WTO 13th Ministerial Meeting in Abu Dhabi : ನಾಳೆಯಿಂದ (ಫೆಬ್ರವರಿ 26) ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುದಾಬಿಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ 13ನೇ ಸಚಿವರ ಸಭೆ ಆರಂಭವಾಗಲಿದ್ದು, ಈ ಸಭೆಯಲ್ಲಿ ಭಾರತೀಯ ನಿಯೋಗವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವ ವಹಿಸಲಿದ್ದಾರೆ. 


COMMERCIAL BREAK
SCROLL TO CONTINUE READING

ಸಭೆಯಲ್ಲಿ ಭಾರತವು ಮೀನುಗಾರಿಕೆ ಸಬ್ಸಿಡಿಗಳು, ಕೃಷಿ ಸುಧಾರಣೆಗಳು, ಆಹಾರ ಭದ್ರತೆ, ವಿವಾದಗಳ ಇತ್ಯರ್ಥ ಸೇರಿದಂತೆ ವಿವಿಧ ವಿಷಯಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವುದರ ಕುರಿತು ಪ್ರಸ್ತಾಪ ಮಾಡಲಿದೆ.


ಇದನ್ನು ಓದಿ :Haryana INLD ಪಕ್ಷದ ಅಧ್ಯಕ್ಷ ನಫೆ ಸಿಂಗ್ ರಾಠಿ ಗುಂಡಿಟ್ಟು ಹತ್ಯೆ, ಮೂವರು ಅಂಗರಕ್ಷಕರಿಗೆ ಗಾಯ


ಆಹಾರ ಭದ್ರತೆಗಾಗಿ ಸರ್ಕಾರವು ಧಾನ್ಯ ಸಂಗ್ರಹಿಸಿ ಇರಿಸುವ ವಿಚಾರ ಹಾಗೂ ಮೀನುಗಾರರ ಹಿತರಕ್ಷಣೆಯಂತಹ ವಿಚಾರಗಳಿಗೆ ಖಾಯಂ ಪರಿಹಾರ ಕಂಡುಕೊಳ್ಳಬೇಕು ಎಂದು ಭಾರತವು ಒತ್ತಾಯಿಸಲಿದೆ. 


ಅಲ್ಲದೆ ಚೀನಾ ಮುಂದಿಟ್ಟಿರುವ ಹೂಡಿಕೆ ಉತ್ತೇಜನ ಒಪ್ಪಂದ ಪ್ರಸ್ತಾವವನ್ನು ಭಾರತವು ಸಭೆಯಲ್ಲಿ ವಿರೋಧಿಸಲಿದೆ.


ಇದನ್ನು ಓದಿ : Housewarming Ceremony: ಗೃಹ ಪ್ರವೇಶದ ವೇಳೆ ಹಾಲು ಏಕೆ ಉಕ್ಕಿಸಲಾಗುತ್ತದೆ..! ನಿಮಗಿದು ಗೊತ್ತೆ?


ಉಕ್ರೇನ್ - ರಷ್ಯಾ ಯುದ್ಧ ಮತ್ತು ಇಸ್ರೇಲ್ ಹಮಾಸ್ ನಲ್ಲಿನ ಸಂಘರ್ಷದಿಂದಾಗಿ ಉಂಟಾಗಿರುವ ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ 164 ಸದಸ್ಯ ರಾಷ್ಟ್ರಗಳ ಸಚಿವರು ಈ ಸಭೆಯಲ್ಲಿ ಸೇರಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.