ತೈವಾನ್: ಸದಾ ಬಿಕಿನಿ ತೊಟ್ಟು ಪರ್ವತಗಳನ್ನು ಏರಿ 'ಬಿಕಿನಿ ಕ್ಲೈಂಬರ್' ಎಂದೇ ಹೆಸರಾಗಿದ್ದ ತೈವಾನ್ ಮಹಿಳೆ ಆಕಸ್ಮಿಕವಾಗಿ ಪರ್ವತದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

36 ವರ್ಷದ ಮಹಿಳೆ ಗಿಗಿ ವು ಮೃತಪಟ್ಟ ಮಹಿಳೆಯಾಗಿದ್ದು, ಬಿಕಿನಿ ಹೈಕರ್ ಎಂದೇ ಜನಪ್ರಿಯವಾಗಿದ್ದರು. ಆದರೆ ತೈವಾನ್ ಹೃದಯ ಭಾಗದಲ್ಲಿರುವ ನನ್‍ಟಾವೋ ಕೌಂಟಿಯಲ್ಲಿನ ದೇಶದ ಅತಿ ಎತ್ತರದ ಯುಶಾನ್ (ಜೇಡ್ ಮೌಂಟೇನ್) ಪರ್ವತ ಏರಲು ಜ.11ರಂದು ತೆರಳಿದ್ದರು. ಆದರೆ ಆಯತಪ್ಪಿ ಕೆಳಗೆ ಬಿದ್ದ ಕಾರಣ ಕಾಲಿಗೆ ಬಲವಾದ ಪೆಟ್ಟಾಗಿತ್ತು. ಈ ಬಗ್ಗೆ ಅವರು ತನ್ನ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದರು ಎನ್ನಲಾಗಿದೆ. 


ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಕರ್ತರು ಸರಿಯಾದ ಸಮಯಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತೀವ್ರ ಶೋಧದ ಬಳಿಕ ಹಿಮ ಕಂದಕವೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. 


ಚಾರಣದ ಆಸಕ್ತಿ ಹೊಂದಿದ್ದ ಗಿಗಿ ವು ಬೆಟ್ಟದ ತುತ್ತ ತುದಿ ತಲುಪಿದ ಬಳಿಕ ಬಿಕಿನಿಯಲ್ಲಿ ಚಿತ್ರಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ, ಸಾಕಷ್ಟು ಅಭಿಮಾನಿಗಳನ್ನೂ ಗಿಗಿ ವು ಹೊಂದಿದ್ದಾರೆ.