TikTokಗೆ ಟಕ್ಕರ್ ನೀಡಲು ಬಂತು Reels ವೈಶಿಷ್ಟ್ಯ, ಬಿಡುಗಡೆಯಾಗುತ್ತಲೇ 100 ಬಿಲಿಯನ್ ಕ್ಲಬ್ ಸೇರಿದ ಜ್ಹುಕರ್ಬರ್ಗ್
Facebook ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ 100 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಉದ್ಯಮಿಗಳ ಕ್ಲಬ್ ಗೆ ಸೇರಿದ್ದಾರೆ.
ನ್ಯೂಯಾರ್ಕ್: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು 100 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿರುವ ಉದ್ಯಮಿಗಳ ಪಟ್ಟಿಗೆ ಸೇರಿದ್ದಾರೆ. ಫೇಸ್‌ಬುಕ್ ಇನ್ಕಾರ್ಪೋರೆಶನ್ ಷೇರುಗಳ ಬೆಲೆ ಏರಿಕೆಯಿಂದಾಗಿ, ಅವರ ಆಸ್ತಿ ಮೌಲ್ಯ ಕೂಡ ಸಹ ಸಾಕಷ್ಟು ಹೆಚ್ಚಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ಇನ್ಸ್ಟಾಗ್ರಾಮ್ ರೀಲ್ಸ್ ಬಿಡುಗಡೆಯ ಸಮಯದಲ್ಲಿ ಮಾರ್ಕ್ ಜುಕರ್ಬರ್ಗ್ ಈ ಲಾಭವನ್ನು ಗಳಿಸಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಮೈಕ್ರೋಸಾಫ್ಟ್ನ ಬಿಲ್ ಗೇಟ್ಸ್ ಈಗಾಗಲೇ 100 ಬಿಲಿಯನ್ ಡಾಲರ್ ಕ್ಲಬ್ ನಲ್ಲಿದ್ದಾರೆ ಮತ್ತು ಗುರುವಾರ (ಆಗಸ್ಟ್ 6)ರಂದು ಜುಕರ್ಬರ್ಗ್ ಸಹ ಈ ಪಟ್ಟಿಗೆ ಸೇರಿದ್ದಾರೆ. ಯುಎಸ್ ಸ್ಟಾಕ್ ಎಕ್ಸ್ಚೇಂಜ್ ನಾಸ್ಡಾಕ್ನಲ್ಲಿನ ಫೇಸ್ಬುಕ್ ಷೇರುಗಳು ಹಿಂದಿನ ದಿನ ಏಳು ಶೇಕಡಾ ಏರಿಕೆಯಾಗಿ 266.6ಡಾಲರ್ ತಲುಪಿ, 265.26 ಕ್ಕೆ ಬಂದು ನಿಂತಿದೆ.
ಫೇಸ್‌ಬುಕ್‌ನ ಹೊಸ ವೈಶಿಷ್ಟ್ಯ 'ರೀಲ್ಸ್' ಪರಿಚಯದೊಂದಿಗೆ, ಬಳಕೆದಾರರಿಗೆ ಇನ್ನು ಮುಂದೆ ಟಿಕ್‌ಟಾಕ್ ಕೊರತೆ ಇರುವುದಿಲ್ಲ. ಭಾರತದಲ್ಲಿ ಟಿಕ್ಟಾಕ್ ನಿಷೇಧದ ನಂತರ, ಫೇಸ್‌ಬುಕ್ ಈಗ ರೀಲ್ಸ್ ಮೂಲಕ ಭಾರತೀಯ ಬಳಕೆದಾರರನ್ನು ಆಕರ್ಷಿಸುತ್ತದೆ. ಟಿಕ್ಟಾಕ್ನಂತೆಯೇ ರೀಲ್ಸ್ ಸಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಸಹಾಯದಿಂದ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 15 ಸೆಕೆಂಡುಗಳ ಕಿರು ವೀಡಿಯೊ ಗಳನ್ನು ಹಂಚಿಕೊಳ್ಳಬಹುದಾಗಿದೆ.
ಟಿಕ್ಟಾಕ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ರೀಲ್ಸ್ ಪ್ರಸ್ತಾಪ ಫೇಸ್‌ಬುಕ್‌ಗೆ ತನ್ನದೇ ಆದ ಹಿಡಿತ ಸಾಧಿಸಲು ಸಹಾಯ ಮಾಡಲಿದೆ. ಎರಡು ವರ್ಷಗಳ ಹಿಂದೆ, ಲಾಸ್ಸೊ ಎಂಬ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಅದು ಟಿಟ್ಟಾಕ್ ಸಮಯದಲ್ಲಿ ಬಿಡುಗಡೆಯಾದ ಕಾರಣ ಬಳಕೆದಾರರನ್ನು ಆಕರ್ಷಿಸಲು ಸಾಧ್ಯವಾಗಲಿಲ್ಲ. ಬಳಕೆದಾರರು ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಸಾಕಷ್ಟು ಬಳಸುತ್ತಿದ್ದರೂ. ಸ್ನ್ಯಾಪ್‌ಚಾಟ್ ಯುಗದಲ್ಲಿ ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಬಂದ ಸ್ಟೋರಿ ವೈಶಿಷ್ಟ್ಯವು ಪ್ರಸ್ತುತ ಭಾರಿ ಜನಪ್ರೀಯತೆ ಗಳಿಸಿದೆ ಇನ್ಸ್ಟಾಗ್ರಾಮ್ನಲ್ಲಿ ಕಥೆ ಸ್ಟೋರಿ ವೈಶಿಷ್ಟ್ಯ ಬಂದ ಬಳಿಕ ಬಳಕೆದಾರರು ತಮ್ಮ ಸ್ಟೋರಿಗಳನ್ನೂ ಫೇಸ್ಬುಕ್ ಮತ್ತು ವಾಟ್ಸಾಪ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸ್ಟೋರಿ ವೈಶಿಷ್ಟ್ಯದ ಮೂಲಕ ಬಳಕೆದಾರರು ಫೋಟೋ ಹಾಗೂ ವಿಡಿಯೋ ಗಳನ್ನು 24 ಗಂಟೆಗಳಿಗಾಗಿ ಹಂಚಿಕೊಳ್ಳಬಹುದು. 24 ಗಂಟೆಯ ಬಳಿಕ ಸ್ವಯಂಚಾಲಿತವಾಗಿ ಅದು ಕಣ್ಮರೆಯಾಗುತ್ತದೆ. ಇನ್ಸ್ಟಾಗ್ರಾಮ್ ಸ್ಟೋರಿ ವೈಶಿಷ್ಟ್ಯದ ಜೊತೆಗೆ ಪುಟಗಳಲ್ಲಿ ಖಂಡಗಳ ಅಡಿಯಲ್ಲಿಯೂ ಕೂಡ ಹಂಚಿಕೊಳ್ಳಬಹುದಾಗಿದೆ.