ನವದೆಹಲಿ: World's Most Expensive Edible Oil - ಇತ್ತೀಚೆಗೆ ಅಡುಗೆ ಎಣ್ಣೆಯಿಂದ ಹಿಡಿದು ಪೆಟ್ರೋಲ್-ಡಿಸೇಲ್ ವರೆಗೆ ಎಲ್ಲಾ ಎಣ್ಣೆಗಳ ಬೆಲೆ ಗಗನ ಮುಖಿಯಾಗಿರುವುದರಿಂದ ಎಲ್ಲರೂ ತತ್ತರಿಸಿಹೋಗಿದ್ದಾರೆ ಅದರಲ್ಲೂ ವಿಶೇಷವಾಗಿ ಕೊರೊನಾ ಕಾಲದಲ್ಲಿ ಜನ ಸರ್ಕಾರವನ್ನು ದೂಷಿಸುತ್ತಿದ್ದಾರೆ ಮತ್ತು ಬೆಲೆ ಇಳಿಕೆಗಾಗಿ ಆಗ್ರಹಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಒಂದು ಲೀಟರ್ ಎಣ್ಣೆ ಬೆಲೆ ರೂ.22 ಸಾವಿರ 
ಇಂತಹ ಪರಿಸ್ಥಿತಿಯಲ್ಲಿ ವಿಶ್ವದಲ್ಲಿ ಒಂದು ಅಡುಗೆ ಎಣ್ಣೆ ಒಂದು ಲೀಟರ್ ಗೆ 22, 500 ರೂ.ಗಳಿಗೆ ಮಾರಾಟವಾಗುತ್ತಿದೆ ಎಂದರೆ ನಂಬುತ್ತೀರಾ? ಇದನ್ನು ಕೇಳಿ ನಿಮಗೂ ಕೂಡ ಆಶ್ಚರ್ಯವಾಗುತ್ತಿರಬಹುದು. ಆದರೆ, ಇದು ನಿಜ. ಆಫ್ರಿಕಾದ ಮೊರಾಕ್ಕೋದಲ್ಲಿ (Morocco) ಕಂಡು ಬರುವ ಈ ಅಡುಗೆ ಎಣ್ಣೆ (Edible Oil) ಇದೆ ಬೆಲೆಯಲ್ಲಿ ಮಾರಾಟವಾಗುತ್ತದೆ. ಈ ಎಣ್ಣೆಯನ್ನು ವಿಶ್ವದ ಅತ್ಯಂತ ದುಬಾರಿ ಅಡುಗೆ ಎಣ್ಣೆ (World's Most Expensive Edible Oil) ಎಂದು ಹೇಳಲಾಗುತ್ತದೆ.


ಮೊರಾಕ್ಕೋದಲ್ಲಿ ತಯಾರಾಗುತ್ತದೆ ಈ ಎಣ್ಣೆ
ಮೊರಾಕ್ಕೋದಲ್ಲಿ ಮಾರಾಟವಾಗುವ ಈ ತೈಲದ ಹೆಸರು ಆರಗನ್ ಆಯಿಲ್ (Argan Oil). 20 ವರ್ಷಗಳ ಹಿಂದೆ ಈ ಎಣ್ಣೆ 3 ಡಾಲರ್ ಪ್ರತಿ ಲೀಟರ್ ಗೆ ಮಾರಾಟವಾಗುತ್ತಿತ್ತು. ಆದರೆ, ಕಾಸ್ಮೆಟಿಕ್ ಕ್ಷೇತ್ರಕ್ಕೆ (Cosmetics) ಈ ಎಣ್ಣೆಯ ಲಾಭಗಳ ಕುರಿತು ತಿಳಿದಾಗ, ಈ ಎಣ್ಣೆಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇದೆ ಕಾರಣದಿಂದ ಈ ಎಣ್ಣೆ ಇಂದು 300 ಡಾಲರ್ ಪ್ರತಿ ಲೀಟರ್ ಅಂದರೆ 22,500 ರೂ. ಪ್ರತಿ ಲೀಟರ್ ಗೆ ಮಾರಾಟವಾಗುತ್ತಿದೆ. ಮೊರಾಕ್ಕೋದ ಸಾಂಪ್ರದಾಯಕ ತಿನಿಸುಗಳಲ್ಲಿ (Traditional Dishes) ಹಾಗೂ ಸೌಂದರ್ಯ ವರ್ಧಕಗಳ (Beauty Products) ತಯಾರಿಕೆಯಲ್ಲಿ ಬಳಸಲಾಗುತ್ತದೆ. 


