ಆಫ್ರಿಕಾ ಖಂಡದ ರುವಾಂಡಾದಲ್ಲಿ ಗಿಟಾರಮ ಎಂಬ ಜೈಲು ಇದ್ದು, ಇಲ್ಲಿಗೆ ಅಪರಾಧಿಗಳು ಹೋಗಲು ಭಯಬೀಳುತ್ತಾರೆ. ಈ ಜೈಲಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೈದಿಗಳು ಇದ್ದು, ಪ್ರತೀ ದಿನ 6 ಸೆರೆವಾಸಿಗಳು ಸಾಯುತ್ತಾರೆ. ಅಷ್ಟೇ ಅಲ್ಲದೆ, ಅನೇಕ ಕೈದಿಗಳು ಶೌಚಾಲಯದಲ್ಲಿ ಮಲಗಬೇಕು ಎಂಬುದು ಇಲ್ಲಿನ ನಿಯಮ. ಅವರಿಗೆ ಊಟ, ಮಲಗಲು ಸರಿಆದ ವ್ಯವಸ್ಥೆ ಇಲ್ಲ. ಇಲ್ಲಿ ಒಬ್ಬ ಖೈದಿ ಸತ್ತರೆ ಇತರ ಕೈದಿಗಳು ಆತನ ಶವವನ್ನು ತಿನ್ನುವಂಥ ಪರಿಸ್ಥಿತಿ ಹಸಿವಿನಿಂದ ಉಂಟಾಗಿದೆ. ಇನ್ನೂ ಭಯಾನಕ ಸಂಗತಿಯೆಂದರೆ, ತಿನ್ನಲು ಏನೂ ಇಲ್ಲದಿದ್ದಾಗ, ಕೈದಿಗಳು ಜೀವಂತ ವ್ಯಕ್ತಿಯ ಮಾಂಸವನ್ನು ಅವನ ದೇಹದಿಂದ ತಿನ್ನಲು ಕಸಿದುಕೊಳ್ಳುತ್ತಾರಂತೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Flipkart Electronics Sale : ಕೇವಲ ₹750 ರೊ.ಳಗೆ ಖರೀದಿಸಿ ಈ ಟಾಪ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು! 


ಡೈಲಿ ಸ್ಟಾರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗಿಟಾರಮ ಜೈಲು ಅತ್ಯಂತ ಭಯಾನಕ ಜೈಲು ಎಂದು ಪರಿಗಣಿಸಲಾಗಿದೆ. ಇನ್ನು ಕೆಲವರು ಗಿಟಾರಮ ಜೈಲು ನರಕ ಇದ್ದಂತೆ ಎನ್ನುತ್ತಾರೆ. ಈ ಜೈಲು ಕಟ್ಟಡವನ್ನು 1960 ರಲ್ಲಿ ಬ್ರಿಟಿಷ್ ಕಾರ್ಮಿಕರ ಸೌಕರ್ಯಕ್ಕಾಗಿ ನಿರ್ಮಿಸಲಾಯಿತು ಮತ್ತು ನಂತರ ಇದನ್ನು 400 ಕೈದಿಗಳನ್ನು ಹಿಡಿದಿಡಲು ಜೈಲಾಗಿ ಪರಿವರ್ತಿಸಲಾಯಿತು. ಸದ್ಯ ಗಿಟಾರಮ ಜೈಲಿನಲ್ಲಿ 7 ಸಾವಿರಕ್ಕೂ ಹೆಚ್ಚು ಕೈದಿಗಳು ಇದ್ದಾರೆ. 1990 ರ ದಶಕದ ಮಧ್ಯಭಾಗದಲ್ಲಿ ರುವಾಂಡಾದಲ್ಲಿ ಭೀಕರ ನರಮೇಧ ನಡೆದಾಗ ಈ ಅಂಕಿ ಅಂಶವು 50 ಸಾವಿರವನ್ನು ತಲುಪಿತ್ತು.


ರುವಾಂಡಾದ ಗಿಟಾರಮ ಜೈಲಿನ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಕೆಲ ಕೈದಿಗಳು ಶೌಚಾಲಯದಲ್ಲಿ ಮಲಗಬೇಕಾಗುತ್ತದೆ. ಇದರಿಂದ ಅನೇಕ ಕೈದಿಗಳೂ ಅಸ್ವಸ್ಥರಾಗಿದ್ದಾರೆ. ಗಿಟಾರಮ ಜೈಲು ಆಡಳಿತದಿಂದ ಎಲ್ಲ ಕೈದಿಗಳಿಗೆ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಏನೇ ಆಗಲಿ ಗಿಟಾರಮ ಜೈಲಿಗೆ ಹೋಗಬಾರದು ಎಂದು ಪ್ರತಿಯೊಬ್ಬ ಅಪರಾಧಿಯೂ ಭಾವಿಸುತ್ತಾನೆ.


