ದಿನಕ್ಕೆ ಕೇವಲ ನಾಲ್ಕು ಗಂಟೆ ಕೆಲಸ ಮಾಡಿ ತಿಂಗಳಿಗೆ 60,000 ಸಂಪಾದಿಸಿ
ಸೂಕ್ತ ಶ್ರಮ ಪಟ್ಟರೆ ಇದರಲ್ಲಿ ಕೈತುಂಬಾ ಹಣ ಸಂಪಾದಿಸಬಹುದು. ನೌಕರಿ ಇಲ್ಲದವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ. ಅದರಲ್ಲೂ ವಿಶೇಷವಾಗಿ ವಿಶ್ವದ ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ಕಂಪನಿಗಾಗಿ ಕೆಲಸ ಮಾಡುವುದೆಂದರೆ ಮತ್ತಷ್ಟು ಹೆಮ್ಮೆಯ ವಿಷಯ.
ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಕಂಪನಿಗಾಗಿ ಕೆಲಸ ಮಾಡುವುದು ಬಹುತೇಕರ ಕನಸಾಗಿರುತ್ತದೆ. ಆದರೆ ಡಿಲೆವರಿ ಬಾಯ್ ಕೆಲಸ ಅಂತ ಹೇಳಿದರೆ ಕೆಲವರು ಹಿಂದೇಟು ಹಾಕುತ್ತಾರೆ. ಆದರೆ, ನಿಜ ಹೇಳುವುದಾದರೆ ಇದು ಮಾಮೂಲಿ ಕೆಲಸವಲ್ಲ. ಸೂಕ್ತ ಶ್ರಮ ಪಟ್ಟರೆ ಇದರಲ್ಲಿ ಕೈತುಂಬಾ ಹಣ ಸಂಪಾದಿಸಬಹುದು. ನೌಕರಿ ಇಲ್ಲದವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ. ಅದರಲ್ಲೂ ವಿಶೇಷವಾಗಿ ವಿಶ್ವದ ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ಕಂಪನಿಗಾಗಿ ಕೆಲಸ ಮಾಡುವುದೆಂದರೆ ಮತ್ತಷ್ಟು ಹೆಮ್ಮೆಯ ವಿಷಯ. ಈ ಕೆಲಸದಲ್ಲಿ ಯಾವುದೇ ರೀತಿಯ ಕಟ್ಟಳೆಗಳಿಲ್ಲ. ನಿಮಗೆ ಫುಲ್ ಟೈಮ್ ಕೆಲಸ ಬೇಡ ಎಂದಾದಲ್ಲಿ ಪಾರ್ಟ್ ಟೈಮ್ ಕೆಲಸ ಕೂಡ ಮಾಡಬಹುದು.
ಡಿಲೆವರಿ ಬಾಯ್ ಯಾರು?
ಆನ್ಲೈನ್ ನಲ್ಲಿ ಜನರು ಆರ್ಡರ್ ಮಾಡುವ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಯುವಕ/ಯುವತಿಯರನ್ನು ಡಿಲೆವರಿ ಬಾಯ್/ಗರ್ಲ್ ಎಂದು ಹೇಳಲಾಗುತ್ತದೆ. ಅಮೆಜಾನ್ ನ ವೇರ್ ಹೌಸ್ ನಿಂದ ಇವರು ಪ್ಯಾಕೇಜ್ ಗಳನ್ನು ತೆಗೆದುಕೊಂಡು ಹೋಗಿ ಗ್ರಾಹಕರಿಗೆ ತಲುಪಿಸುತ್ತಾರೆ. ದೇಶಾದ್ಯಂತ ಈ ಡಿಲೆವರಿ ಬಾಯ್/ಗರ್ಲ್ ಗಳು ನಿತ್ಯ ಲಕ್ಷಾಂತರ ಪ್ಯಾಕೇಜ್ ಗಳನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುತ್ತಾರೆ. ಓರ್ವ ಡಿಲೆವರಿ ಬಾಯ್ ದಿನವೊಂದಕ್ಕೆ 100 ರಿಂದ 150 ಪ್ಯಾಕೇಜ್ ಗಳನ್ನು ನಿಗದಿತ ಗ್ರಾಹಕರಿಗೆ ತಲುಪಿಸುತ್ತಾರೆ.
