ಬಾದಾಮಿಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪಕ್ಷ ಹೇಳಿದಂತೆ ಕೇಳುವೆ-ಸಿದ್ದರಾಮಯ್ಯ

     

Last Updated : Apr 20, 2018, 02:27 PM IST
 ಬಾದಾಮಿಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪಕ್ಷ ಹೇಳಿದಂತೆ ಕೇಳುವೆ-ಸಿದ್ದರಾಮಯ್ಯ title=

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸ್ಪರ್ಧಿಸುವ ಕುರಿತಾಗಿ ಮಾತನಾಡಿದ ಸಿದ್ದರಾಮಯ್ಯ ಈ ವಿಚಾರವಾಗಿ ಪಕ್ಷ ಹೇಳಿದಂತೆ ಕೇಳುವುದಾಗಿ ಎಂದು ತಿಳಿಸಿದರು.

ಮೈಸೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ  ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಪಕ್ಷದ ನಾಯಕತ್ವ ಹೇಳಿದ ಹಾಗೆ ಕೇಳುತ್ತೇನೆ, ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರ ಜೊತೆ ಸೇರಿ ಚರ್ಚಿಸುತ್ತೇನೆ.ನಂತರ ಪಕ್ಷ ಏನು ಹೇಳುತ್ತೋ ಅದಕ್ಕನುಗುನಾವಾಗಿ ನಡೆಯುವುದಾಗಿ ತಿಳಿಸಿದರು.

ಇತ್ತೀಚಿಗೆ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾದಾಗ ಕೇವಲ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವ ಕುರಿತಾಗಿ ಹೆಸರು ಪ್ರಸ್ತಾಪವಾಗಿತ್ತು.ಆದರೆ ಆ ಕ್ಷೇತ್ರದಲ್ಲಿ ಗೆಲ್ಲುವುದು ಸುಲಭವಿಲ್ಲ ಎನ್ನವ ಕಾರಣಕ್ಕಾಗಿ ಬಾದಾಮಿಯನ್ನು ಇನ್ನೊಂದು ಆಯ್ಕೆಯಾಗಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.

Trending News