Yevgeny Prigozhin: 62 ವರ್ಷ ವಯಸ್ಸಿನ ಪ್ರಿಗೊಝಿನ್ ತನ್ನ ಖಾಸಗಿ ಸೇನಾಪಡೆಯ ಸೈನಿಕರನ್ನು ಮಧ್ಯಪೂರ್ವ ಮತ್ತು ಆಫ್ರಿಕಾ ಖಂಡಗಳ ಯುದ್ಧಗಳಿಗೆ ಕಳುಹಿಸಿದ್ದ. ಆದರೆ ಕಳೆದ ಫೆಬ್ರವರಿ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಕ್ರೇನ್ ಯುದ್ಧಕ್ಕೆ ತೆರಳುವಂತೆ ಆದೇಶಿಸಿದರು.


COMMERCIAL BREAK
SCROLL TO CONTINUE READING

ದೀರ್ಘಕಾಲದ ತನಕ ಕ್ರೆಮ್ಲಿನ್ ಮಿತ್ರನಾಗಿದ್ದ ಪ್ರಿಗೊಝಿನ್ ಕಳೆದ ವರ್ಷ ತಾನು ವ್ಯಾಗ್ನರ್ ಗುಂಪನ್ನು ಆರಂಭಿಸಿದ್ದೇನೆ ಮತ್ತು ರಷ್ಯನ್ ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಖೈದಿಗಳಿಗೆ ಕ್ಷಮಾದಾನ ನೀಡಿ, ಅದರ ಬದಲಿಗೆ ವ್ಯಾಗ್ನರ್ ಗುಂಪಿನಲ್ಲಿ ಸೈನಿಕರಾಗಿ ಹೋರಾಡಲು ಅವಕಾಶ ಕಲ್ಪಿಸಿದ್ದೇನೆ ಎಂದು ಒಪ್ಪಿಕೊಂಡ.


ಪ್ರಿಗೊಝಿನ್ ರಷ್ಯನ್ ರಕ್ಷಣಾ ಸಚಿವಾಲಯ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾನೆ. ಆತನ ನೇತೃತ್ವದ ವ್ಯಾಗ್ನರ್ ಪಡೆ ಬಾಖ್‌ಮುತ್ ಸೇರಿದಂತೆ ಹಲವು ಪ್ರಮುಖ ಉಕ್ರೇನ್ ಪಟ್ಟಣಗಳನ್ನು ವಶಪಡಿಸಿಕೊಳ್ಳಲು ನೆರವಾಗಿರುವುದರಿಂದ ಆತ ರಷ್ಯಾದಲ್ಲಿ ಪ್ರಸಿದ್ಧ ವ್ಯಕ್ತಿಯೂ ಆಗಿದ್ದಾನೆ.


"ರಷ್ಯಾದ ಮಿಲಿಟರಿ ನಾಯಕತ್ವ ತಪ್ಪು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಕು" ಎಂದು ಪ್ರಿಗೊಝಿನ್ ಶುಕ್ರವಾರ ಕರೆ ನೀಡಿದ್ದು, ರಷ್ಯನ್ ಸೇನೆ ತನ್ನ ವ್ಯಾಗ್ನರ್ ಗುಂಪಿನ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾನೆ.


ಇದನ್ನೂ ಓದಿ: PM Modi in Egypt: 26 ವರ್ಷದ ಬಳಿಕ ಈಜಿಪ್ಟ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿ!  


ಪ್ರಿಗೊಝಿನ್ ರಷ್ಯನ್ನರ ಬಳಿ ತಾನು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ಇದು ದಂಗೆಯಲ್ಲ ಎಂದು ಹೇಳಿದ್ದಾನೆ. ಆದರೆ ರಷ್ಯಾದ ರಕ್ಷಣಾ ವಿಭಾಗ, ಎಫ್ಎಸ್‌ಬಿ, ಆತನ ವಿರುದ್ಧ ಕ್ರಿಮಿನಲ್ ವಿಚಾರಣೆ ಆರಂಭಿಸಿ, ಈ ಘಟನೆಯನ್ನು ಸಶಸ್ತ್ರ ದಂಗೆ ಎಂದು ಕರೆದಿದೆ.


ಪ್ರಿಗೊಝಿನ್ ರಕ್ಷಣಾ ಸಚಿವಾಲಯದೊಡನೆ ಹಲವು ತಿಂಗಳುಗಳಿಂದಲೇ ಅಧಿಕಾರಕ್ಕಾಗಿ ಹೋರಾಟದಲ್ಲಿ ನಿರತವಾಗಿದ್ದ. ಆತನ ಪಡೆಗಳು ಪೂರ್ವ ಉಕ್ರೇನಿನಲ್ಲಿ ಯುದ್ಧಗಳನ್ನು ನಡೆಸಿದ್ದು, ರಷ್ಯಾಗೆ ಹಲವು ಲಾಭಗಳನ್ನೂ ಗಳಿಸಿಕೊಟ್ಟಿತ್ತು.