10 ರಿಂದ 15 ಕಿಮೀ ವ್ಯಾಪ್ತಿಯಲ್ಲಿ ಡಿಲೆವರಿ ಮಾಡಲಾಗುತ್ತದೆ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಅಮೆಜಾನ್ ನ ಸುಮಾರು 18 ಸೆಂಟರ್ ಗಳಿವೆ. ಈ ರೀತಿಯೇ ದೇಶಾದ್ಯಂತ ಅಮೆಜಾನ್ ಹಲವಾರು ನಗರಗಳಲ್ಲಿ ಅಮೆಜಾನ್ ನ ನೂರಾರು ಸೆಂಟರ್ ಗಳಿವೆ. ಎಲ್ಲ ಪ್ಯಾಕೇಜ್ ಗಳನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸಲಾಗುತ್ತದೆ. ಅಮೆಜಾನ್ ಸೆಂಟರ್ ನಿಂದ ಸುಮಾರು 10 ರಿಂದ 15 ಕಿಮೀ ವ್ಯಾಪ್ತಿಯಲ್ಲಿ ಈ ಪ್ಯಾಕೇಜ್ ಗಳನ್ನು ತಲುಪಿಸಲಾಗುತ್ತದೆ.
ಎಷ್ಟು ಗಂಟೆಗಳ ಶಿಫ್ಟ್ ಇರುತ್ತದೆ.
ಡಿಲೆವರಿ ಬಾಯ್ ಗಳು ಇಡೀ ದಿನ ಕೆಲಸ ಮಾಡುವುದಿಲ್ಲ. ಅವರ ಏರಿಯಾಗಳಲ್ಲಿ ಬರುವ ಪ್ಯಾಕೇಜ್ ಗಳನ್ನು ಮಾತ್ರ ಅವರು ಡಿಲೆವರಿ ಮಾಡಬೇಕು. ಬೆಳಗ್ಗೆ ೭ ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅಮೆಜಾನ್ ತನ್ನ ಪ್ಯಾಕೇಜ್ ಗಳನ್ನು ಗ್ರಾಹಕರಿಗೆ ತಲುಪಿಸುತ್ತದೆ. ದೆಹಲಿಯ ಡೆಲಿವರಿ ಬಾಯ್ ಗಳು ಹೇಳುವ ಪ್ರಕಾರ, ಅವರು ದಿನದ ಕೇವಲ ನಾಲ್ಕು ಗಂಟೆಗಳಲ್ಲಿ ಸುಮಾರು 100 ರಿಂದ 150 ಪ್ಯಾಕೇಜ್ ಗಳನ್ನು ಡಿಲೆವರಿ ಮಾಡುತ್ತಾರೆ ಎಂದು ಹೇಳುತ್ತಾರೆ.
ಡಿಲೆವರಿ ಬಾಯ್ ಆಗಲು ಅರ್ಹತೆ ಏನು?
ಡಿಲೆವರಿ ಬಾಯ್ ಆಗಲು ನಿಮ್ಮ ಬಳಿ ಡಿಗ್ರೀ ಇರಬೇಕು. ಸ್ಕೂಲ್ ಅಥವಾ ಕಾಲೇಜ್ ಪಾಸೌಟ್ ಆಗಿದ್ದರೆ, ನಿಮ್ಮ ಬಳಿ ಪಾಸಿಂಗ್ ಸರ್ಟಿಫಿಕೆಟ್ ಇರಬೇಕು. ಬೈಕ್ ಅಥವಾ ಸ್ಕೂಟರ್ ನ ವಿಮಾ, ಅಧಿಕೃತ ಆರ್.ಸಿ ಇರುವುದು ಅನಿವಾರ್ಯವಾಗಿದೆ. ಜೊತೆಗೆ ಈ ಕೆಲಸ ಮಾಡ ಬಯಸುವರ ಬಳಿ ಡ್ರೈವಿಂಗ್ ಲೈಸನ್ಸ್ ಇರಬೇಕು.
ಹೇಗೆ ಅರ್ಜಿ ಸಲ್ಲಿಸಬೇಕು?
