Post Office ನಲ್ಲಿ ಹಣ ಹೂಡಿಕೆ ಮಾಡುವವರೇ ಎಚ್ಚರ! 95.62 ಕೋಟಿ ರೂ. ಹಣ ಕಣ್ಮರೆ

Postal Investment - ನೀವು ನಿಮ್ಮ ಹಣವನ್ನು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ ನಿಮ್ಮ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಹೌದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅಂದರೆ ಕ್ಯಾಗ್ ಒಂದು ಆಘಾತಕಾರಿ ವರದಿಯನ್ನು ನೀಡಿದೆ.

Written by - Nitin Tabib | Last Updated : Aug 9, 2022, 05:16 PM IST
  • ನೀವು ನಿಮ್ಮ ಹಣವನ್ನು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ.
  • ವಾಸ್ತವದಲ್ಲಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅಂದರೆ ಕ್ಯಾಗ್ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ.
Post Office ನಲ್ಲಿ ಹಣ ಹೂಡಿಕೆ ಮಾಡುವವರೇ ಎಚ್ಚರ! 95.62 ಕೋಟಿ ರೂ. ಹಣ ಕಣ್ಮರೆ title=
CAG Report

Post Office Savings Scheme News: ನೀವು ನಿಮ್ಮ ಹಣವನ್ನು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ವಾಸ್ತವದಲ್ಲಿ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅಂದರೆ ಕ್ಯಾಗ್ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಪೋಸ್ಟ್ ಆಫೀಸ್ ಅಂದರೆ ಅಂಚೆ ಕಚೇರಿಗಳ ನೌಕರರು ನವೆಂಬರ್ 2002 ಮತ್ತು ಸೆಪ್ಟೆಂಬರ್ 2021 ರ ನಡುವೆ 95.62 ಕೋಟಿ ರೂ. ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೆ ನೋಡಿದಲ್ಲಿ, ಈ ಮೊತ್ತವು ನಿಮಗೆ ಚಿಕ್ಕದಾಗಿ ಕಾಣಿಸಬಹುದು, ಆದರೆ ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಾಮಾನ್ಯ ನಾಗರಿಕರಿಗೆ ಮಾತ್ರ ಇದು ಆಘಾತಕಾರಿ ಸುದ್ದಿಯಾಗಿದೆ. ಏಕೆಂದರೆ ಇದುವರೆಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳನ್ನು ಅತ್ಯಂತ ಸುರಕ್ಷಿತ ಯೋಜನೆಗಳು ಎಂದು ಪರಿಗಣಿಸಲಾಗುತ್ತದೆ. 

ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಇಲ್ಲಿವೆ
ಅಂಚೆ ಕಛೇರಿಯು ದೇಶದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ಉಳಿತಾಯ ಬ್ಯಾಂಕ್, ಮರುಕಳಿಸುವ ಠೇವಣಿ, ಸಮಯ ಠೇವಣಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಪಿಎಫ್, ಮಾಸಿಕ ಆದಾಯ ಖಾತೆ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಂತಹ ಹಲವು ಯೋಜನೆಗಳ ಮೂಲಕ ನಗರ ಮತ್ತು ಗ್ರಾಮೀಣ ಗ್ರಾಹಕರ ಹೂಡಿಕೆಯ ಅಗತ್ಯತೆಗಳನ್ನೂ ಪೂರೈಸುತ್ತದೆ. ಅಂಚೆ ಇಲಾಖೆ (DoP) ಹಣಕಾಸು ಸಚಿವಾಲಯಕ್ಕೆ ಏಜೆನ್ಸಿ ಆಧಾರದ ಮೇಲೆ ಈ ಸೇವೆಗಳನ್ನು ಒದಗಿಸುತ್ತದೆ.

