ವಾಷಿಂಗ್ಟನ್:  6 ಬಾರಿ ಬಾಹ್ಯಾಕಾಶ ಯಾತ್ರೆ ಮಾಡಿದ ಹಾಗೂ ಬಾಹ್ಯಾಕಾಶದ ಬಗ್ಗೆ 'ಅತೀ ಹೆಚ್ಚು ಅನುಭವ ಹೊಂದಿದ್ದ ಗಗನಯಾತ್ರಿ' ಅಮೆರಿಕಾದ ಜಾನ್ ಯಂಗ್ ವಿಧಿವಶರಾಗಿದ್ದಾರೆ.


COMMERCIAL BREAK
SCROLL TO CONTINUE READING

87 ವರ್ಷದ ಗಗನಯಾತ್ರಿ ಜಾನ್ ನ್ಯೂಮೋನಿಯಾದಿಂದ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಈ ವಿಷಯವನ್ನು ತಿಳಿಸಿರುವ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ 'ನಾಸಾದ ಮತ್ತು ವಿಶ್ವ ನುರಿತ ಗಗನಯಾತ್ರಿ'ಯನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಿಸಿದೆ. 
  
ಅಪೋಲೇ ಕಾರ್ಯಕ್ರಮದಡಿ ಚಂದ್ರ ಗ್ರಹದ ಮೇಲೆ ಜಾನ್ ನಡೆದಾಡಿದ್ದರು ಹಾಗೂ ಮೊದಲ ಬಾಹ್ಯಾಕಾಶ ಶಟಲ್ ಯೋಜನೆಯನ್ನು ಇವರೇ ನಿರ್ದೇಶಿಸಿದ್ದರು. ಅಷ್ಟೇ ಅಲ್ಲ ಜೆಮಿನಿ, ಅಪೋಲೋ ಹಾಗೂ ಸ್ಪೇಸ್ ಶಟಲ್ ಯೋಜನೆಯಡಿ  ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದ ಅಮೆರಿಕಾದ ಏಕೈಕ ಗಗನಯಾತ್ರಿ ಎಂಬ ಖ್ಯಾತಿಗೆ ಜಾನ್ ಪಾತ್ರರಾಗಿದ್ದರು. 6 ಬಾರಿ ಬಾಹ್ಯಾಕಾಶ ಯಾತ್ರೆ ಮಾಡಿದ ಮೊದಲ ಗಗನಯಾತ್ರಿ ಎಂಬ ದಾಖಲೆ ಕೂಡ ಜಾನ್ ಹೆಸರಲ್ಲಿದೆ.