ಬೆಂಗಳೂರು : ಸಾವು ಯಾರಿಗೆ.. ಯಾವಾಗ.. ಹೇಗೆ.. ಬರುತ್ತೆ ಅನ್ನೋದೆ ಗೊತ್ತಾಗಲ್ಲ. ಎಷ್ಟೇ ಗಟ್ಟಿಮುಟ್ಟಾಗಿದ್ದರು ಮೃತ್ಯುವಿನ ಮುಂದೆ ಎಲ್ಲರೂ ಧೂಳಿಗೆ ಸಮ. ಸದ್ಯ 30ರ ಹರೆಯದ WWE ಸ್ಟಾರ್‌ ಸಾರಾ ಲೀ ಮರಣ ಅವರ ಅಭಿಮಾನಿಗಳನ್ನು ದಿಗ್ಭ್ರಾಂತರನ್ನಾಗಿಸಿದ್ದು, ಎರಡು ದಿನಗಳ ಹಿಂದಷ್ಟೇ ರಿಂಗ್‌ಗೆ ಮರಳುವುದಾಗಿ ಹೇಳಿದ್ದ ಸಾರಾ ಇಂದು ಇಹಲೋಕ ತ್ಯಜಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ದಿ ಸ್ಟ್ರಾಂಗೆಸ್ಟ್‌ ವುಮನ್ ಸಾರಾ ಲೀ WWF  ಫೈಟರ್‌, ಸಾಯುವ ಹಿಂದಿನ ದಿನ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿ, ಸೈನಸ್ ಸೋಂಕಿನ ನಂತರ ಸತತವಾಗಿ ಎರಡು ದಿನ ಜಿಮ್‌ಗೆ ಹೋಗಲು ತಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದರು. ಆದ್ರೆ ಏನಾಯ್ತೊ ಎನೊ ಗೊತ್ತಿಲ್ಲ ಸಾರಾ ಕುಟುಂಬ ಅವಳ ಸಾವಿನ ಸುದ್ದಿಯನ್ನು ಬಿತ್ತರಿಸಿತ್ತು. ಇದನ್ನು ಕೇಳಿದ ಫ್ಯಾನ್ಸ್‌ಗೆ ನಂಬಲಾರದಂತಾಗಿದೆ. ಏಕೆಂದರೆ ಕಟ್ಟು ನಿಟ್ಟಾದ ಆಹಾರ ಕ್ರಮವನ್ನು ಆಚರಿಸಿ ಆರೋಗ್ಯವಾಗಿದ್ದ ಸಾರಾ ಸಾವು ನಂಬಲಸಾಧ್ಯ.


ಇದನ್ನೂ ಓದಿ: Bangalore : ಬಾಲಕಿ ಮೇಲೆ ಗ್ಯಾಂಗ್ ರೇಪ್ ಆರೋಪ, ನಾಲ್ವರು ಪೊಲೀಸ್‌ ವಶಕ್ಕೆ


ಸಾರಾ ಅಲಿ ನಿಜವಾದ ಹೆಸರು ಸಾರಾ ವೆಸ್ಟನ್. 2015 ರಲ್ಲಿ ಅವರು ʼಟಫ್ ಎನಫ್ʼ ಅನ್ನು ಗೆದ್ದು, WWE ಒಪ್ಪಂದಕ್ಕೆ ಒಳಪಟ್ಟು ಆಟ ಆಡುತ್ತಿದ್ದರು. ಆದ್ರೆ ನಿನ್ನೆ (ಅ.7) ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಆಕೆಯ ತಾಯಿ, ಟೆರ್ರಿ ಲೀ, ಫೇಸ್‌ಬುಕ್‌ನಲ್ಲಿ ಹೇಳಿಕೆಯನ್ನು ನೀಡಿದ್ದು, ʼನಮ್ಮ ಸಾರಾ ವೆಸ್ಟನ್ ಯೇಸುವಿನೊಂದಿಗೆ ಇರಲು ಹೋಗಿದ್ದಾರೆ ಎಂದು ಭಾವುಕರಾಗಿ ಸಾರಾ ನಿಧನದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಆದ್ರೆ ಅವರ ಸಾವಿನ ಕಾರಣವನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ.


ಒಟ್ಟಾರೆಯಾಗಿ ಫಿಟ್ಟಾಗಿದ್ದ ಲೀ ಸಾವು ನಂಬಲು ಅಸಾಧ್ಯವಾಗಿದೆ. ಸೂಕ್ತ ಆಹಾರ ಕ್ರಮ, ದಿನ ನಿತ್ಯ ವ್ಯಾಯಾಮ ಮಾಡಿದ್ರೆ ಆರೋಗ್ಯ ಚನ್ನಾಗಿರುತ್ತೆ ಎನ್ನುತ್ತಾರೆ ಆದ್ರೆ ಇಂದು 30ರ ಹರೆಯದ ಲೀ ಇಲ್ಲ. ಜಿಮ್‌ಗ್‌ ಹೋಗುವ ಹಲವಾರು ಯುವಕರು ಸಹ ಸಾವನ್ನಪ್ಪಿರುವ ಸುದ್ದಿಗಳು ಸಹ ವರದಿಯಾಗಿದೆ. ಆಗಿದ್ರೆ ಜಿಮ್‌ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬ ಪ್ರಶ್ನೆ ಯುವಕರ ತಲೆಯಲ್ಲಿ ಸುತ್ತುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