ಎಲ್ಲಾ ಕಹಿಗಳನ್ನು ನುಂಗಲೇ ಬೇಕು, ಇದು ನನ್ನ ಕರ್ತವ್ಯ - ಡಿ.ಕೆ. ಶಿವಕುಮಾರ್

ಮೈತ್ರಿ ಸರ್ಕಾರ ಹೈಕಮಾಂಡ್ ನಿರ್ಧಾರ. ರಾಜ್ಯದಲ್ಲಿ ಜಾತ್ಯಾತೀತ ಸರ್ಕಾರವಿರಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ನಿರ್ಧಾರ ಕೈಗೊಂಡಿದ್ದರು. ಇಡೀ ದೇಶ ಕೂಡ ಇದನ್ನೇ ಬಯಸಿದೆ- ಡಿಕೆಶಿ

Last Updated : May 21, 2018, 02:22 PM IST
ಎಲ್ಲಾ ಕಹಿಗಳನ್ನು ನುಂಗಲೇ ಬೇಕು, ಇದು ನನ್ನ ಕರ್ತವ್ಯ - ಡಿ.ಕೆ. ಶಿವಕುಮಾರ್ title=

ಬೆಂಗಳೂರು: ರಾಜ್ಯದಲ್ಲಿ ಜಾತ್ಯಾತೀತ ಸರ್ಕಾರ ಇರಬೇಕು ಎಂಬ ಕಾರಣಕ್ಕೆ ಮೈತ್ರಿ ಸರ್ಕಾರ ರಚಿಸಲು ನಿರ್ಧಾರ ಕೈಗೊಂಡಿದ್ದಾರೆ. ಇಡೀ ದೇಶ ಕೂಡ ಇದನ್ನೇ ಬಯಸಿದೆ. ಅದಕ್ಕಾಗಿಯೇ ನಾವು ಈ ನಿಲುವನ್ನು (ಜೆಡಿಎಸ್ ಜತೆ ಮೈತ್ರಿ) ತೆಗೆದುಕೊಂಡಿದ್ದೇವೆ.  ಎಲ್ಲಾ ಕಹಿಗಳನ್ನು ನುಂಗಲೇ ಬೇಕು, ಇದು ನನ್ನ ಕರ್ತವ್ಯ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್-ಜೆಡಿ (ಎಸ್) ಐದು ವರ್ಷಗಳ ಪೂರ್ಣಾವಧಿ ಸರ್ಕಾರದ ಕುರಿತು ಕೇಳಿದ ಪ್ರಶ್ನೆಗೆ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆಶಿ, 'ನಾನು ಈಗ ಅದನ್ನು ಉತ್ತರಿಸಲು ಬಯಸುವುದಿಲ್ಲ. ಸಮಯವೇ ಉತ್ತರ ನೀಡಲಿದೆ'. ಪ್ರಸ್ತುತ ನಮ್ಮ ಮುಂದೆ ಸಾಕಷ್ಟು ಸವಾಲುಗಳಿದ್ದು, ಅವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯನ್ನು ಇಡಲಾಗುತ್ತದೆ ಎಂದು ತಿಳಿಸಿದರು.

Trending News