Costliest Camel Video: ಇದುವೇ ವಿಶ್ವದ ಅತ್ಯಂತ ದುಬಾರಿ ಒಂಟೆ, ಎಷ್ಟು ಕೋಟಿಗೆ ಮಾರಾಟವಾಗಿದೆ ಗೊತ್ತಾ?
Most Expensive Camel - ಈ ಒಂಟೆಯ ಆರಂಭಿಕ ಬಿಡ್ ಅನ್ನು 5 ಮಿಲಿಯನ್ ಸೌದಿ (Saudi Arabia Camel) ರಿಯಾಲ್ ಅಂದರೆ ಸುಮಾರು 10 ಕೋಟಿ 16 ಲಕ್ಷ ರೂಪಾಯಿ ಆಗಿದೆ. ಬಳಿಕ 7 ಮಿಲಿಯನ್ ಸೌದಿ ರಿಯಾಲ್‌ಗೆ ಬಿಡ್ ಅಂತಿಮಗೊಳಿಸಲಾಗಿದೆ.
Costliest Camel - ರಂಜಾನ್ (Ramadan 2022) ಪ್ರಾರಂಭವಾಗುತ್ತಿದೆ, ಜನರು ಬಲಿಗಾಗಿ ಆಡು ಮತ್ತು ಒಂಟೆಗಳನ್ನು ಖರೀದಿಸುತ್ತಿದ್ದಾರೆ. ರಂಜಾನ್ ಸಂದರ್ಭದಲ್ಲಿ ಬಲಿಕೊಡುವ ಪ್ರಾಣಿಗಳ ಬೆಲೆಗಳು ಸಾಕಷ್ಟು ಹೆಚ್ಚಾಗುತ್ತವೆ. ಇದೇ ವೇಳೆ ಸೌದಿ ಅರೇಬಿಯಾದಿಂದ ಪ್ರಾಣಿಯೊಂದರ ಅಚ್ಚರಿಯ ಬೆಲೆಯೊಂದು ಪ್ರಕಟವಾಗಿದೆ. ಅಲ್ಲಿ ಒಂದು ಒಂಟೆಯನ್ನು ಎಷ್ಟು ದುಬಾರಿ ಬೆಲೆಗೆ ಮಾರಲಾಗುತಿದೆ ಎಂದರೆ ಬೆಲೆ ಕೇಳಿ, ನೀವೂ ಕೂಡ ಒಂದು ಕ್ಷಣ ದಂಗಾಗುವಿರಿ. ಈಗಾಗಲೇ ಬೆಲೆ ಕೇಳಿದ ಹಲವರು ತಮ್ಮ ಬೆರಳು ಕಚ್ಚಿಕೊಂಡಿದ್ದಾರೆ. ಇದು ವಿಶ್ವದ ಅತ್ಯಂತ ದುಬಾರಿ ಒಂಟೆ ಎಂದು ಹೇಳಲಾಗುತ್ತದೆ. ಈ ಒಂಟೆಗೆ 7 ಮಿಲಿಯನ್ ಸೌದಿ ರಿಯಾಲ್ ಅಂದರೆ ಸುಮಾರು 14 ಕೋಟಿ 23 ಲಕ್ಷ ರೂಪಾಯಿ ಬಿಡ್ ಮಾಡಲಾಗಿದೆ ಎಂದು ತಿಳಿದರೆ ನೀವೂ ಆಶ್ಚರ್ಯಕ್ಕೆ ಒಳಗಾಗುವಿರಿ.
14 ಕೋಟಿ ರೂ.ಗಳಿಗೆ ಮಾರಾಟವಾದ ಒಂಟೆ
'ಗಲ್ಫ್ ನ್ಯೂಸ್'ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, ಸೌದಿ ಅರೇಬಿಯಾದಲ್ಲಿ ಈ ಒಂಟೆಗೆ ಸಾರ್ವಜನಿಕ ಹರಾಜು ಆಯೋಜಿಸಲಾಗಿತ್ತು. ಹರಾಜಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ವ್ಯಕ್ತಿಯೊಬ್ಬ ಮೈಕ್ರೊಫೋನ್ ಮೂಲಕ ಹರಾಜಿನಲ್ಲಿ ಬಿಡ್ಡಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ.
