ಲಂಡನ್: ಹಾರುವ ವಿಮಾನದಲ್ಲಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ(Rape In The Flight) ನೆಡಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಮಾನದ ಪ್ರಥಮ ದರ್ಜೆ ಕ್ಯಾಬಿನ್‌ನಲ್ಲಿದ್ದಾಗ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹೀನ ಕೃತ್ಯವೆಸಗಿದ್ದಾನೆ ಅಂತಾ ವರದಿಯಾಗಿದೆ. ವಿಮಾನ ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣ(London's Heathrow Airport) ತಲುಪುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದ ಮಹಿಳೆ


ವರದಿಗಳ ಪ್ರಕಾರ ಈ ವಿಮಾನವು ನ್ಯೂಜೆರ್ಸಿಯ ನೆವಾರ್ಕ್‌ನಿಂದ ಲಂಡನ್‌ಗೆ ಹೋಗುತ್ತಿತ್ತು. ರಾತ್ರಿ ವೇಳೆ ಈ ವಿಮಾನದಲ್ಲಿಪ್ರಥಮ ದರ್ಜೆ ಕ್ಯಾಬಿನ್‌ನಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಮಹಿಳೆಯೊಬ್ಬರು ಎಲ್ಲಾ ಪ್ರಯಾಣಿಕರು ಮಲಗಿದ್ದಾಗ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ(Rape In The Flight,)ವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಆರೋಪಿ ಕೂಡ ಬ್ರಿಟನ್ ನಿವಾಸಿ ಎಂದು ತಿಳಿದುಬಂದಿದೆ. ಘಟನೆಯ ನಂತರ ಮಹಿಳೆ ಯುನೈಟೆಡ್ ಏರ್‌ಲೈನ್ಸ್‌ ನ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಹೀಥ್ರೂ ವಿಮಾನ ನಿಲ್ದಾಣ(Heathrow Airport)ಕ್ಕೆ ಮಾಹಿತಿ ನೀಡಿದ್ದು, ವಿಮಾನ ಇಳಿದ ತಕ್ಷಣವೇ ಆರೋಪಿಯನ್ನು ಬಂಧಿಸಲಾಯಿತು.


ಇದನ್ನೂ ಓದಿ: Malala Yousafzai : ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಮಲಾಲಾ ಯೂಸುಫ್‌ಜಾಯ್!


ಆರೋಪದ ಸತ್ಯಾಸತ್ಯತೆಗಾಗಿ ಪೊಲೀಸರ ತನಿಖೆ


ಕಳೆದ ವಾರ ನಡೆದ ಈ ಘಟನೆಯ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತ ಮಹಿಳೆಯ ವಯಸ್ಸು ಸುಮಾರು 40 ವರ್ಷ ಎಂದು ಹೇಳಲಾಗುತ್ತಿದೆ. ವಿಮಾನದ ಐಷಾರಾಮಿ ಕ್ಯಾಬಿನ್ ಗೆ ತೆರಳಿ ಬೆರಳಚ್ಚು ಮುಂತಾದ ಪುರಾವೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ವಿಮಾನದ ಪ್ರಥಮ ದರ್ಜೆ ಕ್ಯಾಬಿನ್‌ನಲ್ಲಿ ಅತ್ಯಾಚಾರ ಆರೋಪಿ ಮತ್ತು ಸಂತ್ರಸ್ತ ಮಹಿಳೆ(British Woman) ಇಬ್ಬರೂ ಇದ್ದರು. ಆರಂಭದಲ್ಲಿ ಇಬ್ಬರೂ ಅಪರಿಚಿರಂತೆ ತೋರುತ್ತಿದ್ದರು. ಆದರೆ ನಂತರ ಅವರಿಬ್ಬರು ಕ್ಯಾಬಿನ್‌ನ ಲಾಂಜ್‌ನಲ್ಲಿರುವ ಬಾರ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎಂದು ಕೆಲ ಸಹ ಪ್ರಯಾಣಿಕರು ಹೇಳಿದ್ದಾರೆ. ಹೀಗಾಗಿ ಮಹಿಳೆಯ ಅತ್ಯಾಚಾರ ಆರೋಪದಲ್ಲಿ ಎಷ್ಟು ಸತ್ಯವಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಯಾವುದೇ ಹೇಳಿಕೆ ನೀಡಿದ ವಿಮಾನಯಾನ ಸಂಸ್ಥೆ 


ಈ ಸಂಪೂರ್ಣ ವಿಚಾರದಲ್ಲಿ ವಿಮಾನಯಾನ ಸಂಸ್ಥೆಯಿಂದ ಯಾವುದೇ ಹೇಳಿಕೆ ಬಂದಿಲ್ಲ. ಅಷ್ಟಕ್ಕೂ ವಿಮಾನದ ಫಸ್ಟ್ ಕ್ಲಾಸ್ ಕ್ಯಾಬಿನ್(Flight First Class)ನಲ್ಲಿ ಇಂತಹ ಘಟನೆ ನಡೆದಿದ್ದು ಹೇಗೆ ಅನ್ನೋ ಪ್ರಶ್ನೆ ಉದ್ಭವಿಸಿದೆ. ಆದರೆ ಮಹಿಳೆಯ ಆರೋಪದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್ಎ ಮತ್ತು ಇತರ ಪುರಾವೆಗಳ ಆಧಾರದ ಮೇಲೆ ಪೊಲೀಸರು ಉನ್ನತ ತನಿಖೆ ನಡೆಸುತ್ತಿದ್ದಾರೆ.     


ಇದನ್ನೂ ಓದಿ: Internet Star Girl: ಇಂತಹ ವಿಡಿಯೋ ಹಾಕಿ 200 ಕೋಟಿ ರೂ. ಗಳಿಸಿದ 7 ವರ್ಷದ ಬಾಲಕಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.