ಗಮನಾರ್ಹವೆಂದರೆ ಗಿಟಾರಮ ಜೈಲಿನ ಪರಿಸರ ತುಂಬಾ ಅಪಾಯಕಾರಿ. ಇಲ್ಲಿ ಕೈದಿಗಳಿಗೆ ಪ್ರತಿ ದಿನ ಅತ್ಯಲ್ಪ ಪ್ರಮಾಣದ ಆಹಾರವನ್ನು ನೀಡಲಾಗುತ್ತದೆ. ಜೈಲಿನಲ್ಲಿ ಹೆಚ್ಚು ಕೈದಿಗಳು ಇರುವುದರಿಂದ ಆಗಾಗ ಜಗಳ ನಡೆಯುತ್ತಿರುತ್ತದೆ. ಒಬ್ಬ ಖೈದಿಯು ಹೊಡೆದಾಟದಲ್ಲಿ ಸತ್ತಾಗ, ಇತರ ಕೈದಿಗಳು ಹಸಿವನ್ನು ನೀಗಿಸಲು ಅವನ ಮಾಂಸವನ್ನು ತಿನ್ನುತ್ತಾರೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲ, ಖೈದಿಗಳಿಗೆ ತಿನ್ನಲು ಸಿಗದಿದ್ದರೆ, ಅನೇಕ ಬಾರಿ ಅವರು ಜೀವಂತ ವ್ಯಕ್ತಿಯ ದೇಹದಿಂದ ಮಾಂಸವನ್ನು ಕಿತ್ತು ತಿನ್ನುತ್ತಾರಂತೆ.


ಇಲ್ಲಿನ ದೊಡ್ಡ ಸಮಸ್ಯೆಗಳಲ್ಲಿ ಹಸಿವಿನ ಹೊರತಾಗಿ ರೋಗಗಳೂ ಸೇರಿಕೊಂಡಿವೆ. ಜೈಲಿನಲ್ಲಿ ಕೊಳಕು ತುಂಬಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಖೈದಿಗಳು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್‌ನ ಬ್ರಿಗಿಟ್ಟೆ ಟ್ರೋಯಾನ್ ಗಿಟಾರಮ, ಅವರು ಜೈಲಿನಲ್ಲಿರುವ ಕೈದಿಗಳ ಚಿಕಿತ್ಸೆಗೆ ಸಹಾಯ ಮಾಡುತ್ತಾರೆ. ಅಸ್ವಸ್ಥ ಕೈದಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ: ಆರ್ಡರ್‌ ಕ್ಯಾನ್ಸಲ್‌ ಮಾಡಿದಕ್ಕೆ ಕೋಪ: ಮೆಕ್‌ ಡೊನಾಲ್ಡ್ಸ್‌ಗೆ ನುಗ್ಗಿ ತಾನೇ ಕುಕ್‌ ಮಾಡಿದ ಯುವತಿ


ಕೈದಿಗಳಿಗೆ ಆಗಾಗ್ಗೆ ವೈದ್ಯಕೀಯ ಸಹಾಯ ಬೇಕಾಗುತ್ತದೆ. ಇದರಲ್ಲಿ ಶೇಕಡಾ 38 ರಷ್ಟು ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗುತ್ತದೆ. ಇನ್ನು ನೆಲದ ಮೇಲೆ ಹರಡಿರುವ ಗಲೀಜುಗಳ ಮೇಲೆ ಬರಿಗಾಲಿನಲ್ಲಿ ನಿಲ್ಲುವುದರಿಂದ ಕೈದಿಗಳ ಪಾದಗಳು ಕೊಳೆಯುತ್ತವೆ. ಅಷ್ಟೇ ಅಲ್ಲದೆ, ಅನೇಕ ಕೈದಿಗಳ ಕಾಲುಗಳಲ್ಲಿ ಗ್ಯಾಂಗ್ರೀನ್ ರೋಗ ಕಾಣಿಸಿಕೊಂಡಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.