ನವದೆಹಲಿ: ಹೌದು ಇದು ಅಚ್ಚರಿಯಾದರೂ ಸತ್ಯ, ವಿಮಾನದಿಂದ ಸುಮಾರು 1000 ಅಡಿಯಿಂದ ಕೈ ಜಾರಿ ಬಿದ್ದ ಐಪೋನ್ ಯಾವುದೇ ರೀತಿಯ ಡ್ಯಾಮೇಜ್ ಆಗದ ರೀತಿಯಲ್ಲಿ ಮಹಿಳೆಗೆ ಸಿಕ್ಕಿದೆ.ಇದನ್ನು ಕೆಲವರು ಅದ್ಬುತವೆಂದರೆ ಇನ್ನು ಕೆಲವರು ಫೈಂಡ್ ಮೈ ಐಪೋನ್ ಆಪ್ ನ್ನು ಹೊಗಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸರ್ವಂಡಿರ್ ನಾಬೇರ್ ಹಾಸ್ ಎನ್ನುವ ಮಹಿಳೆಯು ಪ್ಯಾಸೆಂಜರ್ ಪೋಟೋ ತೆಗೆದುಕೊಳ್ಳುತ್ತಿದ್ದಾಗ ಐಪೋನ್ ಆಯ ತಪ್ಪಿ ಕೈ ಜಾರಿದೆ ಎಂದು WHO TV ವರದಿ ಮಾಡಿದೆ.ಈ ಸಂದರ್ಭದಲ್ಲಿ ಪೈಲೈಟ್ ಅವಳಿಗೆ ಯಾವುದೇ ರೀತಿಯ ಅವಕಾಶ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.ಆದರೆ ಅವಳು  ಫೈಂಡ್ ಮೈ ಐಪೋನ್ ಆಪ್ ಮೂಲಕ ಪತ್ತೆ ಹಚ್ಚಿದ್ದಾಳೆ. ಆಚ್ಚರಿಯೆಂದರೆ ಇದು ಯಾವುದೇ ಹಾನಿಯಾಗದ ರೀತಿಯಲ್ಲಿ ಈ ಐಪೋನ್ ದೊರೆತಿದೆ.


ಇದಕ್ಕೆ ಪ್ರತಿಕ್ರಿಯಿಸಿರುವ ಆಕೆ ದೇವರಿಗೆ ನಿಜಕ್ಕೂ ತುಂಬಾ ಹಾಸ್ಯ ಪ್ರಜ್ಞೆ ಇದೆ ಎಂದು  ಪ್ರತಿಕ್ರಿಯಿಸಿದ್ದಾಳೆ.