ಅರ್ಜಿ ಸಲ್ಲಿಸ ಬಯಸುವ ಆಕಾಂಕ್ಷಿಗಳು https://logistics.amazon.in/applynow ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಇದರ ಹೊರತಾಗಿ ಅಮೆಜಾನ್ ನ ಸೆಂಟರ್ ಗೂ ಕೂಡ ಭೇಟಿ ನೀಡಿ ನೌಕರಿಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಸೆಂಟರ್ ಗಳಲ್ಲಿ ಡಿಲೆವರಿ ಬಾಯ್ ಗಳಿಗಾಗಿ ವ್ಯಾಕೆನ್ಸಿ ಇದ್ದೇ ಇರುತ್ತದೆ. ಒಂದು ವೇಳೆ ಅವಕಾಶ ಇಲ್ಲದೆ ಹೋದರು ಸಹಿತ ಭವಿಷ್ಯದಲ್ಲಿ ನಿಮ್ಮ ಹೆಸರನ್ನು ಪರಿಗಣಿಸಲಾಗುತ್ತದೆ. ಜಾಗ ಖಾಲಿಯಾದಾಗ ನಿಮಗೆ ಈ ಅವಕಾಶ ನೀಡಲಾಗುತ್ತದೆ.
ಆನ್ಲೈನ್ ನಲ್ಲಿಯೂ ಕೂಡ ರೆಜಿಸ್ಟರ್ ಮಾಡಬಹುದು
ಅಮೆಜಾನ್ ಡಿಲೆವರಿ ಬಾಯ್ ನೌಕರಿಗಾಗಿ ನೀವು ನಿಮ್ಮ ಇ-ಮೇಲ್ ಮೂಲಕ ಕೂಡ ರಿಜಿಸ್ಟರ್ ಮಾಡಬಹುದು. ಇದಕ್ಕಾಗಿ ನೀವು ಸಂಪೂರ್ಣ ಅರ್ಜಿಯನ್ನು ಜಾಗ್ರತೆಯಿಂದ ಭರ್ತಿ ಮಾಡಬೇಕು. ನಿಮಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸಬೇಕು.
ಕಂಪನಿ ನಿಮಗೆ ವಾಹನ ನೀಡಲಿದೆಯೇ?
ಒಂದು ವೇಳೆ ನಿಮ್ಮ ಬಳಿ ದ್ವಿಚಕ್ರ ವಾಹನವಿದ್ದರೆ ನಿರ್ಧಾರಿತ ಪ್ಯಾಕೇಜ್ ಗಳನ್ನು ನೀವು ನಿಮ್ಮ ವಾಹನದಲ್ಲಿಯೇ ಕೊಂಡೊಯ್ಯಬೇಕು. ಒಂದು ವೇಳೆ ದೊಡ್ಡ ದೊಡ್ಡ ಪ್ಯಾಕೇಜ್ ಗಳನ್ನು ಡಿಲೆವರಿ ಮಾಡಬೇಕಾದರೆ, ಕಂಪನಿ ಶರತ್ತುಗಳ ಆಧಾರದ ಮೇಲೆ ನಿಮಗೆ ವಾಹನ ನೀಡುತ್ತದೆ.
ಯಾವ ಪ್ರಾಡಕ್ಟ್ ಡಿಲೆವರಿ ಮಾಡಬೇಕು ಈ ಆಯ್ಕೆ ಡಿಲೆವರಿ ಬಾಯ್ ಮಾಡುತ್ತಾರೆ
ಡಿಲೆವರಿ ಬಾಯ್ ಗಳು ಮನೆ ಮತ್ತು ಕಛೇರಿ ಎರಡರಲ್ಲಿಯೂ ಕೂಡ ಡಿಲೆವರಿ ಮಾಡುತ್ತಾರೆ. ಆದರೆ ಯಾವ ರೀತಿಯ ವಸ್ತುಗಳನ್ನು ಡಿಲೆವರಿ ಮಾಡಬೇಕು ಎಂಬುದು ಡಿಲೆವರಿ ಬಾಯ್ ಗಳೇ ನಿರ್ಧರಿಸುತ್ತಾರೆ. ಚಿಕ್ಕ ಚಿಕ್ಕ ಸರಕುಗಳಿಂದ ಹಿಡಿದು ಫ್ರಿಡ್ಜ್, ಟಿವಿ, ಎಸಿಗಳನ್ನು ಕೂಡ ಡಿಲೆವರಿ ಮಾಡಬಹುದಾಗಿದೆ. ಇದಕ್ಕಾಗಿ ದೊಡ್ಡ ವಾಹನದ ಅವಶ್ಯಕತೆ ಇದ್ದು, ಇದಕ್ಕಾಗಿ ಕಂಪನಿ ನಿಮಗೆ ವಾಹನ ನೀಡುತ್ತದೆ.