ಇದನ್ನೂ ಓದಿ-Nitin Gadkari: ವಾಹನ ಸವಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ವರದಿಯಲ್ಲೇನಿದೆ?
ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಹಣಕಾಸು ಮತ್ತು ಸಂವಹನಗಳ ಮೇಲಿನ ಸಿಎಜಿಯ ಆಡಿಟ್ ವರದಿಯು ಐದು ವಲಯಗಳಲ್ಲಿ ಅಂಚೆ ನೌಕರರು ನಕಲಿ ಖಾತೆಗಳಿಂದ 62.05 ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದಾರೆ ಎಂದು ಹೇಳಿದೆ. ಇವುಗಳನ್ನು ನಕಲಿ ಬ್ಯಾಲೆನ್ಸ್‌ಗಳೊಂದಿಗೆ ಸಕ್ರಿಯವೆಂದು ತೋರಿಸಿ ಮತ್ತು ನಂತರ ಮುಚ್ಚಿಹಾಕಲಾಗಿದೆ. ಎಂಟು ಸರ್ಕಲ್ ಗಳಲ್ಲಿ ಗ್ರಾಹಕರು 9.16 ಕೋಟಿ ರೂ.ಗಳ ನಗದು ಠೇವಣಿಗಳನ್ನು ಪಾಸ್‌ಬುಕ್‌ಗಳಲ್ಲಿ ದಾಖಲಿಸಲಾಗಿದೆ ಆದರೆ ಅವರ ಅಂಚೆ ಕಚೇರಿ ಖಾತೆಗಳಲ್ಲಿ ಜಮಾ ಮಾಡಲಾಗಿಲ್ಲ. ಬಳಿಕ ಅಂಚೆ ನೌಕರರು ಹಣ ಹಿಂಪಡೆದಿದ್ದಾರೆ. ನಾಲ್ಕು ಸರ್ಕಲ್ ಗಳಲ್ಲಿ, ಅಂಚೆ ನೌಕರರು ಮಾಡಿದ ನಕಲಿ ಸಹಿ/ಹೆಬ್ಬೆಟ್ಟಿನ ಗುರುತುಗಳೊಂದಿಗೆ ಗ್ರಾಹಕರ ಉಳಿತಾಯ ಖಾತೆಗಳಿಂದ ರೂ.4.08 ಕೋಟಿ ವಂಚನೆ ಎಸಗಲಾಗಿದೆ. ಇತರ ಅಂಚೆ ನೌಕರರು ಅಥವಾ ಹೊರಗಿನವರು ಬಳಕೆದಾರರ ಐಡಿಗಳು ಮತ್ತು ಪಾಸ್‌ವರ್ಡ್‌ಗಳನ್ನು ಅನಧಿಕೃತವಾಗಿ ಬಳಸುವ ಹಲವು ಪ್ರಕರಣಗಳಿವೆ. ಇದರಿಂದ ನಾಲ್ಕು ಸರ್ಕಲ್ ಗಳಲ್ಲಿ 3 ಕೋಟಿ ರೂ.ಗಳ ವಂಚನೆ ನಡೆದಿದೆ. ಅಷ್ಟೇ ಅಲ್ಲ, ಎರಡು ವೃತ್ತಗಳಲ್ಲಿ ಹೊರಗಿನವರ ಸಹಕಾರದಿಂದ ಅಂಚೆ ನೌಕರರು 1.35 ಕೋಟಿ ರೂಪಾಯಿಗಳ ನಕಲಿ ಠೇವಣಿ ಖಾತೆಗಳನ್ನು ತೆರೆದು, ನಂತರ ಅದನ್ನು ಹಿಂತೆಗೆದುಕೊಳ್ಳಲಾಯಿತು.

ಇದನ್ನೂ ಓದಿ-ಪಡಿತರ ಚೀಟಿದಾರರಿಗೆ ಶಾಕ್ ಕೊಟ್ಟ ಮೋದಿ ಸರ್ಕಾರ!

ಕ್ಯಾಗ್ ಹೇಳಿದ್ದೇನು?
95.62 ಕೋಟಿ ವಂಚನೆ/ದುರುಪಯೋಗ ಪ್ರಕರಣದಲ್ಲಿ ಅಂಚೆ ಇಲಾಖೆಯು ಈಗಾಗಲೇ 14.39 ಕೋಟಿ ರೂ.ಗಳನ್ನು (40.85 ಲಕ್ಷ ರೂ. ದಂಡ/ಬಡ್ಡಿ ಸೇರಿದಂತೆ) ಸಂಬಂಧಪಟ್ಟ ವ್ಯಕ್ತಿಗಳಿಂದ ವಸೂಲಿ ಮಾಡಿದೆ ಎಂದು ಸಿಎಜಿ ಹೇಳಿದೆ. ಅಂದರೆ, ಇನ್ನೂ 81.64 ಕೋಟಿ ರೂಪಾಯಿ ವಸೂಲಿ ಬಾಕಿ ಉಳಿದಿದೆ ಎಂಬುದು ಇದರ ಅರ್ಥ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News