ಇದನ್ನೂ ಓದಿ-GIRL FUNNY VIDEO: Reels ಮಾಡುವ ತವಕದಲ್ಲಿ ನೀರಿಗೆ ಬಿದ್ದ ಮೊಬೈಲ್, ಮುಂದೇನಾಯ್ತು ನೀವೇ ನೋಡಿ
ಈ ಒಂಟೆಯ ಆರಂಭಿಕ ಬಿಡ್ ಅನ್ನು 5 ಮಿಲಿಯನ್ ಸೌದಿ ರಿಯಾಲ್ ಅಂದರೆ ಸುಮಾರು 10 ಕೋಟಿ 16 ಲಕ್ಷ ರೂಪಾಯಿ ಆಗಿದೆ. ಬಳಿಕ 7 ಮಿಲಿಯನ್ ಸೌದಿ ರಿಯಾಲ್‌ಗೆ ಬಿಡ್ ಅಂತಿಮಗೊಳಿಸಲಾಗಿದೆ. ಆದರೆ, ಇಷ್ಟು ಹೆಚ್ಚು ಬಿಡ್ ಮಾಡಿ ಒಂಟೆ ಖರೀದಿಸಿದವರು ಯಾರು ಎಂಬುದು ಬಹಿರಂಗವಾಗಿಲ್ಲ. ವೀಡಿಯೊದಲ್ಲಿ (Viral Video) ನೀವು ಒಂಟೆಯನ್ನು ಆವರಣದಲ್ಲಿ ನಿಲ್ಲಿಸಿರುವುದನ್ನು ನೀವು ನೋಡಬಹುದು. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಜನರು ಈ ಹರಾಜಿನಲ್ಲಿ ಭಾಗವಹಿಸುತ್ತಿರುವುದನ್ನು ನೀವು ಕಾಣಬಹುದು.
ಇದನ್ನೂ ಓದಿ-Z+ Security To Mango: ಮಾವಿನ ಹಣ್ಣಿಗೆ 'Z' ಪ್ಲಸ್ ಭದ್ರತೆ, ಏನಿದು ಹೊಸ ವಿಷಯ ಅಂತೀರಾ?
ಅಷ್ಟಾಗ್ಯೂ ಆ ಒಂಟೆಯ ವಿಶೇಷತೆ ಏನು?
ಸೌದಿ ಅರೇಬಿಯಾದಲ್ಲಿ ಇಷ್ಟೊಂದು ದುಬಾರಿ ಬೆಲೆಗೆ ಹರಾಜಾದ ಒಂಟೆ ವಿಶ್ವದ ಅಪರೂಪದ ಒಂಟೆಗಳಲ್ಲಿ ಒಂದಾಗಿದೆ. ಈ ಒಂಟೆ ತನ್ನ ವಿಶೇಷ ಸೌಂದರ್ಯ ಮತ್ತು ಅನನ್ಯತೆಗೆ ವಿಶ್ವಾದ್ಯಂತ ಖ್ಯಾತಿ ಪಡೆದಿದೆ. ಪ್ರಪಂಚದಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಈದ್ (Ramadan 2022 News) ಹಬ್ಬದಂದು ಒಂಟೆಗಳ ಬಲಿ (Saudi Arabia Camel Qurbani) ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಸೌದಿ ಅರೇಬಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆಗಳ (Worlds Biggest Camel Festival) ಮೇಳವೂ ನಡೆಯುತ್ತದೆ ಎಂಬುದು ಇಲ್ಲಿ ಗಮನಾರ್ಹ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.