ಇದು ಜಗತ್ತಿನ ಅತಿ ಶ್ರೀಮಂತ ನಾಯಿ! ಬರೋಬ್ಬರಿ 30 ಶತಕೋಟಿ ಆಸ್ತಿ ಮಾಲೀಕ... ಈ ಶ್ವಾನದ ಹೆಸರಲ್ಲಿದೆ ಐಷಾರಾಮಿ ಬಂಗಲೆ, ಪ್ರೈವೇಟ್ ಬೋಟ್...
Richest Dog Of The World: ಈ ನಾಯಿಯ ಹೆಸರು ಗುಂಥರ್ VI, ಇದು ಜರ್ಮನ್ ಶೆಫರ್ಡ್ ನಾಯಿಯಾಗಿದ್ದು, ಸುಮಾರು 30 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದೆ. ಈ ಅಸಾಮಾನ್ಯ ಶ್ವಾನಕ್ಕೆ BMW ಕಾರಿನಲ್ಲೇ ಓಡಾಟ, ಸ್ವಂತವಾಗಿರುವ ಅನೇಕ ಬಂಗಲೆ ಕೂಡ ಇದೆ. ಅಷ್ಟೇ ಅಲ್ಲ ಈ ಬಂಗಲೆಗಳ ಸಮೀಪ ಫುಟ್ಬಾಲ್ ಕ್ಲಬ್ ಕೂಡ ಇದೆ.
Richest Dog Of The World: ನಾವೆಲ್ಲರೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಬಗ್ಗೆ ಕೇಳಿರುತ್ತೇವೆ, ಆದರೆ ವಿಶ್ವದ ಶ್ರೀಮಂತ ನಾಯಿಯ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಲ್ಲೊಂದು ನಾಯಿ ಇದೆ. ಅದರ ಜೀವನಶೈಲಿ ಸಾಮಾನ್ಯ ಮಾನವನ ಜೀವನಕ್ಕೆ ಹೋಲಿಸಿದರೆ, ಎಷ್ಟೋ ಪಟ್ಟು ಹೆಚ್ಚಿನ ಸೌಕರ್ಯಯುತವಾಗಿದೆಯಂತೆ. ಆ ನಾಯಿ ಯಾವುದು ಎಂಬುದನ್ನು ಮುಂದೆ ನೋಡೋಣ.
ಇದನ್ನೂ ಓದಿ: ಒಂದೇ ಏಟಿಗೆ 8 ವಿಕೆಟ್ ಕಬಳಿಸಿದ ಸ್ಪಿನ್ ಮಾಂತ್ರಿಕ: 64 ವರ್ಷ ಹಳೆಯ ವಿಶ್ವದಾಖಲೆ ಬ್ರೇಕ್!
ಈ ನಾಯಿಯ ಹೆಸರು ಗುಂಥರ್ VI, ಇದು ಜರ್ಮನ್ ಶೆಫರ್ಡ್ ನಾಯಿಯಾಗಿದ್ದು, ಸುಮಾರು 30 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದೆ. ಈ ಅಸಾಮಾನ್ಯ ಶ್ವಾನಕ್ಕೆ BMW ಕಾರಿನಲ್ಲೇ ಓಡಾಟ, ಸ್ವಂತವಾಗಿರುವ ಅನೇಕ ಬಂಗಲೆ ಕೂಡ ಇದೆ. ಅಷ್ಟೇ ಅಲ್ಲ ಈ ಬಂಗಲೆಗಳ ಸಮೀಪ ಫುಟ್ಬಾಲ್ ಕ್ಲಬ್ ಕೂಡ ಇದೆ.
ಗುಂಥರ್ VI ಪ್ರಸಿದ್ಧ ಪಾಪ್ ಗಾಯಕ ಮಡೋನಾ ಅವರ ಹಳೆಯ ಮನೆಯಲ್ಲಿ ವಾಸ ಮಾಡುತ್ತಿದೆ. ಇದಕ್ಕೆಂದೇ ವಿಹಾರ ನೌಕೆ ಕೂಡ ಇದೆ. ಬಹಾಮಾಸ್ ವಿಲ್ಲಾಗಳಿಂದಲೂ ಸೇವಕರು ಇಲ್ಲಿಗೆ ಬರುತ್ತಾರೆ. ಈ ನಾಯಿ ಕೆರಿಬಿಯನ್ ದ್ವೀಪಗಳಲ್ಲಿರುವ 6 ಬಿಲಿಯನ್ 81 ಕೋಟಿ ಮೌಲ್ಯದ ತನ್ನ ಮನೆಯಲ್ಲಿ ವಾಸಿಸುತ್ತಿದೆ. ದಿ ಸನ್ʼನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ನಾಯಿಯ ಹಣವನ್ನು ಇಟಲಿಯ 66 ವರ್ಷದ ಉದ್ಯಮಿ ಮೌರಿಜಿಯೊ ಮಿಯಾನ್ ನಿಯಂತ್ರಿಸುತ್ತಾರೆ.
ಇದನ್ನೂ ಓದಿ: ಈ 5 ರಾಶಿಯ ಜನರು ಶ್ರೀಮಂತರಾಗೋದಕ್ಕೆ ಹೆಚ್ಚು ಸಮಯವಿಲ್ಲ! ಸಂಪತ್ತು, ಯಶಸ್ಸಿನ ಜೊತೆ ಸರ್ಕಾರಿ ನೌಕರಿ
ಮಿಯಾನ್ ಗುಂಥರ್ ಕಾರ್ಪೊರೇಶನ್ʼನ ಸಿಇಒ ಆಗಿದ್ದು, ಈ ನಾಯಿಯ ಮೂಲ ಮಾಲೀಕರು ಬಿಟ್ಟುಹೋದ ಬಿಲಿಯನ್ʼಗಟ್ಟಲೆ ಮೌಲ್ಯದ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜರ್ಮನ್ ಕೌಂಟೆಸ್ ಕಾರ್ಲೋಟಾ ಲೆಬೆನ್ ಸ್ಟೈನ್ ಎಂಬವರು ತಮಗೆ ಉತ್ತರಾಧಿಕಾರಿಗಳಾಗಲಿ, ಯಾವುದೇ ನಿಕಟ ಸಂಬಂಧಿಕರಾಗಲಿ ಇಲ್ಲದ ಕಾರಣ ಈ ನಾಯಿಯ ಹೆಸರಿನಲ್ಲಿ ಎಲ್ಲಾ ಸಂಪತ್ತನ್ನು ಬರೆದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