ಕರ್ನಾಟಕದಲ್ಲಿ ಖಾತೆ ತೆರೆದ ಬಿಎಸ್ಪಿ!

      

Last Updated : May 15, 2018, 11:41 AM IST
ಕರ್ನಾಟಕದಲ್ಲಿ ಖಾತೆ ತೆರೆದ ಬಿಎಸ್ಪಿ! title=

ಬೆಂಗಳೂರು: ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ  ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿಯ ಭಾಗವಾಗಿ ಬಿಎಸ್ಪಿ ಪಕ್ಷವು ಮೊದಲ ಬಾರಿಗೆ ಕರ್ನಾಟಕದಲ್ಲಿ ತನ್ನ ಖಾತೆಯನ್ನು ತೆರೆದಿದೆ.  

ಕರ್ನಾಟಕದಲ್ಲಿ ಸುಮಾರು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಎಸ್ಪಿಯು ಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಮೀಸಲಾದ  ಕೊಳ್ಳೇಗಾಲದಲ್ಲಿ ಎನ್ ಮಹೇಶ ಗೆಲುವು ಸಾಧಿಸಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಪಕ್ಷವು ದಲಿತ ಮತಗಳನ್ನು ತಲುಪುವ ಸಲುವಾಗಿ ಮಾಯಾವತಿ ನೇತೃತ್ವದ  ಬಿಎಸ್ಪಿ ಪಕ್ಷದ ಜೊತೆ ಚುನಾವಣಾ ಮೈತ್ರಿಯನ್ನು ಮಾಡಿಕೊಂಡಿತ್ತು. ಅದರ ಭಾಗವಾಗಿ ಬಿಎಸ್ಪಿ ಕರ್ನಾಟಕದಲ್ಲಿ ತನ್ನ ಖಾತೆಯನ್ನು ತೆರೆದಿದೆ. ಕಾಂಗ್ರೆಸ್ ಪಕ್ಷದ ಎ ಆರ್ ಕೃಷ್ಣಮೂರ್ತಿ ವಿರುದ್ದ ಬಿಎಸ್ಪಿಯ ಎನ್ ಮಹೇಶ್ ಗೆಲುವು ಸಾಧಿಸಿದ್ದಾರೆ.

Trending News