ಆತ ಈ ಮೊದಲೇ ರಷ್ಯನ್ ಸೇನೆ ವ್ಯಾಗ್ನರ್ ಪಡೆಗಳ ಗೆಲುವನ್ನು ಮಾಸ್ಕೋ ತನ್ನದು ಎಂದು ಪ್ರತಿಪಾದಿಸಲು ಪ್ರಯತ್ನಿಸುತ್ತಿದ್ದು, ಇದು ರಷ್ಯಾದ ರಾಕ್ಷಸೀಯ ಅಧಿಕಾರ ಎಂದು ಆರೋಪಿಸಿದ್ದಾನೆ.


ಪ್ರಿಗೊಝಿನ್ ರಷ್ಯಾದ ರಕ್ಷಣಾ ಸಚಿವರಾದ ಸೆರ್ಗೇ ಶಿಗೋವ್ ಅವರು ಮತ್ತು ಇತರ ಹಿರಿಯ ಅಧಿಕಾರಿಗಳೇ ತನ್ನ ಪಡೆಗಳ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದಾನೆ. ಮಾಸ್ಕೋ ತನ್ನ ಪಡೆಗಳಿಗೆ ಅವಶ್ಯಕವಾಗಿದ್ದ ಆಯುಧಗಳನ್ನು ಪೂರೈಸುತ್ತಿರಲಿಲ್ಲ ಎಂದಿದ್ದಾನೆ.


ಆತನ ಮಾತುಗಳಿಗೆ ಪೂರಕ ಎನ್ನುವಂತೆ, ರಷ್ಯಾದ ಜನರಲ್‌ಗಳು ಯುದ್ಧದಲ್ಲಿ ಹೋರಾಡುತ್ತಿಲ್ಲ ಎಂದು ಟೀಕೆಗೆ ಒಳಗಾಗಿದ್ದು, ಪ್ರಿಗೊಝಿನ್ ಯುದ್ಧರಂಗದಲ್ಲಿ ಮುಂಚೂಣಿಯಲ್ಲಿರುವ ಸೈನಿಕರೊಡನೆ ಫೋಟೋ ತೆಗೆಸಿಕೊಂಡಿರುವುದು ಕಂಡುಬರುತ್ತಿದೆ.


ಆತ ಈ ವರ್ಷಾರಂಭದಲ್ಲಿ ಸು-24 ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ತೆಗೆದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರೊಡನೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜ಼ೆಲೆನ್‌ಸ್ಕಿಗೆ ವಾಯು ಯುದ್ಧಕ್ಕೆ ಬರುವಂತೆ ಸವಾಲೆಸೆದಿದ್ದ.


ಇದನ್ನೂ ಓದಿ: Wagner Group Mutiny: ವ್ಯಾಗನರ್ ಗುಂಪಿನ ದಂಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಷ್ಯಾ, ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ಎಂದ ಪುಟಿನ್


ಪುಟಿನ್ ಅವರ ಸ್ವಂತ ಊರಾದ ಸೈಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ಹೊಟೆಲ್ ನಡೆಸುತ್ತಿದ್ದ, ಸೋವಿಯತ್ ಕಾಲದಲ್ಲಿ ಬಹುತೇಕ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಪ್ರಿಗೊಝಿನ್ ವರ್ಷಗಳ ಕಾಲ ತನಗೂ ವ್ಯಾಗ್ನರ್ ಗುಂಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾ ಬಂದಿದ್ದ. ಆದರೆ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಿಗೊಝಿನ್ ತಾನೇ ವ್ಯಾಗ್ನರ್ ಸೇನೆಯನ್ನು ಆರಂಭಿಸಿದ್ದು, ಸೈಂಟ್ ಪೀಟರ್ಸ್‌ಬರ್ಗ್ ಅದರ ನೆಲೆಯಾಗಿದೆ ಎಂದಿದ್ದಾನೆ.


