World Theatre day 2023: ವಿಶ್ವ ರಂಗಭೂಮಿ ದಿನವನ್ನು ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಇದನ್ನು ವರಲ್ಡ್ ಥಿಯೇಟರ್ ಡೇ ಎಂದು ಕರೆಯಲಾಗುತ್ತದೆ. ವಿಶ್ವ ರಂಗಭೂಮಿ ದಿನವನ್ನು ವಿಶ್ವಾದ್ಯಂತದ ರಂಗಭೂಮಿ ಕಲಾವಿದರಿಗೆ ಸಮರ್ಪಿಸಲಾಗಿದೆ. ರಂಗಭೂಮಿಗೆ ಸಂಬಂಧಿಸಿದ ಎಲ್ಲಾ ಕಲಾವಿದರಿಗೆ ಈ ದಿನ ತುಂಬಾ ವಿಶೇಷವಾಗಿದೆ. ರಂಗಭೂಮಿಯ ಮಹತ್ವದ ಕುರಿತು ಜನರಲ್ಲಿ  ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ಅಭಿವೃದ್ಧಿಗೆ ರಂಗಭೂಮಿ ಏಕೆ ಬೇಕು ಎಂಬುದರ ಕುರಿತು ಈ ದಿನದಂದು ಜನರಲ್ಲಿ ಅರಿವು ಮೂಡಿಸಲಾಗುತ್ತದೆ.

COMMERCIAL BREAK
SCROLL TO CONTINUE READING

ವಿಶ್ವಾದ್ಯಂತ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರದರ್ಶಿಸುವ ಪ್ರಮುಖ ವಿಧಾನಗಳಲ್ಲಿ ರಂಗಭೂಮಿಯು ಕೂಡ ಒಂದು. ರಂಗಭೂಮಿಯಲ್ಲಿ ವಿವಿಧ ನಾಟಕಗಳನ್ನು ನಿರಂತರವಾಗಿ ಪ್ರದರ್ಶಿಸುವ ಮೂಲಕ ಸಾಮಾಜಿಕ ಅನಿಷ್ಟಗಳು ಮತ್ತು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಸಹಾಯ ಮಾಡುತ್ತದೆ.


ಇದನ್ನೂ ಓದಿ-World TB Day 2023: ಶರೀರವನ್ನು ಒಳಭಾಗದಿಂದ ಪೊಳ್ಳು ಮಾಡುತ್ತೇ ಈ ಕಾಯಿಲೆ, ಲಕ್ಷಣಗಳನ್ನು ತಿಳಿದು ರಿಸ್ಕ್ ಫ್ರೀ ಆಗಿ

ವಿಶ್ವ ರಂಗಭೂಮಿ ದಿನದ ಇತಿಹಾಸ
ವಿಶ್ವ ರಂಗಭೂಮಿ ದಿನವನ್ನು ಪ್ರತಿ ವರ್ಷ ಮಾರ್ಚ್ 27 ರಂದು ಆಚರಿಸಲಾಗುತ್ತದೆ. 1961 ರಲ್ಲಿ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ITI)  ಈ ದಿನವನ್ನು ಸ್ಥಾಪಿಸಿದೆ. ಅಂತರರಾಷ್ಟ್ರೀಯ ರಂಗಭೂಮಿ ಸಮುದಾಯ ಮತ್ತು ಐಟಿಐ ಕೇಂದ್ರಗಳಿಂದ ಪ್ರತಿ ವರ್ಷ ಮಾರ್ಚ್ 27 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರಂಗಭೂಮಿ ಕಾರ್ಯಕ್ರಮಗಳು ನಡೆಯುತ್ತವೆ. ವಿಶ್ವ ರಂಗಭೂಮಿ ದಿನದ ಮೊದಲ ಸಂದೇಶವನ್ನು 1962 ರಲ್ಲಿ ಜೀನ್ ಕಾಕ್ಟೋ ನೀಡಿದ್ದರು. ಮೊದಲ ನಾಟಕವನ್ನು ಅಥೆನ್ಸ್‌ನ ಆಕ್ರೊಪೊಲಿಸ್‌ನಲ್ಲಿರುವ ಡಿಯೋನೈಸಸ್ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಯಿತು. ಈ ನಾಟಕವು ಐದನೇ ಶತಮಾನದ ಆರಂಭದ ನಾಟಕ ಎಂದು ಹೇಳಲಾಗುತ್ತದೆ. ಇದರ ನಂತರ, ರಂಗಭೂಮಿ ಗ್ರೀಸ್‌ನಾದ್ಯಂತ ಅತ್ಯಂತ ವೇಗವಾಗಿ ಹರಡಿತು ಎನ್ನಲಾಗುತ್ತದೆ.


ಇದನ್ನೂ ಓದಿ-World Poetry Day 2023: ಇಂದು ವಿಶ್ವ ಕಾವ್ಯ ದಿನ, ಇಲ್ಲಿದೆ ಈ ದಿನದ ವಿಶೇಷತೆ ಮತ್ತು ಈ ಬಾರಿಯ ಥೀಮ್

ಈ ಬಾರಿಯ ವಿಶ್ವ ರಂಗಭೂಮಿ ದಿನದ ಥೀಮ್ ಏನು?
ರಂಗಭೂಮಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದರ ಮಹತ್ವವನ್ನು ವಿವರಿಸುವುದು ವಿಶ್ವ ರಂಗಭೂಮಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ ಇದೇ ವಿಷಯದ ಮೇಲೆ ಪ್ರತಿ ವರ್ಷ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾರ್ಚ್ 27 ರಂದು 'ರಂಗಭೂಮಿ ಮತ್ತು ಶಾಂತಿಯ ಸಂಸ್ಕೃತಿ' ಎಂಬ ವಿಷಯದ ಮೇಲೆ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಕಳೆದ 59 ವರ್ಷಗಳಿಂದ ಈ ದಿನವನ್ನು ಈ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.