Election Result 2023: 3 ರಾಜ್ಯಗಳಲ್ಲಿ ‘ಕಮಲ’ ಕಿಲಕಿಲ, ‘ಕೈ’ಕೊಟ್ಟ ಮತದಾರ, KCRಗೆ ಮುಖಭಂಗ!

Assembly Election Result 2023: ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಕಾಂಗ್ರೆಸ್ ಮಾಸ್ಟರ್ ಸ್ಟೋಕ್ ನೀಡಿದೆ. ಡಿಕೆ ಶಿವಕುಮಾರ್ ಹವಾದಿಂದ ಅಲ್ಲಿ ಭಾರತ್ ರಾಷ್ಟ್ರ ಸಮತಿ(BRS) ನೆಲಕಚ್ಚಿದೆ.

Written by - Puttaraj K Alur | Last Updated : Dec 3, 2023, 12:26 PM IST
  • ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ
  • ತೆಲಂಗಾಣದಲ್ಲಿ ‘ಕೈ’ಹಿಡಿದ ಮತದಾರ, ನೆಲಕಚ್ಚಿದ ಕೆಸಿಆರ್ ಕೋಟೆ
  • ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯಿಂದ BRSಸ್‍ಗೆ ಮರ್ಮಾಘಾತ!
Election Result 2023: 3 ರಾಜ್ಯಗಳಲ್ಲಿ ‘ಕಮಲ’ ಕಿಲಕಿಲ, ‘ಕೈ’ಕೊಟ್ಟ ಮತದಾರ, KCRಗೆ ಮುಖಭಂಗ! title=
ನೆಲಕಚ್ಚಿದ ಕೆಸಿಆರ್ ಕೋಟೆ!

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದ ವಿಧಾನಸಭಾ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. 3 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರ ‘ಕೈ’ಕೊಟ್ಟಿದ್ದಾನೆ. ಈ ಮೂರೂ ರಾಜ್ಯಗಳಲ್ಲಿ ‘ಕಮಲ’ ಪಕ್ಷ ಕಿಲಕಿಲ ನಗೆ ಬೀರಿದೆ. ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಕಾಂಗ್ರೆಸ್ ಮಾಸ್ಟರ್ ಸ್ಟೋಕ್ ನೀಡಿದೆ. ಡಿಕೆ ಶಿವಕುಮಾರ್ ಹವಾದಿಂದ ಅಲ್ಲಿ ಭಾರತ್ ರಾಷ್ಟ್ರ ಸಮತಿ(BRS) ನೆಲಕಚ್ಚಿದೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಹುತೇಕ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‍ ಪಕ್ಷಕ್ಕೆ ಕೈಕೊಟ್ಟಿರುವ ಮತದಾರ ಕಮಲ ಪಕ್ಷಕ್ಕೆ ಜೈ ಎಂದಿದ್ದಾನೆ. ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯಿಂದ BRSಗೆ ಮರ್ಮಾಘಾತವಾಗಿದೆ. ಹೀಗಾಗಿ ಕೆಸಿಆರ್ ನೇತೃತ್ವದ BRS ಪಕ್ಷದ 10 ವರ್ಷಗಳ ಆಡಳಿತ ಅಂತ್ಯವಾಗಿದೆ. ಮುಂಬರುವ 2024ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಈ ಚುನಾವಣಾ ಫಲಿತಾಂಶ ಕಾಂಗ್ರೆಸ್‍ಗೆ ದೊಡ್ಡ ಪೆಟ್ಟು ನೀಡಿದೆ. ಮತದಾರ ಮತ್ತೆ ಪ್ರಧಾನಿ ಮೋದಿಯತ್ತ ಒಲವು ತೋರಿದ್ದಾರೆ.

4 ರಾಜ್ಯಗಳ ಚುನಾವಣಾ ಫಲಿತಾಂಶ(12 ಗಂಟೆವರೆಗೆ)

ಛತ್ತೀಸ್‌ಗಢ (90 ಕ್ಷೇತ್ರಗಳು)

ಪಕ್ಷ

ಮುನ್ನಡೆ / ಗೆಲುವು

ಬಿಜೆಪಿ

53

ಕಾಂಗ್ರೆಸ್

35

GGP

01

CPI

01

ಇತರರು

00

 

ಮಧ್ಯಪ್ರದೇಶ (230 ಕ್ಷೇತ್ರಗಳು)

ಪಕ್ಷ

ಮುನ್ನಡೆ / ಗೆಲುವು

ಬಿಜೆಪಿ

157

ಕಾಂಗ್ರೆಸ್

70

BSP

02

BHRTADVSIP

01

ಇತರರು

00

 

ರಾಜಸ್ಥಾನ (199 ಕ್ಷೇತ್ರಗಳು)

ಪಕ್ಷ

ಮುನ್ನಡೆ / ಗೆಲುವು

ಬಿಜೆಪಿ

112

ಕಾಂಗ್ರೆಸ್

71

BSP

03

RLTP

02
BHRTADVSIP 03
RLD 01

ಇತರರು

07

 

ತೆಲಂಗಾಣ (119 ಕ್ಷೇತ್ರಗಳು)

ಪಕ್ಷ

ಮುನ್ನಡೆ / ಗೆಲುವು

 ಕಾಂಗ್ರೆಸ್

68

BRS

36

ಬಿಜೆಪಿ

08

AIMIM

04

CPI

01

ಏನಾಗಲಿದೆ  7,866 ಅಭ್ಯರ್ಥಿಗಳ ಭವಿಷ್ಯ?

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಒಟ್ಟು 7,866 ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಪೈಕಿ ರಾಜಸ್ಥಾನದ 199 ಕ್ಷೇತ್ರಗಳಲ್ಲಿ 1,862 ಅಭ್ಯರ್ಥಿಗಳು, ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ 2,533 ಅಭ್ಯರ್ಥಿಗಳು, ಛತ್ತೀಸ್‌ಗಢದ 90 ಕ್ಷೇತ್ರಗಳಲ್ಲಿ 1,181 ಅಭ್ಯರ್ಥಿಗಳು ಮತ್ತು ತೆಲಂಗಾಣದ 119 ಕ್ಷೇತ್ರಗಳಲ್ಲಿ 2,290 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.  

ರಾಜಸ್ಥಾನದ 199 ವಿಧಾನಸಭಾ ಸ್ಥಾನಗಳಿಗೆ ನ.25ರಂದು ಮತದಾನ ನಡೆದಿತ್ತು. ಮಧ್ಯಪ್ರದೇಶದ 230 ಕ್ಷೇತ್ರಗಳಿಗೆ ನ.17ರಂದು ಮತದಾನ ನಡೆದಿತ್ತು. ಛತ್ತೀಸ್‌ಗಢದ 90 ಸ್ಥಾನಗಳಿಗೆ ನ.7 ಮತ್ತು 17ರಂದು 2 ಹಂತಗಳಲ್ಲಿ ಮತದಾನ ನಡೆದಿತ್ತು. ಕೊನೆಯದಾಗಿ ತೆಲಂಗಾಣದ 119 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ,30ರಂದು ಮತದಾನ ನಡೆದಿತ್ತು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News