ಕಾಂಗ್ರೆಸ್‌‌-ಜೆಡಿಎಸ್‌‌ ಸಮ್ಮಿಶ್ರ ಸರ್ಕಾರದ ಸಂಪುಟದ ರಚನೆ ಕಸರತ್ತು

ಸರ್ಕಾರ ಒಟ್ಟು 34 ಸಚಿವ ಸ್ಥಾನಗಳನ್ನು ಒಳಗೊಂಡಿರುತ್ತಿದೆ.

Last Updated : May 23, 2018, 10:25 AM IST
ಕಾಂಗ್ರೆಸ್‌‌-ಜೆಡಿಎಸ್‌‌ ಸಮ್ಮಿಶ್ರ ಸರ್ಕಾರದ ಸಂಪುಟದ ರಚನೆ ಕಸರತ್ತು  title=

ಬೆಂಗಳೂರು: ಕಾಂಗ್ರೆಸ್‌‌-ಜೆಡಿಎಸ್‌‌ ಸಮ್ಮಿಶ್ರ ಸರ್ಕಾರದ ಸಂಪುಟದ ರಚನೆ ಕಸರತ್ತು ಭಾಗಶಃ ಪೂರ್ಣಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಹಾಗೂ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. 

ಸರ್ಕಾರವು ಒಟ್ಟು 34 ಸಚಿವರನ್ನು ಸರ್ಕಾರ ಒಳಗೊಂಡಿರುತ್ತಿದೆ. ಇದರಲ್ಲಿ ಕಾಂಗ್ರೆಸ್‌‌ಗೆ ಡಿಸಿಎಂ ಸೇರಿದಂತೆ 22 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೆ, ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಒಟ್ಟು 12 ಸಚಿವ ಸ್ಥಾನಗಳನ್ನು ಬಿಟ್ಟು ಕೊಡಲು ನಿರ್ಧಾರಕ್ಕೆ ಬರಲಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸ್ಪಷ್ಟಪಡಿಸಿದ್ದು,  ಬಹುಮತ ಸಾಬೀತುಪಡಿಸಿದ ಬಳಿಕ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದಿದ್ದಾರೆ. 

Trending News