ವಿಶ್ವದ ಅತ್ಯಂತ ಹಿರಿಯ ಮಹಿಳೆ ನಿಧನ!: ಎಷ್ಟು ವಯಸ್ಸಾಗಿತ್ತು ಗೊತ್ತಾ..?
2019ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಕೇನ್ ತನಕಾರನ್ನು ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿತ್ತು.
ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ಮಹಿಳೆ ತಮ್ಮ 119ನೇ ವಯಸ್ಸಿನಲ್ಲಿ ನಿಧರಾಗಿದ್ದಾರೆ ಎಂದು ಜಪಾನ್‌ನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 1903ರ ಜನವರಿ 2ರಂದು ಜಪಾನ್‌ನ ನೈಋತ್ಯ ಫುಕುವೊಕಾ ಪ್ರದೇಶದಲ್ಲಿ ಜನಿಸಿದ್ದ ಕೇನ್ ತನಕಾ ಏಪ್ರಿಲ್ 19ರಂದು ನಿಧನರಾಗಿದ್ದಾರೆ.
ಕೇನ್ ತನಕಾ ಅವರು ಜನಿಸಿದ ವರ್ಷವೇ ರೈಟ್ ಸಹೋದರರು ಮೊದಲ ಬಾರಿಗೆ ವಿಮಾನ ಹಾರಿಸಿದ್ದರು. ಪ್ರಖ್ಯಾತ ವಿಜ್ಞಾನಿ ಮೇರಿ ಕ್ಯೂರಿ ಅವರು ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇತ್ತೀಚಿನವರೆಗೂ ಆರೋಗ್ಯವಾಗಿಯೇ ಇದ್ದ ಅವರು ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅಲ್ಲಿಯೇ ಅವರು ಬೋರ್ಡ್ ಆಟಗಳನ್ನು ಆನಂದಿಸುತ್ತಿದ್ದರು. ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಉತ್ಸಾಹ ಹೊಂದಿದ್ದ ಅವರು ಸೋಡಾ ಮತ್ತು ಚಾಕೊಲೇಟ್ ಸೇವಿಸಿ ಖುಷಿ ಪಡುತ್ತಿದ್ದರು.
ಇದನ್ನೂ ಓದಿ: ಚೀನಾ ಪ್ರವಾಸಿ ವೀಸಾ ರದ್ದುಗೊಳಿಸಿದ ಭಾರತ: ಕಾರಣ ಇಲ್ಲಿದೆ
ಕೇನ್ ತನಕಾ ಆರಂಭಿಕ ಜೀವನ
ಕೇನ್ ತನಕಾ ಒಂದು ಶತಮಾನದ ಹಿಂದೆ ಅಂದರೆ 1922ರಲ್ಲಿ ವಿವಾಹವಾದರು ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಅವರು ಒಟ್ಟು 4 ಮಕ್ಕಳಿಗೆ ಜನ್ಮ ನೀಡಿದ್ದರು ಮತ್ತು ಇನ್ನೊಂದು ಮಗುವನ್ನು ದತ್ತು ಪಡೆದು ಸಾಕಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಅವರು ನೂಡಲ್ ಅಂಗಡಿ ಮತ್ತು ರೈಸ್ ಕೇಕ್ ಅಂಗಡಿ ಸೇರಿದಂತೆ ಹಲವಾರು ವ್ಯವಹಾರಗಳನ್ನು ನಡೆಸುತ್ತಿದ್ದರು. ಮಹಿಳೆ ತಮ್ಮ ಜೀವನದಲ್ಲಿ ದೊಡ್ಡ ಕನಸು ಕಂಡಿದ್ದ ಅವರು 2021ರಲ್ಲಿ ಟೋಕಿಯೊ ಒಲಿಂಪಿಕ್ಸ್‍ಗಾಗಿ ಟಾರ್ಚ್ ರಿಲೇಯಲ್ಲಿ ಭಾಗವಹಿಸಲು ಗಾಲಿಕುರ್ಚಿ ಬಳಸಲು ಯೋಚಿಸಿದ್ದರು. ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಅವರ ಆ ಆಸೆ ಈಡೇರದೆ ಹಾಗೆ ಉಳಿಯಿತು.
