ನವದೆಹಲಿ: ಕರೋನವೈರಸ್ ಬಗ್ಗೆ ಚೀನಾ ಮಾಹಿತಿ ನೀಡುವುದರಲ್ಲಿ ವಿಳಂಬವಾಗಿದೆ ಎಂಬ ಜಾಗತಿಕ ಕಳವಳಗಳ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಂದಿನ ವಾರ ಚೀನಾಕ್ಕೆ ವೈರಸ್‌ನ ಉಗಮ ಮತ್ತು ಮಾನವರಿಗೆ ಹರಡುತ್ತಿರುವ ಬಗ್ಗೆ ತನಿಖೆ ನಡೆಸಲು ತಂಡವನ್ನು ಕಳುಹಿಸುತ್ತಿದೆ.


COMMERCIAL BREAK
SCROLL TO CONTINUE READING

'ವೈರಲ್ ನ್ಯುಮೋನಿಯಾ' ಪ್ರಕರಣಗಳ ಕುರಿತು ಚೀನಾದ ಡಬ್ಲ್ಯುಎಚ್‌ಒನ ಕಂಟ್ರಿ ಆಫೀಸ್ ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್‌ನಿಂದ ಹೇಳಿಕೆ ಪಡೆದ ಆರು ತಿಂಗಳ ನಂತರ ಈ ಭೇಟಿ ನಡೆಯಲಿದೆ.


"ವೈರಸ್ ಮೂಲವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಡಬ್ಲ್ಯುಎಚ್‌ಒ ಹೇಳುತ್ತಿದೆ. ಇದು ವಿಜ್ಞಾನ, ಇದು ಸಾರ್ವಜನಿಕ ಆರೋಗ್ಯ. ವೈರಸ್ ಅದು ಹೇಗೆ ಪ್ರಾರಂಭವಾಯಿತು ಎನ್ನುವುದನ್ನು ನಾವು ತಿಳಿದಲ್ಲಿ  ಉತ್ತಮವಾಗಿ ಹೋರಾಡಬಹುದು" ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಜೂನ್ 29 ರಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.


ಇದನ್ನೂ ಓದಿ: ಜಗತ್ತಿಗೆ ಶೀಘ್ರದಲ್ಲೇ ಸಿಗಲಿದೆ ಕರೋನಾ ಲಸಿಕೆ: WHO ಬಹಿರಂಗಪಡಿಸಿದ ವಾಸ್ತವ ಸಂಗತಿ ಏನು?


'ನಾವು ಮುಂದಿನ ವಾರ ಚೀನಾಕ್ಕೆ ತಂಡವನ್ನು ಕಳುಹಿಸಲಿದ್ದೇವೆ ಮತ್ತು ಅದು ವೈರಸ್ ಹೇಗೆ ಪ್ರಾರಂಭವಾಯಿತು ಮತ್ತು ಭವಿಷ್ಯವನ್ನು ತಯಾರಿಸಲು ನಾವು ಏನು ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಕಾರಣವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಮುಂದಿನ ವಾರ ತಂಡವನ್ನು ಕಳುಹಿಸಲು ನಾವು ಯೋಜಿಸುತ್ತಿದ್ದೇವೆ,' ಎಂದು ಅವರು ಹೇಳಿದರು.


'ವೈರಸ್  ತಿಳುವಳಿಕೆಯನ್ನು ಹೆಚ್ಚಿಸುವ ಕೆಲಸ ಮಾಡಲು ಅಂತಾರಾಷ್ಟ್ರೀಯ ತಜ್ಞರ ತಂಡವನ್ನು "ಆದಷ್ಟು ಬೇಗ" ಕಳುಹಿಸಲು ಚೀನಾದೊಂದಿಗಿನ ಒಪ್ಪಂದದ ಬಗ್ಗೆ ಘೆಬ್ರೆಯೆಸಸ್ ಜನವರಿಯಲ್ಲಿ ಮಾತನಾಡಿದ್ದರು.ಚೀನಾದ ಪ್ರಯೋಗಾಲಯದಲ್ಲಿ ಈ ವೈರಸ್ ಹುಟ್ಟಿಕೊಂಡಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಈ ಹಿಂದೆ ಆರೋಪಿಸಿದ್ದರು. ಆದರೆ ಇದನ್ನು ಚೀನಾ ಸಾರಾಸಗಟಾಗಿ ತಿರಸ್ಕರಿಸಿತ್ತು.