ನವದೆಹಲಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದಲ್ಲಿನ ಮುಸ್ಲಿಮರ ಬಗ್ಗೆ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈಗ ಅಮೇರಿಕಾ ಪಾಕ್ ಪ್ರಧಾನಿಗೆ ಚೀನಾದಲ್ಲಿನ ಮುಸ್ಲಿಮರ ಬಗ್ಗೆ ಯಾಕೆ ಅದು ಚಕಾರವೆತ್ತುತ್ತಿಲ್ಲ ಎಂದು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಪಡಿಸಿದ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿರಂತರವಾಗಿ ಕಾಶ್ಮೀರ ವಿಷಯವನ್ನು ಅಂತರಾಷ್ಟ್ರೀಕರಣಗೊಳಿಸುತ್ತಿದ್ದಾರೆ. ಈಗ ನಡೆಯನ್ನು ಪ್ರಶ್ನಿಸಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಆಕ್ಟಿಂಗ್ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್, ಇಮ್ರಾನ್ ಖಾನ್ ಅವರ ಕಾಶ್ಮೀರದ ಹೇಳಿಕೆ ಉಪಯೋಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.


ಸುಮಾರು ಒಂದು ಮಿಲಿಯನ್ ಉಯಿಘರ್ಗಳನ್ನು ಬಂಧಿಸಿರುವ ಚೀನಾ ಬಗ್ಗೆ ಇಮ್ರಾನ್ ಖಾನ್ ಮಾತನಾಡುತ್ತಿಲ್ಲ ,'ಪಶ್ಚಿಮ ಚೀನಾದಲ್ಲಿ ಬಂಧನಕ್ಕೊಳಗಾಗುತ್ತಿರುವ ಮುಸ್ಲಿಮರ ಬಗ್ಗೆ, ಅಕ್ಷರಶಃ ಏಕಾಗ್ರತೆಯಂತಹ ಪರಿಸ್ಥಿತಿಗಳಲ್ಲಿ ವ್ಯಕ್ತಪಡಿಸಿರುವ ಅವರು ಅದೇ ಮಟ್ಟದ ಕಾಳಜಿಯನ್ನು ನಾನು ನೋಡಲು ಬಯಸುತ್ತೇನೆ' ಎಂದು ಹೇಳಿದ್ದಾರೆ. ಇಸ್ಲಾಮಿಕ್ ಸಂಪ್ರದಾಯಗಳನ್ನು ಬಲವಂತವಾಗಿ ನಿಲ್ಲಿಸಲು ಮತ್ತು ಉಯಿಘರ್‌ಗಳನ್ನು ಬಹುಸಂಖ್ಯಾತ ಹಾನ್ ಜನಸಂಖ್ಯೆಗೆ ಸಂಯೋಜಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಹಕ್ಕುಗಳ ಗುಂಪುಗಳು ಮತ್ತು ಸಾಕ್ಷಿಗಳು ಹೇಳುತ್ತವೆ ಎಂದರು.


ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ಮತ್ತು ಅಮೆರಿಕಾದ ನಡುವೆ ವ್ಯಾಪಾರ ಯುದ್ದ ನಡೆಯುತ್ತಿರುವ ಬೆನ್ನಲ್ಲೇ ಈಗ ಅಮೇರಿಕಾ ಉಯಿಘರ್ ಗಳನ್ನು ಚೀನಾದಲ್ಲಿ ನೋಡಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸಿದೆ. ಇನ್ನೊಂದೆಡೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪದೇ ಪದೇ ಕಾಶ್ಮೀರ ವಿಚಾರದಲ್ಲಿ ತಾಳಿರುವ ನಿಲುವನ್ನು ಚೀನಾದಲ್ಲಿರುವ ಮುಸ್ಲಿಂರ ಬಗ್ಗೆ ತಾಳಿಲ್ಲವೇಕೆ ? ಎಂದು ಪ್ರಶ್ನಿಸಿದರು.


ಚೀನಾದ ಉಯಿಘರ್ ಗಳ ಮೇಲಿನ ಭೀಕರ ದಬ್ಬಾಳಿಕೆಗೆ ಅಂತ್ಯವನ್ನು ಹಾಡುವುದಕ್ಕಾಗಿ ಬೆಂಬಲವನ್ನು ಪಡೆಯಲು ಸಾಮಾನ್ಯ ಸಭೆಯ ಹೊರತಾಗಿ ಈ ಸಮಾವೇಶವನ್ನು ನಡೆಸಲಾಯಿತು' ಎಂದು ಅಮೆರಿಕದ ಎರಡನೇ ಅತ್ಯುನ್ನತ ರಾಜತಾಂತ್ರಿಕ ಜಾನ್ ಸುಲ್ಲಿವಾನ್ ಹೇಳಿದ್ದಾರೆ.