ಈಜಿಪ್ಟ್:ಜಗತ್ತಿನ ಅದ್ಭುತಗಳಲ್ಲಿ ಒಂದಾಗಿರುವ ಈಜಿಪ್ಟ್ ಪಿರಾಮಿಡ್ ಗಳ ಮೇಲೆ ಹಾಲಿವುಡ್ ನಲ್ಲಿ ಹಲವಾರು ಚಿತ್ರಗಳು ನಿರ್ಮಾಣಗೊಂಡಿವೆ. ಈ ಚಿತ್ರಗಳಲ್ಲಿ ಮಮಿಗಳು  ಶವಪೆಟ್ಟಿಗೆಯಿಂದ ಹೊರಬರುತ್ತವೆ ಮತ್ತು ಮಾತನಾಡಲು ಆರಂಭಿಸುತ್ತವೆ. ಅವುಗಳ ಧ್ವನಿಗೆ ಪ್ರೇಕ್ಷಕರು ಬೆಚ್ಚಿಬೀಳುತ್ತಾರೆ. ಆದರೆ, ಇದೀಗ ಕೇವಲ ಚಿತ್ರದಲ್ಲಿ ಅಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಕೂಡ ಮಮಿಯೊಂದು ಮಾತನಾಡಲು ಆರಂಭಿಸಿದೆ ಎಂದು ಹೇಳಿದರೆ...? ಹೌದು, ಈಜಿಪ್ಟ್ ನಲ್ಲಿ ಸುಮಾರು 3000 ವರ್ಷಗಳಷ್ಟು ಹಳೆಯದಾದ ಒಂದು ಮಮಿ ಎರಡನೇ ಬಾರಿಗೆ ಮಾತನಾಡಿದೆ. ಅಷ್ಟೇ ಅಲ್ಲ 3000 ವರ್ಷಗಳ ಹಿಂದೆ ಮಾತನಾಡಿದ ರೀತಿಯಲ್ಲೇ  ಮತ್ತೆ ಈ ಮಮಿ ಮಾತನಾಡಿದೆ.


COMMERCIAL BREAK
SCROLL TO CONTINUE READING

3000 ವರ್ಷಗಳ ಬಳಿಕ ಮಾತನಾಡಿರುವ ಈ ಮಮಿ ಯಾರು?
3000 ವರ್ಷಗಳ ಬಳಿಕ ಮಾತನಾಡಿರುವ ಈ ಮಮಿ ಹೆಸರು 'ನೆಸ್ಯಾಮುಂ'. 3000 ವರ್ಷಗಳ ಹಿಂದೆ ಈಜಿಪ್ಟ್ ನ ಒಂದು ಪ್ರಾಚೀನ ನಗರದಲ್ಲಿ ನೆಸ್ಯಾಮುಂ ಪೂಜಾರಿಯ ಕೆಲಸ ಮಾಡುತ್ತಿದ್ದ. ಆತನು ಮರಣಹೊಂದಿದ ಬಳಿಕ ಈಜಿಪ್ಟ್ ನ ಪ್ರಾಚೀನ ಜನರು ತಮ್ಮ ಪರಂಪರೆಯ ಭಾಗವಾಗಿ ಆತನ ಮೃತ ದೇಹಕ್ಕೆ ಮಮಿ ರೂಪ ನೀಡಿ ಅಂತಿಮ ಕ್ರಿಯೆ ನಡೆಸಿದ್ದಾರೆ. ಬಳಿಕ 18ನೇ ಶತಮಾನದಲ್ಲಿ ನೆಸ್ಯಾಮುಂ ಮಮಿಯನ್ನು ಲಂಡನ್ ನ ಲೀಡ್ಸ್ ಸಿಟಿ ಮ್ಯೂಸಿಯಂಗೆ ತರಲಾಗಿದೆ.


