ನವದೆಹಲಿ: ಅಮೆಜಾನ್ ಸಂಸ್ಥಾಪಕ ಮತ್ತು ಬಿಲಿಯನೇರ್ ಜೆಫ್ ಬೆಜೋಸ್, ಸಿಎನ್‌ಎನ್‌ನೊಂದಿಗೆ ಮಾತನಾಡುವಾಗ,  ಮುಂದಿನ ದಿನಗಳಲ್ಆಲಿ ರ್ಥಿಕ ಹಿಂಜರಿತವು ಎದುರಾಗುವ ಸಾಧ್ಯತೆ ಇರುವುದರಿಂದ ರಜಾದಿನಗಳಲ್ಲಿ ದೊಡ್ಡ ಖರೀದಿಗಳನ್ನು ಮುಂದೂಡುವುದನ್ನು ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮುಂಬರುವ ತಿಂಗಳಲ್ಲಿ ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಲು ಮತ್ತು ತಮ್ಮ ಹಣವನ್ನು ಸುರಕ್ಷಿತವಾಗಿರಿಸಲು ವ್ಯಾಪಾರ ಉದ್ಯಮಿ ಗ್ರಾಹಕರಿಗೆ ಸಲಹೆ ನೀಡಿದ್ದಾರೆ. ಯುಎಸ್ ಆರ್ಥಿಕತೆ ಯಲ್ಲಿ ಹಿಂಜರಿತ ಕಾಣುವ ಸಾಧ್ಯತೆ ಇರುವುದರಿಂದ ಕಾರುಗಳು, ರೆಫ್ರಿಜರೇಟರ್‌ಗಳು ಮತ್ತು ಟಿವಿಗಳಂತಹ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಅವರು ಜನರಿಗೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ : Mangaluru Blast: ರಾಜ್ಯ ಗುಪ್ತಚರ ವಿಭಾಗ & ಗೃಹ ಇಲಾಖೆಯ ವೈಫಲ್ಯ ಮತ್ತೊಮ್ಮೆ ಸಾಬೀತಾಗಿದೆ 


ಕಳೆದ ಕೆಲವು ತಿಂಗಳುಗಳಲ್ಲಿ, ಟ್ವಿಟರ್, ಮೆಟಾ, ಜೊಮಾಟೊ, ಬೈಜುಸ್ ಮತ್ತು ಮೈಕ್ರೋಸಾಫ್ಟ್‌ನಂತಹ ಅನೇಕ ದೊಡ್ಡ ಟೆಕ್ ಕಂಪನಿಗಳು ನೌಕರಿದಾರರನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಇದರಲ್ಲಿ ಈಗ ಅಮೆಜಾನ್ ಕಂಪನಿ ಸಹ  ಈ ಕ್ರಮಕ್ಕೆ ಮುಂದಾಗಿರುವುದು ಅಮೇರಿಕಾದಲ್ಲಿ ಆರ್ಥಿಕ ಸ್ಥಿತಿ ಸರಿ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.


ಇದನ್ನೂ ಓದಿ: ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡ್ಬೇಕು: ಕಾಂಗ್ರೆಸ್


ಇದೇ ಸಂದರ್ಶನದಲ್ಲಿ ಬೆಜೋಸ್ ಅವರು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಸಾಮಾಜಿಕ ಮತ್ತು ರಾಜಕೀಯ ವಿಭಜನೆಗಳು ಬೆಳೆಯುತ್ತಿರುವ ಸಮಯದಲ್ಲಿ ಮಾನವೀಯತೆಯನ್ನು ಒಗ್ಗೂಡಿಸಲು ಸಾಧ್ಯವಾಗುವ ಜನರನ್ನು ಬೆಂಬಲಿಸುವ ಸಲುವಾಗಿ ತಮ್ಮ $124 ಶತಕೋಟಿ ನಿವ್ವಳ ಮೌಲ್ಯದ ಬಹುಪಾಲು ದತ್ತಿಗಳನ್ನು ದಾನ ಮಾಡುವುದಾಗಿ ಹೇಳಿದರು. ಅವರ ಜೀವಿತಾವಧಿಯಲ್ಲಿ ಅವರು ತಮ್ಮ ಸಂಪತ್ತಿನ ಬಹುಭಾಗವನ್ನು ದಾನ ಮಾಡಲು ಯೋಜಿಸುತ್ತಿದ್ದಾರೆಯೇ ಎಂದು ಕೇಳಿದಾಗ, ಅವರು ಒಪ್ಪಿಕೊಂಡರು ಮತ್ತು "ಹೌದು, ನಾನು ಮಾಡುತ್ತೇನೆ" ಎಂದು ಉತ್ತರಿಸಿದರು.


ಕಳೆದ ವರ್ಷ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯಿಂದ ಕೆಳಗಿಳಿದ ನಂತರ ಬೆಜೋಸ್ ಪ್ರಸ್ತುತ ಅಮೆಜಾನ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.