ಕಳೆದ ವರ್ಷ ಒಂದು ವೀಡಿಯೋ ಸಾಕಷ್ಟು ಹರಿದಾಡಿತ್ತು. ಅದರಲ್ಲಿ ಪ್ರಿಗೊಝಿನ್ ರೀತಿಯಲ್ಲೇ ಕಾಣುತ್ತಿದ್ದ ಓರ್ವ ಬೋಳುತಲೆಯ ವ್ಯಕ್ತಿ ಜೈಲಿನಲ್ಲಿ ಖೈದಿಗಳಿಗೆ ರಷ್ಯಾ ಪರವಾಗಿ ಉಕ್ರೇನ್‌ನಲ್ಲಿ ಯುದ್ಧ ಮಾಡಲು ಗುತ್ತಿಗೆ ನೀಡುತ್ತಿದ್ದ. ಆ ಗುತ್ತಿಗೆಯಲ್ಲಿದ್ದ ನಿಬಂಧನೆಗಳಂತೂ ಭಯ ಹುಟ್ಟಿಸುವಂತಿದ್ದವು.


"ನೀವು ಒಂದು ವೇಳೆ ಉಕ್ರೇನ್ ತಲುಪಿದ ಬಳಿಕ ಈ ಯುದ್ಧ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಭಾವಿಸಿದರೆ, ನೀವು ಪಲಾಯನ ಮಾಡುತ್ತಿದ್ದೀರಿ ಎಂದು ಪರಿಗಣಿಸಿ, ನಿಮಗೆ ಗುಂಡಿಕ್ಕಲಾಗುವುದು" ಎಂದು ಆತ ಹೇಳುತ್ತಿದ್ದ.


ಯಾರೂ ಶತ್ರುಗಳ ಕೈಯಲ್ಲಿ ಸಿಕ್ಕಿಬೀಳುವಂತಿಲ್ಲ. ನೂತನ ಸದಸ್ಯರು ಸಿಕ್ಕಿಬೀಳುವ ಅಪಾಯವನ್ನು ಎದುರಿಸಲು ಕೈಯಲ್ಲಿ ಗ್ರೆನೇಡ್ ಇಟ್ಟುಕೊಂಡಿರಬೇಕು ಎಂದು ಪ್ರಿಗೊಝಿನ್ ಹೇಳಿದ್ದ.


"ಒಂದು ವೇಳೆ ನಾನೇನಾದರೂ ಒಬ್ಬ ಖೈದಿಯಾಗಿದ್ದರೆ, ಇಂತಹ ಸ್ನೇಹಿತರ ಸೇನೆಯನ್ನು ಸೇರುವುದು ನನ್ನ ಕನಸಾಗಿರುತ್ತಿತ್ತು. ಆ ಮೂಲಕ ನಾನು ನನ್ನ ಮಾತೃಭೂಮಿಯ ಋಣವನ್ನು ಕೇವಲ ತೀರಿಸುವುದು ಮಾತ್ರವಲ್ಲ, ಬಡ್ಡಿ ಸಮೇತ ತೀರಿಸಲು ಸಾಧ್ಯವಾಗುತ್ತಿತ್ತು" ಎಂದು ಪ್ರಿಗೊಝಿನ್ ಹೇಳಿರುವುದಾಗಿ ಆತನ ಸಂಸ್ಥೆ ಕಾನ್‌ಕಾರ್ಡ್ ತಿಳಿಸಿತ್ತು.


ಓರ್ವ ವ್ಯಾಗ್ನರ್ ಸೈನಿಕ ಪರಾರಿಯಾಗಲು ಪ್ರಯತ್ನಿಸುವಾಗ, ಆತನನ್ನು ಸುತ್ತಿಗೆಯಿಂದ ಹೊಡೆದು ಕೊಲ್ಲುವ ವೀಡಿಯೋ ಹರಿದಾಡುತ್ತಿತ್ತು. ಆ ಕೊಲೆಯನ್ನು ಪ್ರಿಗೊಝಿನ್ ಹೊಗಳಿ, ಸಮರ್ಥಿಸಿಕೊಂಡು, ಸತ್ತ ವ್ಯಕ್ತಿಯನ್ನು ನಾಯಿ ಎಂದು ಜರೆದಿದ್ದ.


ಪ್ರಿಗೊಝಿನ್ ರಷ್ಯನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಸೈಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ತೀರಾ ಸಾಮಾನ್ಯ, ಬಡ ವರ್ಗದ ಹುಡುಗನಾಗಿದ್ದ. ಆದರೆ ಬಳಿಕ ಆತ ಅಧ್ಯಕ್ಷ ಪುಟಿನ್ ಜೊತೆಗಾರನಾಗಿ, ಅವರ ಆಪ್ತ ಗುಂಪಿಗೆ ಸೇರ್ಪಡೆಯಾಗಿದ್ದ.