ಇದನ್ನೂ ಓದಿ- ಭೋಜನದ ನಂತರ ಸಾಮಾನ್ಯವಾಗಿ ಮಾಡುವ ಈ ತಪ್ಪನ್ನು ಸರಿಪಡಿಸಿಕೊಳ್ಳಿ


ಬುಡಕಟ್ಟು ಜನಾಂಗದ ಮಹಿಳೆಯರು ಈ ಎಣ್ಣೆಯನ್ನು ತಯಾರಿಸುತ್ತಾರೆ
ಮೊರಾಕ್ಕೊದಲ್ಲಿ ವಾಸಿಸುವ ಅಮಾಝಿಗ್ ಬುಡಕಟ್ಟು ಜನಾಂಗದ (Tribal Women) ಮಹಿಳೆಯರು ಈ ಎಣ್ಣೆಯನ್ನು ತಯಾರಿಸುತ್ತಾರೆ. ಆರಗನ್ ಹೆಸರಿನ ಬೀಜಗಳಿಂದ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ. ಈ ಹಣ್ಣು ಮೊರಾಕ್ಕೋದ ಅಟ್ಲಾಂಟಿಕ್ ಕಡಲು ಹಾಗೂ ಅಟ್ಲಾಸ್ ನ ಮರಭೂಮಿಯಂತಹ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.  ಅಮಾಝಿಗ್ ಬುಡಕಟ್ಟು ಜನಾಂಗದ ಜನರು ಮರಗಳಿಂದ ಬೀಳುವ ಈ ಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಕಚ್ಚಾ ಆರಗನ್ ಹಸಿರು ಬಣ್ಣದ್ದಾಗಿರುತ್ತದೆ. ಹಣ್ಣಾಗಿರುವ ಹಣ್ಣು ಕಂದುಬಣ್ಣದ್ದಾಗಿರುತ್ತದೆ. ಇವುಗಳನ್ನು ಸಂಗ್ರಹಿಸಿದ ಬಳಿಕ ಅವರು ಆ ಹಣ್ಣುಗಳನ್ನು ಬಿಸಿಲಲ್ಲಿ ಒಣಗಿಸುತ್ತಾರೆ.


ಇದನ್ನೂ ಓದಿ- ಕರೋನಾ ಕಾಲದಲ್ಲಿ ತರಕಾರಿ ಖರೀದಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ.!


ರೆಡ್ ಗೋಲ್ಡ್ ಹೆಸರಿನಿಂದಲೂ ಕೂಡ ಇದು ಗುರುತಿಸಲಾಗುತ್ತದೆ
ಒಣಗಿದ ಹಣ್ಣುಗಳ ಮೇಲಿನ ತೊಗಟೆಯನ್ನು ತೆಗೆಯಲಾಗುತ್ತದೆ. ಬಳಿಕ ಅವುಗಳನ್ನು ಒಡೆದು ಅದರ ಬೀಜಗಳನ್ನು (Argan Seeds) ಸಂಗ್ರಹಿಸಲಾಗುತ್ತದೆ. ಬಳಿಕ ಅವುಗಳನ್ನು ಸಾಂಪ್ರದಾಯಿಕ ಗಾಣಗಳಲ್ಲಿ ಹಾಕಿ ಪುಡಿ ಮಾಡಲಾಗುತ್ತದೆ. ಇದೊಂದು ಅತ್ಯುತ್ತಮ ದರ್ಜೆಯ ಎಣ್ಣೆಯಾಗಿದೆ. ಹೀಗಾಗಿ ಅದರ ಬೆಲೆ ಕೂಡ ವಿಶ್ವದಲ್ಲಿಯೇ ಹೆಚ್ಚಾಗಿದೆ. ಈ ಎಣ್ಣೆಯನ್ನು ರೆಡ್ ಗೋಲ್ಡ್ (Red Gold) ಹೆಸರಿನಿಂದಲೂ ಕೂಡ ಕರೆಯಲಾಗುತ್ತದೆ.


ಇದನ್ನೂ ಓದಿ-Drumstick Leaves A Super Food: ಕೊರೊನಾ ಕಾಲದಲ್ಲಿ ಈ ಸೊಪ್ಪು ಮತ್ತು ಅದರ ಪೌಡರ್ ಒಂದು ಸೂಪರ್ ಫುಡ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