ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಹೆಲ್ಮೆಟ್ ಧರಿಸದೆ ಬರುವ ಮೋಟರ್ ಸೈಕಲ್ ಸವಾರರಿಗೆ ಇಂಧನ(ಪೆಟ್ರೋಲ್-ಡೀಸೆಲ್) ದೊರೆಯುವುದಿಲ್ಲ. ಕಳೆದ ತಿಂಗಳು ರಸ್ತೆ ಸುರಕ್ಷತೆ ಕುರಿತು ನಡೆಸಲಾದ ಪ್ರದರ್ಶನಗಳನ್ನು ಅನುಸರಿಸಿ ಈ ಹೆಜ್ಜೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಢಾಕಾ ಮೆಟ್ರೋಪಾಲಿಟನ್ ಪೋಲಿಸ್ ಆಯುಕ್ತರಾದ ಅಸಾದ್ಝುಝಾನ್ ಮಿಯಾನ್ ಮಂಗಳವಾರ ಈ ಬಗ್ಗೆ ತಿಳಿಸಿದ್ದು, "ಪೆಟ್ರೋಲ್ ಪಂಪ್ಗಳು (ಮಾಲೀಕರು) ಈಗಾಗಲೇ ಹೆಲ್ಮೆಟ್ಗಳಿಲ್ಲದ ಯಾವುದೇ ಮೋಟಾರ್ಸೈಕಲ್ ಸವಾರರಿಗೆ ಇಂಧನ ಕೊಡುತ್ತಿಲ್ಲ ಎಂದು ತಿಳಿಸಿದರು." ಅಲ್ಲದೆ ಒಂದು ಮೋಟರ್ ಸೈಕಲ್ ನಲ್ಲಿ ಇಬ್ಬರು ಮಾತ್ರ ಪ್ರಯಾಣ ಮಾಡಲು ಅವಕಾಶವಿದ್ದು, ಹಿಂಬದಿಯಲ್ಲಿ ಕೂರುವ ವ್ಯಕ್ತಿಯೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.


COMMERCIAL BREAK
SCROLL TO CONTINUE READING

ಆಗಸ್ಟ್ ನಲ್ಲಿ, ವೇಗವಾಗಿ ಬರುತ್ತಿದ್ದ ಬಸ್ ಗೆ ಸಿಲುಕಿ ಇಬ್ಬರು ಹದಿಹರೆಯದ ಪಾದಾಚಾರಿಗಳು ಸಾವನ್ನಪ್ಪಿದ್ದರು. ಅದರ ನಂತರ ಢಾಕಾ ಸೇರಿದಂತೆ ಇತರ ನಗರಗಳಲ್ಲಿ ಸಾವಿರಾರು ಶಾಲಾ ವಿದ್ಯಾರ್ಥಿಗಳು ಬೀದಿಗಿಳಿದು ರಸ್ತೆ ಸುರಕ್ಷತೆ ಬಗ್ಗೆ ಪ್ರದರ್ಶನ ನೀಡಿದರು. ಈ ಪ್ರದರ್ಶನದಲ್ಲಿ ರಸ್ತೆ ಸುರಕ್ಷತೆ ಮತ್ತು ಸಾರಿಗೆಯ ಭ್ರಷ್ಟಾಚಾರವನ್ನು ಸುಧಾರಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು.


ಪ್ರದರ್ಶನವನ್ನು ನೋಡಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಕ್ಯಾಬಿನೆಟ್ ಅಪರಾಧಿಗಳಿಗೆ ತೀವ್ರ ದಂಡ ವಿಧಿಸಲು ಹೊಸ ಸಾರಿಗೆ ಕಾನೂನು ಅನುಮೋದಿಸಿತು. ಅಪಘಾತಗಳ ಮೇಲ್ವಿಚಾರಣೆ ನಡೆಸಿದ ಖಾಸಗಿ ಗುಪ್ತಚರ ಮಾಹಿತಿ ಪ್ರಕಾರ, ಪ್ರತಿವರ್ಷ ಬಾಂಗ್ಲಾದೇಶ ಹೆದ್ದಾರಿಯಲ್ಲಿ ಸುಮಾರು 12,000 ಜನರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ ಎಂದು ತಿಳಿದುಬಂದಿದೆ.


ಕಳೆದ ತಿಂಗಳು ಈದ್ ಉಲ್ ಝುಹಾ ಸಮಯದಲ್ಲಿ ನಡುವಿನ 237 ರಸ್ತೆ ಅಪಘಾತಗಳಲ್ಲಿ ಸುಮಾರು 25 ದಿನಗಳು ಮೃತಪಟ್ಟಿದ್ದು, 960 ಮಂದಿ ಗಾಯಗೊಂಡಿದ್ದರು.