ಸೋವಿಯತ್ ಒಕ್ಕೂಟದ ಕೊನೆಯ ವರ್ಷಗಳಲ್ಲಿ ಪ್ರಿಗೊಝಿನ್ ಡಕಾಯಿತಿ ಮತ್ತು ವಂಚನೆಯ ಆರೋಪದಡಿ ಒಂಬತ್ತು ವರ್ಷಗಳ ಜೈಲುವಾಸಕ್ಕೆ ಗುರಿಯಾಗಿದ್ದ. 1990ರ ಅವ್ಯವಸ್ಥೆಯ ಸಂದರ್ಭದಲ್ಲಿ ಆತ ಫಾಸ್ಟ್ ಫುಡ್ ಉದ್ಯಮ ಆರಂಭಿಸಿದ್ದ. ಅದು ತಕ್ಕಮಟ್ಟಿಗೆ ಯಶಸ್ವಿಯೂ ಆಗಿತ್ತು.


ಬಳಿಕ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ಪ್ರಿಗೊಝಿನ್ ಸೈಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ಒಂದು ಪ್ರಮುಖ ಸ್ಥಳದಲ್ಲಿ ಹೋಟೆಲ್ ಆರಂಭಿಸಿದ. ಅಲ್ಲಿ ಅಧ್ಯಕ್ಷ ಪುಟಿನ್ ಅವರೂ ಊಟ ಮಾಡುತ್ತಿದ್ದರು ಎನ್ನಲಾಗಿದೆ. ಬಳಿಕ ಆತ ಸ್ಥಳೀಯ ರಾಜಕಾರಣದಲ್ಲಿ ತೊಡಗಲು ಕೆಜಿಬಿಯಿಂದ ಹೊರನಡೆದ.


ಒಂದು ಹಂತದಲ್ಲಿ, ಆತ ಆರಂಭಿಸಿದ ಕಂಪನಿ ಕ್ರೆಮ್ಲಿನ್‌ಗೆ ಊಟ ಪೂರೈಸುತ್ತಿತ್ತು. ಆದ್ದರಿಂದ ಜನರು ಅವನನ್ನು ಪುಟಿನ್ ಅವರ ಅಡಿಗೆಯವ ಎಂದೂ ಕರೆಯುತ್ತಿದ್ದರು.


ಪ್ರಿಗೊಝಿನ್ ಸರ್ಕಾರಿ ಗುತ್ತಿಗೆ್ಳ ಮೂಲಕ ಸಾಕಷ್ಟು ಹಣ ಮಾಡಿರುವ ಬಿಲಿಯನೇರ್ ಎಂದು ಹಲವರು ಹೇಳುತ್ತಾರಾದರೂ, ಆತ ನಿಖರವಾಗಿ ಎಷ್ಟು ಹಣ ಸಂಪಾದಿಸಿದ್ದಾನೆ ಎನ್ನುವುದು ಯಾರಿಗೂ ತಿಳಿದಿಲ್ಲ.


2016ರಲ್ಲಿ ಪ್ರಿಗೊಝಿನ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ "ಟ್ರೋಲ್ ಫ್ಯಾಕ್ಟರಿ" ಮೂಲಕ ಪ್ರಭಾವ ಬೀರಲು ಪ್ರಯತ್ನಿಸಿದ್ದ ಎಂದು ವಾಷಿಂಗ್ಟನ್ ಆತನ ವಿರುದ್ಧ ಆರೋಪಿಸಿದೆ.


ಆ ಸಮಯದಲ್ಲಿ ಆತ ತನಗೂ ಆ ಘಟನೆಗೂ ಯಾವುದೇ ಸಂಬಂಧ ಇಲ್ಲವೆಂದಿದ್ದು, 2020ರಲ್ಲಿ ಅಮೆರಿಕಾದ ಬಳಿ ಪರಿಹಾರ ರೂಪದಲ್ಲಿ 50 ಬಿಲಿಯನ್ ಡಾಲರ್ ನೀಡುವಂತೆ ಆಗ್ರಹಿಸಿದ್ದ.


ಪಾಶ್ಚಾತ್ಯ ರಾಷ್ಟ್ರಗಳು ಪ್ರಿಗೊಝಿನ್ ಖಾಸಗಿ ಸೇನೆ ಮಾಲಿಯಲ್ಲಿ ಮಿಲಿಟರಿ ದಂಗೆ ನಡೆಸಲು ಸಹಾಯ ಮಾಡಿದೆ ಎಂದು ಆರೋಪಿಸಿವೆ. ಇದರ ಪರಿಣಾಮವಾಗಿ ಅಲ್ಲಿ ಬಹುತೇಕ ಒಂದು ದಶಕ ನಡೆದ ಮಿಲಿಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಫ್ರಾನ್ಸ್ ನಿರ್ಧರಿಸಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.