ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ರಿಲೀಸ್; ಬಾದಾಮಿಯಿಂದ ಸಿಎಂ ಸ್ಪರ್ಧೆ ಅಧಿಕೃತ

ಕರ್ನಾಟಕದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. 

Last Updated : Apr 22, 2018, 03:36 PM IST
ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ರಿಲೀಸ್; ಬಾದಾಮಿಯಿಂದ ಸಿಎಂ ಸ್ಪರ್ಧೆ ಅಧಿಕೃತ title=

ಬೆಂಗಳೂರು : ಕರ್ನಾಟಕದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಬಾದಾಮಿ ಕ್ಷೇತ್ರಕ್ಕೆ ಈ ಹಿಂದೆ ಡಾ.ದೇವರಾಜ್ ಪಾಟಿಲ್'ಗೆ ನೀಡಲಾಗಿದ್ದ ಟಿಕೆಟ್ಗೆ ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಈ ಮೂಲಕ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಅಧಿಕೃತವಾಗಿದೆ. 

ಬಾದಾಮಿಯಲ್ಲಿ ಏ.24ರಂದು ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

ಉಳಿದಂತೆ ಈ ಹಿಂದೆ ಬಿ ಫಾರಂ ತಡೆಹಿಡಿಯಲಾಗಿದ್ದ ಮಡಿಕೇರಿ ಕ್ಷೇತ್ರದಿಂದ ಹೆಚ್.ಎಸ್.ಚಂದ್ರ ಮೌಳಿಗೆ ಬದಲಾಗಿ ಕೆ.ಪಿ.ಚಂದ್ರಕಲಾ ಅವರಿಗೆ, ಜಗಳೂರು ಕ್ಷೇತ್ರದಲ್ಲಿ ಎ.ಎಲ್.ಪುಷ್ಪ ಬದಲಿಗೆ ಹಾಲಿ ಶಾಸಕ ಹೆಚ್‌.ಪಿ.ರಾಜೇಶ್‌'ಗೆ, ತಿಪಟೂರು ಕ್ಷೇತ್ರದಲ್ಲಿ ಬಿ.ನಂಜಾಮರಿ ಬದಲಾಗಿ ಶಾಸಕ ಷಡಕ್ಷರಿಗೆ ಹಾಗೂ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ ಸಚಿವ ಎಂ.ಆರ್‌.ಸೀತಾರಾಮ್‌ಗೆ ಬದಲಾಗಿ ಕೆಂಗಲ್‌ ಶ್ರೀಪಾದ ರೇಣು ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಅಲ್ಲದೆ, ಬೆಂಗಳೂರಿನ ಶಾಂತಿನಗರ ಕ್ಷೇತ್ರದಿಂದ ಶಾಸಕ  ಎನ್.ಎ.ಹ್ಯಾರಿಸ್ ಗೆ ಟಿಕೆಟ್ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ಕಾಂಗ್ರೆಸ್ ತೆರೆ ಎಳೆದಿದೆ. 

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್ ಇಂದು, ಉಳಿದ ಆರು ಕ್ಷೇತ್ರಗಳೊಂದಿಗೆ ಈ ಹಿಂದೆ ಬಿ ಫಾರಂ ತಡೆಹಿಡಿಯಲಾಗಿದ್ದ ಬಾದಾಮಿ, ಮಡಿಕೇರಿ, ಜಗಳೂರು ಹಾಗೂ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಿ ಒಟ್ಟು 11 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 

218 ಅಭ್ಯರ್ಥಿಗಳ ಪಟ್ಟಿಯಲ್ಲಿ 15 ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್​

ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ 

1. ಕಿತ್ತೂರು- ಡಿ.ಬಿ.ಇನಾಂದಾರ್
2. ಬದಾಮಿ- ಸಿಎಂ ಸಿದ್ದರಾಮಯ್ಯ
3. ನಾಗಠಾಣ – ವಿಠಲ ಕಟಕದೊಂಡ
4. ಸಿಂಧಗಿ- ಮಲ್ಲಣ್ಣ ನಿಂಗಣ್ಣ ಸಾಲಿ
5. ರಾಯಚೂರು – ಸೈಯದ್ ಯಾಸೀನ್
6. ಜಗಳೂರು- ಹೆಚ್.ಪಿ.ರಾಜೇಶ್
7. ತಿಪಟೂರು- ಷಡಕ್ಷರಿ
8. ಮಲ್ಲೇಶ್ವರಂ – ಕೆಂಗಲ್ ಶ್ರೀಪಾದ ರೇಣು
9. ಶಾಂತಿನಗರ- ಹ್ಯಾರೀಸ್
10. ಪದ್ಮನಾಭನಗರ- ಎಂ.ಶ್ರೀನಿವಾಸ್
11. ಮಡಿಕೇರಿ- ಕೆ.ಪಿ.ಚಂದ್ರಕಲಾ

Trending News