಆಳದ ರಂಧ್ರವನ್ನು ಕೊರೆಯುತ್ತಿದ್ದಾರಂತೆ. ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಿಜ್ಞಾನಿಗಳು ಈ ಆಳದ ಗುಂಡಿಯನ್ನು ತೋಡುತ್ತಿದ್ದಾರಂತೆ. ಕ್ಸಿನ್‌ಜಿಯಾಂಗ್‌ನಲ್ಲಿ ತೈಲವು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಗುಂಡಿಯು 10ಕ್ಕೂ ಹೆಚ್ಚು ಭೂಖಂಡ ಅಥವಾ ಕಲ್ಲಿನ ಪದರಗಳನ್ನು ಭೇದಿಸಿ, ತೆಳುವಾದ ಶಾಫ್ಟ್ ಕ್ರಿಟೇಶಿಯಸ್ ವ್ಯವಸ್ಥೆಯವರೆಗೆ ಭೂಮಿಯ ಹೊರಪದರಕ್ಕೆ ಹೋಗುತ್ತದೆ ಎಂದು ವರದಿ ಹೇಳಿದೆ.


COMMERCIAL BREAK
SCROLL TO CONTINUE READING

ವಿಜ್ಞಾನಿಗಳು ಅಗೆಯುತ್ತಿರುವ ಭೂಮಿಯ ಮೇಲಿನ ಪದರದಲ್ಲಿ ಕಂಡುಬರುವ ಬಂಡೆಯ ವಯಸ್ಸು ಸುಮಾರು 145 ಮಿಲಿಯನ್ ವರ್ಷಗಳು ಎಂದು ವರದಿಯಲ್ಲಿ ಹೇಳಲಾಗಿದೆ. ರಾಕ್ ಡೇಟಿಂಗ್ ಮೂಲಕ ಬಂಡೆಯ ವಯಸ್ಸನ್ನು ಕಂಡುಹಿಡಿಯಲಾಗಿದೆ.


ಇದನ್ನೂ ಓದಿ: Afghanistan: ತಾಲಿಬಾನ್‌ನ ಉನ್ನತ ನಾಯಕನೊಂದಿಗೆ ಕತಾರ್ ಪ್ರಧಾನಿ ರಹಸ್ಯ ಸಭೆ


ಇದು ಆಳವಾದ ರಂಧ್ರವಾಗಿದೆ!


ಪ್ರಸ್ತುತ ಮನುಷ್ಯನು ಭೂಮಿಯ ಮೇಲೆ ಮಾಡಿದ ಆಳವಾದ ರಂಧ್ರದ ಹೆಸರು ಸೂಪರ್‌ಡೀಪ್ ಬೋರ್‌ಹೋಲ್. ಇದು ಸುಮಾರು 40,230 ಅಡಿಗಳಿದೆ. ಇಂತಹ ಆಳವಾದ ರಂಧ್ರವನ್ನು ಕೊರೆಯಲು 20 ವರ್ಷಗಳು ಬೇಕಾಯಿತು. ಈ ಚೀನೀ ಯೋಜನೆಯ ಕೊರೆಯುವಿಕೆಯು 457 ದಿನಗಳನ್ನು ತೆಗೆದುಕೊಳ್ಳಬಹುದು ಎಂದು ನಂಬಲಾಗಿದೆ.


ಮಂಗಳವಾರದಿಂದ ಚೀನಾ ನೆಲದಲ್ಲಿ ಗುಂಡಿ ತೋಡಲು ಆರಂಭಿಸಿದೆ. ವಾಸ್ತವವಾಗಿ ಚೀನಾ ರಂಧ್ರದ ಮೂಲಕ ಮೇಲ್ಮೈ ಮೇಲೆ ಮತ್ತು ಕೆಳಗಿನ ಗಡಿಗಳನ್ನು ಹುಡುಕುತ್ತಿದೆ. ಗಮನಾರ್ಹವಾಗಿ ಮಂಗಳವಾರ ಬೆಳಗ್ಗೆ ಚೀನಾ ಮೊದಲ ಬಾರಿಗೆ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.


ಇದನ್ನೂ ಓದಿ: Whale Vomit: ವಜ್ರ-ಬಂಗಾರದಷ್ಟೇ ಬೆಲೆಬಾಳುವ ಈ ತಿಮಿಂಗಲ ವಾಂತಿಗೆ ಕೋಟಿಗಟ್ಟಲೇ ಬೆಲೆ ಏಕೆ?


ರಂಧ್ರ ಕೊರೆಯುವುದು ಸುಲಭವಿಲ್ಲ!


ಸನ್ ಜಿನ್‌ಶೆಂಗ್ ಎಂಬ ವಿಜ್ಞಾನಿ ನೆಲದಲ್ಲಿ ರಂಧ್ರವನ್ನು ಕೊರೆಯುವಾಗ ಎದುರಾಗುವ ತೊಂದರೆಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದಾರೆ. ಇವರು ಚೈನೀಸ್ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನ ಭಾಗವಾಗಿದ್ದಾರೆ. ರಂಧ್ರ ಕೊರೆಯುವಾಗ ಎದುರಿಸಿದ ತೊಂದರೆಗಳನ್ನು 2 ತೆಳುವಾದ ಉಕ್ಕಿನ ತಂತಿಗಳ ಮೇಲೆ ಓಡುವ ದೊಡ್ಡ ಟ್ರಕ್‌ಗೆ ಅವರು ಹೋಲಿಸಿದ್ದಾರೆ.


ಅದೇ ರೀತಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಯೋಜನೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. 2021ರಲ್ಲಿ ದೇಶದ ದೊಡ್ಡ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಈ ಆವಿಷ್ಕಾರವನ್ನು ವೇಗಗೊಳಿಸುವಂತೆ ಅವರು ಸೂಚಿಸಿದ್ದರು. ಈ ಮೂಲಕ ಇಂಧನ ಮತ್ತು ಖನಿಜ ಸಂಪತ್ತನ್ನು ಕಂಡುಹಿಡಿಯಬಹುದು ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲ, ಜ್ವಾಲಾಮುಖಿಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳನ್ನು ಸಹ ಇದರಿಂದ ನಿರ್ಣಯಿಸಬಹುದಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.