2019ರಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಕೇನ್ ತನಕಾರನ್ನು ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿತ್ತು. ಈ ವೇಳೆ ನಿಮ್ಮ ಜೀವನದಲ್ಲಿ ಅತ್ಯಂತ ಸಂತೋಷ ಕ್ಷಣ ಯಾವುದು ಎಂದು ಅವರನ್ನು ಪ್ರಶ್ನಿಸಲಾಗಿತ್ತು. ಅದಕ್ಕೆ ‘ಈಗ’ ಎಂದು ಅವರು ಉತ್ತರಿಸಿದ್ದರು. ಬೆಳಗ್ಗೆ 6 ಗಂಟೆಗೆ ಏಳುವುದು, ಮಧ್ಯಾಹ್ನ ಗಣಿತಶಾಸ್ತ್ರವನ್ನು ಅಧ್ಯಯನ ಮಾಡುವುದು ಮತ್ತು ಕ್ಯಾಲಿಗ್ರಫಿ ಅಭ್ಯಾಸ ಮಾಡುವುದು ಕೇನ್ ತನಕಾರ ಪ್ರತಿದಿನದ ದಿನಚರಿಯಾಗಿತ್ತು.
ಇದನ್ನೂ ಓದಿ: FedEX: ಫೆಡೆಕ್ಸ್ ಕಂಪನಿ ಸಿಇಒ ಸಂಜಾತ ರಾಜ್ ಸುಬ್ರಹ್ಮಣ್ಯಂ: ಭಾರತೀಯರ ಹವಾ ಶುರು
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ತಮ್ಮ ನೆಚ್ಚಿನ ಆಟ ಒಥೆಲ್ಲೋ ಆಡಲು ಕೇನ್ ಹೆಚ್ಚಿನ ಸಮಯ ಕಳೆಯುತ್ತಿದ್ದರಂತೆ. ಕ್ಲಾಸಿಕ್ ಬೋರ್ಡ್ ಆಟದಲ್ಲಿ ಪರಿಣಿತಿ ಹೊಂದಿದ್ದ ಅವರು ವಿಶ್ರಾಂತಿ ಗೃಹದ ಸಿಬ್ಬಂದಿಯನ್ನು ಅನೇಕ ಬಾರಿ ಸೋಲಿಸಿದ್ದರು.
ತನಕಾ ಅವರ ಸಾವಿನ ಸ್ಥಳೀಯ ಗವರ್ನರ್ ಸೀಟಾರೊ ಹಟ್ಟೋರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ವರ್ಷದ ವಯೋವೃದ್ಧರ ದಿನ(ಸೆಪ್ಟೆಂಬರ್‍ನಲ್ಲಿ ರಾಷ್ಟ್ರೀಯ ರಜಾದಿನ)ವನ್ನು ಅವರ ನೆಚ್ಚಿನ ಸೋಡಾ ಮತ್ತು ಚಾಕೊಲೇಟ್‍ನೊಂದಿಗೆ ಆಚರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ವಿಶ್ವಬ್ಯಾಂಕಿನ ಅಂಕಿಅಂಶಗಳ ಪ್ರಕಾರ ಜಪಾನ್ ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಗಳನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಸುಮಾರು ಶೇ.28ರಷ್ಟು ಜನರು 65 ಅಥವಾ ಅದಕ್ಕಿಂತಲೂ ಹೆಚ್ಚಿನ ವಯಸ್ಸಿನವರಿದ್ದಾರೆ. 1997ರಲ್ಲಿ 122 ವರ್ಷ ಮತ್ತು 164 ದಿನ ಬದುಕಿದ್ದ ಫ್ರೆಂಚ್ ಮಹಿಳೆ ಜೀನ್ ಲೂಯಿಸ್ ಕಾಲ್ಮೆಂಟ್ ಅವರು ಗಿನ್ನೆಸ್ ದಾಖಲೆಯ ಪುಸ್ತಕ ಸೇರಿದ್ದ ಅತ್ಯಂತ ಹಳೆಯ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.