ಕರ್ನಾಟಕದ ಚುನಾವಣೆ ದೇಶದಲ್ಲೇ ಅತಿ ದುಬಾರಿ ವೆಚ್ಚದ ಚುನಾವಣೆ- ಸಿಎಂಎಸ್ ಸರ್ವೇ

   

Last Updated : May 14, 2018, 07:52 PM IST
ಕರ್ನಾಟಕದ ಚುನಾವಣೆ ದೇಶದಲ್ಲೇ ಅತಿ ದುಬಾರಿ ವೆಚ್ಚದ ಚುನಾವಣೆ-  ಸಿಎಂಎಸ್ ಸರ್ವೇ title=

ನವದೆಹಲಿ: ಈ ಬಾರಿಯ ಕರ್ನಾಟಕ ವಿಧಾನಸಭೆಯಲ್ಲಿ ಅಭ್ಯರ್ಥಿಗಳು ಖರ್ಚು ಮಾಡಿದ   ಅತ್ಯಂತ ದುಬಾರಿ ವಿಧಾನಸಭೆಯಾಗಿದೆ ಎಂದು  ಚುನಾವಣೆಯಾಗಿದೆ ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ತನ್ನ ಸಮೀಕ್ಷೆಯಲ್ಲಿ  ತಿಳಿಸಿದೆ.

ಸಿಎಂಎಸ್ ಸಂಶೋಧನೆಯ ಪ್ರಕಾರ ಈ ಬರಿಯ ಚುನಾವಣೆಯಲ್ಲಿ ಕನಿಷ್ಟ 9.500 ರಿಂದ 10.500 ಕೋಟಿ ಹಣವನ್ನು ವ್ಯಚ್ಚ ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ಚುನಾವಣೆಯಲ್ಲಿ ಅದು ಪ್ರಧಾನಮಂತ್ರಿಗಳ ಪ್ರಚಾರವನ್ನು ಒಳಗೊಂಡಿಲ್ಲ ಎಂದು ತಿಳಿದುಬಂದಿದೆ.ಕಳೆದ 20 ವರ್ಷಗಳಲ್ಲಿನ ರಾಜ್ಯ ಚುನಾವಣೆಯಲ್ಲಿ ಕರ್ನಾಟಕ ಚುನಾವಣೆಯು ಇದುವರೆಗಿನ ದುಬಾರಿ ಚುನಾವಣೆ ಎಂದು ಹೇಳಲಾಗಿದೆ.ಸಾಮಾನ್ಯ ವಾಗಿ ಚುನಾವಣೆಯಲ್ಲಿ ಅಧಿಕ ಹಣ ಖರ್ಚು ಮಾಡುವಲ್ಲಿ ಕರ್ನಾಟಕ,ಆಂಧ್ರಪ್ರದೇಶ,ತಮಿಳುನಾಡು ದೇಶದಲ್ಲಿ ಅಗ್ರಸ್ಥಾನಗಳಲ್ಲಿವೆ. 

ಬರುವ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ವೆಚ್ಚವು ಸುಮಾರು 50 ಸಾವಿರ ದಿಂದ 60 ಸಾವಿರ ಕೋಟಿಯ ವರೆಗೆ ಆಗಬಹುದು ಎಂದು ತಿಳಿದುಬಂದಿದೆ. 2014 ರ ಚುನಾವಣೆಯಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು. ಆದರೆ ಇದುವರೆಗೂ ಚುನಾವಣಾ ಆಯೋಗ ಅಕ್ರಮ ಹಣವನ್ನು ವಶ ಪಡಿಸಿಕೊಂಡ್ಡಿದ್ದರೂ ಕೂಡ ಅದು ಕೇವಲ ತೋರಿಕೆ ಎನ್ನಲಾಗಿದೆ.ಪ್ರಮುಖವಾಗಿ  ಚುನಾವಣಾ ಆಯೋಗ ಅಕ್ರಮ ಹಣವನ್ನು ನಿಯಂತ್ರಿಸುವಲ್ಲಿ ಅಸಹಾಯಕವಾಗಿದೆ ಎಂದು ಅದು ತನ್ನ ಸಂಶೋಧನೆಯಲ್ಲಿ ತಿಳಿಸಿದೆ.

 

Trending News