ವಿಶ್ವದ ಅತ್ಯಂತ ಚಿಕ್ಕ ೩ಜಿ ಮೊಬೈಲ್ ಬಿಡುಗಡೆ
Zini Mobiles ಕಂಪನಿ ವಿಶ್ವದ ಅತ್ಯಂತ ಚಿಕ್ಕ ಮೊಬೈಲ್ Zanco Tiny T೧೨ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಬಳಕೆದಾರರ ಉಪಯೋಗಕ್ಕಾಗಿ ಒಟ್ಟು ೧೪ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ನವದೆಹಲಿ:Zini Mobiles ಮೊಬೈಲ್ ತಯಾರಕ ಕಂಪನಿ ವಿಶ್ವದ ಅತ್ಯಂತ ಚಿಕ್ಕ ಮೊಬೈಲ್ Zanco Tiny T೧೨ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಅಚ್ಚರಿಗೆ ಈಡು ಮಾಡಿದೆ. ಈ ಮೊಬೈಲ್ ನ ಗಾತ್ರ ಒಂದು ಹೆಬ್ಬೆರಳಿಗೆ ಸಮನಾಗಿದೆ. ಈ ಮೊಬೈಲ್ ಫೋನ್ Zanco Tiny T೧ ಫೋನ್ ನ ಸುಧಾರಿತ ಆವೃತ್ತಿಯಾಗಿದ್ದು , ಇದರಲ್ಲಿ ಬಳಕೆದಾರರಿಗೆ ಕ್ಯಾಮೆರಾ ಸೇರಿದಂತೆ ಒಟ್ಟು ೧೪ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಸದ್ಯ ಈ ಫೋನ್ ಅನ್ನು ಅಮೇರಿಕಾದ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಗ್ರಾಹಕರು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿಯೂ ಕೂಡ ಈ ಫೋನ್ ಬುಕ್ ಮಾಡಬಹುದಾಗಿದೆ.
ಮೊಬೈಲ್ ಗಾತ್ರವನ್ನು ಹೊರತುಪಡಿಸಿ ವಿಶ್ವದ ಅತ್ಯಂತ ಚಿಕ್ಕ ಆಕಾರದ ಈ ಫೋನ್ ಮತ್ತೊಂದು ವಿಶೇಷತೆ ಹೊಂದಿದೆ. ಈ ಮೊಬೈಲ್ ಸಹಾಯದಿಂದ ಬಳಕೆದಾರರು ಫೋಟೋಗ್ರಾಫಿ ಕೂಡ ಮಾಡಬಹುದಾಗಿದೆ. ಅಂದರೆ ಬಳಕೆದಾರರು ಈ ಮೊಬೈಲ್ ಬಳಸಿ ಫೋಟೋ ಅಥವಾ ವಿಡಿಯೋ ಕೂಡ ಕ್ಯಾಪ್ಚರ್ ಮಾಡಬಹುದು. ಈ ಫೋನ್ ಮಾರುಕಟ್ಟೆ ಬೆಲೆ $೫೯ ನಿಗದಿಪಡಿಸಲಾಗಿದೆ ಅಂದರೆ, ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರೂ. ೪೯೦೦ ಆಗಿರಲಿದೆ
ವೈಶಿಷ್ಟ್ಯಗಳು ಹಾಗೂ ಸ್ಪೆಸಿಫಿಕೇಷನ್ಸ್
ಈ ಫೋನ್ ಆಕಾರ ನೋಡಿ ಇದರಲ್ಲಿ ಹೆಚ್ಚಿನ ವೈಶಿಷ್ಟ್ಯಗಳಿಲ್ಲ ಅಂತ ನೀವು ಊಹಿಸಿರಬಹುದು. ಆದರೆ, ವಿಡಿಯೋ ರಿಕಾರ್ಡಿಂಗ್ ಜೊತೆಗೆ ಈ ಸ್ಮಾರ್ಟ್ ಫೋನ್ ನಲ್ಲಿ ೩೨ ಜಿಬಿ ಸಪೋರ್ಟ್ ಮಾಡುವ ಮೈಕ್ರೋ ಎಸ್.ಡಿ ಸ್ಲಾಟ್ ನೀಡಲಾಗಿದೆ. ಇದರ ಜೊತೆಗೆ FM ರೇಡಿಯೋ, MP೩&MP೪ ಫೈಲ್ ಸಪೋರ್ಟ್, ಪ್ಲೇ ರೆಟ್ರೋ ಗೇಮ್ಸ್, ಅಲಾರ್ಮ್ ಕ್ಲಾಕ್ ಹಾಗೂ ಕ್ಯಾಲೆಂಡರ್ ಗಳನ್ನೂ ಸಹ ನೀಡಲಾಗಿದೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ SOS ವೈಶಿಷ್ಟ್ಯವನ್ನೂ ಸಹ ನೀಡಲಾಗಿದೆ. ಇದರ ಇನ್ನೊಂದು ವೈಶಿಷ್ಟ್ಯ ಎಂದರೆ, ಇದರಲ್ಲಿರುವ ಟಾಲ್ಕ್ ಅಂಡ್ ಟೆಕ್ಸ್ಟ್ ವೈಶಿಷ್ಟ ಬಳಸಿ ನೀವು ಕೇವಲ ಮಾತನಾಡುವ ಮೂಲಕ ಸಂದೇಶ ಟೈಪ್ ಮಾಡಬಹುದು. ಇದರಲ್ಲಿ ಫ್ರಂಟ್ ಮತ್ತು ಬ್ಯಾಕ್ ಎರಡೂ ಕ್ಯಾಮ್ ಗಳನ್ನೂ ನೀಡಲಾಗಿದೆ. ಈ ಮೊಬೈಲ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ೬ ಗಂಟೆಗಳ ಕಾಲ ನೀವು ಇದನ್ನು ಬಳಸಬಹುದು. ಈ ಫೋನ್ ನ್ ಬ್ಯಾಟ್ರಿ ಸ್ಟಾಂಡ್ ಬೈ ಅವಧಿ ೭ದಿನ ಆಗಿರಲಿದೆ