Bullet Train Ticket Price: ದೇಶದಲ್ಲಿ ಶೀಘ್ರವೇ ಆರಂಭವಾಗಲಿರುವ ಬುಲೆಟ್ ಟ್ರೈನ್ ನಲ್ಲಿ ಎಷ್ಟಿರಲಿದೆ ಟಿಕೆಟ್ ದರ ?

ಬುಲೆಟ್  ರೈಲು 2026ರಿಂದ ಆರಂಭವಾಗಲಿದೆ ಎಂದು ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದರು. 

Written by - Ranjitha R K | Last Updated : Jun 30, 2022, 01:15 PM IST
  • ಬುಲೆಟ್ ರೈಲಿಗಾಗಿ ದೇಶದ ಜನ ಬಹಳ ಕಾತುರದಿಂದ ಕಾಯುತ್ತಿದ್ದಾರೆ.
  • ಫಸ್ಟ್ ಎಸಿಯನ್ನು ಆಧಾರವಾಗಿಟ್ಟು ಕೊಂಡು ದರ ನಿಗದಿ
  • ವಿಮಾನ ದರಕ್ಕಿಂತ ಕಡಿಮೆ ಇರಲಿದೆ ಬುಲೆಟ್ ಟ್ರೈನ್ ದರ
Bullet Train Ticket Price: ದೇಶದಲ್ಲಿ ಶೀಘ್ರವೇ ಆರಂಭವಾಗಲಿರುವ ಬುಲೆಟ್ ಟ್ರೈನ್ ನಲ್ಲಿ ಎಷ್ಟಿರಲಿದೆ ಟಿಕೆಟ್ ದರ ? title=
Bullet Train Ticket Price (file photo)

Bullet Train Ticket Price : ದೇಶದ ಮೊದಲ ಬುಲೆಟ್ ರೈಲಿಗಾಗಿ ದೇಶದ ಜನ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಈ ರೈಲು ಮುಂಬೈ ಮತ್ತು ಅಹಮದಾಬಾದ್ ನಡುವೆ ಓಡಾಡಲಿದೆ.  ಬುಲೆಟ್  ರೈಲು 2026ರಿಂದ ಆರಂಭವಾಗಲಿದೆ ಎಂದು ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದರು. 

ಫಸ್ಟ್ ಎಸಿಯನ್ನು ಆಧಾರವಾಗಿಟ್ಟುಕೊಂಡು ದರ ನಿಗದಿ  :  
ಇದಕ್ಕೂ ಮೊದಲು ಕೂಡಾ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು, ಬುಲೆಟ್ ರೈಲಿನ ದರದ ಬಗ್ಗೆ  ಮಾತನಾಡಿದ್ದರು. ಆದರೆ ಆ ಸಂದರ್ಭದಲ್ಲಿ ಟಿಕೆಟ್ ದರದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದರು. ಆದರೆ ಪ್ರಯಾಣಿಕರಿಗೆ ಕೈ ಗೆಟಕುವ ರೀತಿಯಲ್ಲಿ ದರ ನಿಗದಿ ಮಾಡುವುದಾಗಿ ತಿಳಿಸಿದ್ದರು. ಇದಕ್ಕಾಗಿ ಫಸ್ಟ್ ಎಸಿಯ ದರವನ್ನು  ಆಧಾರವಾಗಿ ಮಾಡಲಾಗುವುದು ಎಂದಿದ್ದರು. ಇದರಿಂದ ಬುಲೆಟ್ ರೈಲಿನ ದರ ಫಸ್ಟ್ ಎಸಿ ದರಕ್ಕೆ ಸಮವಾಗಿರುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ : 24-06-2022 Today Vegetable Price: ಇಂದು ತರಕಾರಿ-ಹಣ್ಣಿನ ಬೆಲೆ ಹೀಗಿದೆ

 ವಿಮಾನ ದರಕ್ಕಿಂತ ಕಡಿಮೆ : 
ಬುಲೆಟ್ ರೈಲಿನ ದರವು ವಿಮಾನಕ್ಕಿಂತ ಕಡಿಮೆ ಇದ್ದು, ಅದರಲ್ಲಿ ಸೌಲಭ್ಯಗಳು ಸಹ ಉತ್ತಮವಾಗಿರುತ್ತವೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಆದರೆ, ಯೋಜನೆ ಪೂರ್ಣಗೊಂಡ ನಂತರವೇ ನಿಖರವಾಗಿ ಟಿಕೆಟ್ ದರ ಎಷ್ಟು ಎಂದು ಹೇಳುವುದು ಸಾಧ್ಯವಾಗುತ್ತದೆ ಎಂದಿದ್ದಾರೆ.  ದೇಶದ ಬುಲೆಟ್ ರೈಲು ಯೋಜನೆ ಬಗ್ಗೆ ಸರ್ಕಾರ ತುಂಬಾ ಗಂಭೀರವಾಗಿದ್ದು, ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆ ಪೂರ್ಣಗೊಂಡ ನಂತರವೇ ಎರಡನೇ ಹೈಸ್ಪೀಡ್ ರೈಲು ಯೋಜನೆಯನ್ನು ಪ್ರಾರಂಭಿಸಲಾಗುವುದು.

2026 ರಲ್ಲಿ ಮೊದಲ ಬುಲೆಟ್ ರೈಲು ಓಡಿಸುವ ಗುರಿಯೊಂದಿಗೆ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಸೂರತ್‌ಗೆ ಭೇಟಿ ನೀಡಿದ್ದರು. 2026 ರಲ್ಲಿ ಸೂರತ್ ಮತ್ತು ಬಿಲಿಮೋರಾ ನಡುವೆ ಮೊದಲ ಬುಲೆಟ್ ರೈಲು ಓಡಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :  Gold Price Today : ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ..! ಬಂಗಾರ ಖರೀದಿಗೆ ಇದೇ ಸೂಕ್ತ ಸಮಯ

ಮುಂಬೈ ಮತ್ತು ಅಹಮದಾಬಾದ್ ನಡುವೆ ಗಂಟೆಗೆ 320 ಕಿ.ಮೀ ವೇಗದಲ್ಲಿ ಬುಲೆಟ್ ರೈಲು ಓಡಿಸುವ ಪ್ರಸ್ತಾವನೆ ಇದೆ. ಎರಡು ನಗರಗಳ ನಡುವೆ ಒಟ್ಟು 508 ಕಿ.ಮೀ ದೂರವಿದ್ದು, ಇದು 12 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ 1.1 ಲಕ್ಷ ಕೋಟಿ ರೂ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News