3000 ವರ್ಷಗಳ ಬಳಿಕ ಮಾತನಾಡುವ ಈ ಮಮಿ ಹಿಂದಿನ ರಹಸ್ಯ ಏನು?
ಸಾವ್ರಿರಾರು ವರ್ಷಗಳಷ್ಟು ಹಳೆಯದಾದ ನೆಸ್ಯಾಮುಂನ ನಾಲಿಗೆ ಹಾಗೂ ಅಂಗುಲ ಸಂಪೂರ್ಣ ಕೊಳೆತುಹೋಗಿವೆ. ಆದರೆ, ಆತನ ಗಂಟಲಲ್ಲಿ ಇರುವ ಸ್ವರತಂತ್ರಗಳು ಇನ್ನೂ ಸುರಕ್ಷಿತವಾಗಿವೆ. ಇದು ತಿಳಿಯುತ್ತಿದ್ದಂತೆ ವೈಜ್ಞಾನಿಕರು ನೆಸ್ಯಾಮುಂಗೆ ಮತ್ತೆ ಧ್ವನಿ ನೀಡಲು ನಿರ್ಧರಿಸಿದ್ದಾರೆ. ವಿಜ್ಞಾನಿಗಳು ನೀಡಿರುವ ಒಂದು ವರದಿಯ ಪ್ರಕಾರ, ಬ್ರಿಟನ್ ನ ಪ್ರಯೋಗಶಾಲೆಯೊಂದರಲ್ಲಿ ವಿಜ್ಞಾನಿಗಳು 3-ಡಿ ಪ್ರಿಂಟಿಂಗ್ ತಂತ್ರಜ್ಞಾನ, ಕಂಪ್ಯೂಟರ್ ಹಾಗೂ ಲೌಡ್ ಸ್ಪೀಕರ್ ಬಳಸಿ 3000 ವರ್ಷಗಳ ಹಿಂದೆ ಮೃತನಾದ ಪುಜಾರಿ ನೆಸ್ಯಾಮುಂನ ಧ್ವನಿಯನ್ನು ಎರಡನೇ ಬಾರಿ ಕೇಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಮಿಯ ಸ್ವರತಂತ್ರದ 3-ಡಿ ಮಾಡೆಲ್ ಸಿದ್ಧಪಡಿಸಲಾಗಿದೆ ಇದಕ್ಕಾಗಿ ಸಿಟಿ ಸ್ಕ್ಯಾನ್ ಹಾಗೂ 3 ಡಿ ತಂತ್ರಜ್ಞಾನ ಬಳಸಿ ನೆಸ್ಯಾಮುಂನ್ ಸ್ವರತಂತ್ರದ ಮಾಡೆಲ್ ತಯಾರಿಸಲಾಗಿದೆ. ಈ ಮಾಡೆಲ್ ಗೆ ಒಂದು ಲೌಡ್ ಸ್ಪೀಕರ್ ಅಳವಡಿಸಲಾಗಿದೆ. ಮಮಿಯ ಸ್ವರತಂತ್ರಗಳಿಂದ ಧ್ವನಿ ಹೊರಬರುತ್ತಲೇ ಅವುಗಳಿಂದ ಮನುಷ್ಯ ಮಾತನಾಡುವ ರೀತಿಯಲ್ಲಿ ಧ್ವನಿ ಹೊರಹೊಮ್ಮಿದೆ.


ಹೇಗಿತ್ತು ಈ ಧ್ವನಿ?
ಈ ಕುರಿತು ಹೇಳಿಕೆ ನೀಡಿರುವ ವಿಜ್ಞಾನಿಗಳು 3000 ವರ್ಷಗಳ ಹಿಂದೆ ಪೂಜಾರಿ ಮಾತನಾಡುವ ರೀತಿಯಲ್ಲೇ ಈ ಧ್ವನಿ ಇತ್ತು  ಎಂದು ಹೇಳಿದ್ದಾರೆ. ಆದರೆ, ಈ ಧ್ವನಿ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. 3-ಡಿ ಮಾಡೆಲ್ ನಿಂದ ಹೊರಬಂದ ಧ್ವನಿ 'ಈಈಈ....' ರೀತಿ ಇತ್ತು ಎಂದು ಅವರು ಹೇಳಿದ್ದಾರೆ. ನೆಸ್ಯಾಮುಂ ಬಾಯಿಯಲ್ಲಿ ನಾಲಿಗೆ ಇಲ್ಲವಾದ್ದರಿಂದ ಈ ರೀತಿ ಕೇವಲ 'ಈಈಈ..' ಸ್ವರ ಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 3000 ವರ್ಷಗಳ ಹಿಂದೆ ನೆಸ್ಯಾಮುಂ ಮಾತನಾಡುವ ರೀತಿಯಲ್ಲೇ ಈ ಧ್ವನಿ ಗೋಚರಿಸಿದೆ. ಅದರೂ, ಸಹಿತ ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸ್ತ್ರಜ್ಞರು ಹೇಳಿದ್ದಾರೆ.