ಕೆಲಸದ ಟ್ರೇನಿಂಗ ಕೂಡ ನೀಡಲಾಗುತ್ತದೆ
ನಿಮಗೆ ಈ ಕೆಲಸ ನೀಡುವ ಅಮೆಜಾನ್ ಕಂಪನಿ, ಪ್ಯಾಕೇಜ್ ಗಳನ್ನು ಹೇಗೆ ತಲುಪಿಸಬೇಕು ಎಂಬ ಕುರಿತು ಟ್ರೇನಿಂಗ ಕೂಡ ನೀಡುತ್ತದೆ. ಯಾವ ಪ್ಯಾಕೇಜ್ ಗಳನ್ನು ಎಷ್ಟು ಸಮಯದಲ್ಲಿ ತಲುಪಿಸಬೇಕು ಮತ್ತು ಹೇಗೆ ಎಂಬುದನ್ನೂ ಸಹ ಹೇಳಲಾಗುತ್ತದೆ. ಒಟ್ಟಾರೆ ಹೇಳುವುದಾದರೆ ಕೆಲಸಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಟ್ರೇನಿಂಗ ಅಮೆಜಾನ್ ನೀಡುತ್ತದೆ.
ನೌಕರಿ ಪರ್ಮ್ನಂಟ್ ಆಗಿರುತ್ತದೆಯಾ ಅಥವಾ ಗುತ್ತಿಗೆ ಆಧಾರದ ಮೇಲೆ ಇರುತ್ತದೆ?
ಇಲ್ಲಿ ನೀವು ಪರ್ಮ್ನಂಟ್ ನೌಕರಿ ಕೂಡ ಮಾಡಬಹುದು, ಗುತ್ತಿಗೆ ಆಧಾರದ ಮೇಲೆಯೂ ಕೂಡ ನೌಕರಿ ಮಾಡಬಹುದು. ಬೇಡ ಎಂದಾದಲ್ಲಿ ನೀವು ನೌಕರಿ ಕೂಡ ಬಿಡಬಹುದು. ಕಂಪನಿ ಕೂಡ ನಿಮ್ಮ ಪರ್ಫಾರ್ಮೆನ್ಸ್ ಆಧಾರದ ಮೇಲೆ ನಿಮ್ಮನ್ನು ವಜಾಗೋಳಿಸಬಹುದು.
ಸಂಬಳ ಎಷ್ಟು?
ಡಿಲೆವರಿ ಬಾಯ್ ಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ಸಂಬಳ ಸಿಗುತ್ತದೆ. ಡಿಲೆವರಿ ಬಾಯ್ ಅಥವಾ ಗರ್ಲ್ ಗಳಿಗೆ ತಿಂಗಳಿಗೆ 10 ರಿಂದ 15 ಸಾವಿರ ಖಚಿತ ಸಂಬಳ ಇರುತ್ತದೆ. ಪೆಟ್ರೋಲ್ ಖರ್ಚು ನಿಮ್ಮದಾಗಿರುತ್ತಾದೆ. ಆದರೆ ಒಂದು ಪ್ಯಾಕೇಜ್ ಡೆಲಿವರಿ ಮಾಡಿದರೆ 10 ರಿಂದ 15 ರೂ. ಸಿಗುತ್ತದೆ. ಡಿಲೆವರಿ ಸರ್ವಿಸ್ ನೀಡುವ ಕಂಪನಿಯೊಂದು ನೀಡಿರುವ ಮಾಹಿತಿ ಪ್ರಕಾರ ಯಾವುದೇ ಓರ್ವ ಡಿಲೆವರಿ ಬಾಯ್ ಪೂರ್ಣ ತಿಂಗಳು ಕೆಲಸ ಮಾಡಿ, ನಿತ್ಯ 100 ರಿಂದ 150 ಪ್ಯಾಕೇಜ್ ಡಿಲೆವರಿ ಮಾಡುತ್ತಿದ್ದರೆ, ಅವರು ತಿಂಗಳಿಗೆ ರೂ.55,000 ಸಾವಿರದಿಂದ 60,000 ರೂ.ಗಳವರೆಗೆ ಸಂಪಾದನೆ ಮಾಡಬಹುದು ಎಂದು ಹೇಳಿದೆ.