Govt employees Leave Policy :ಸರ್ಕಾರಿ ನೌಕರರ ರಜಾ ನಿಯಮದಲ್ಲಿ ಬದಲಾವಣೆ ! ಇನ್ನು ನೀವು ತೆಗೆದುಕೊಳ್ಳಲು ಸಾಧ್ಯವಾಗುವುದು ಇಷ್ಟೇ ರಜೆ

Govt employees Leave Policy :  ಮೂಲಗಳ ಪ್ರಕಾರ, ನೌಕರರ ರಜಾದಿನಗಳಿಗೆ ಸಂಬಂಧಿಸಿದಂತೆ ಸರ್ಕಾರವು ಕೆಲವು ಹೊಸ ನಿಯಮಗಳನ್ನು ಮಾಡಿದೆ. ನೌಕರರ ರಜೆಯ ಸ್ಥಿತಿಯನ್ನು ಈ ಮೂಲಕ ಸರ್ಕಾರ ಸ್ಪಷ್ಟಪಡಿಸಿದೆ.ಎಷ್ಟು ದಿನ ರಜೆ ಹಾಕಿದರೆ ಉದ್ಯೋಗಿಗಳ ಉದ್ಯೋಗಕ್ಕೆ ಅಪಾಯ ಎದುರಾಗಬಹುದು ಎನುವುದನ್ನು ಸರ್ಕಾರ ತನ್ನ ನೌಕರರಿಗೆ ತಿಳಿಸಿದೆ.   

Written by - Ranjitha R K | Last Updated : Feb 13, 2024, 12:11 PM IST
  • ವಿದೇಶಿ ಸೇವಾ ಉದ್ಯೋಗಿಗಳಿಗೆ ವಿನಾಯಿತಿ
  • ಲೀವ್ ಎನ್ಕ್ಯಾಶ್ ಮೆಂಟ್ ನಿಯಮಗಳೇನು?
  • ಅಧ್ಯಯನಕ್ಕೆ ಎಷ್ಟು ದಿನ ರಜೆ ?
Govt employees Leave Policy :ಸರ್ಕಾರಿ ನೌಕರರ ರಜಾ ನಿಯಮದಲ್ಲಿ ಬದಲಾವಣೆ ! ಇನ್ನು ನೀವು ತೆಗೆದುಕೊಳ್ಳಲು ಸಾಧ್ಯವಾಗುವುದು ಇಷ್ಟೇ ರಜೆ  title=

7th Pay Commission : ತನ್ನ ಉದ್ಯೋಗಿಗಳ ರಜೆಗೆ ಸಂಬಂಧಿಸಿದ ಹಲವು ಅನುಮಾನಗಳನ್ನು ಪ್ರಶ್ನೆಗಳಿಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇದರಲ್ಲಿ ಸರ್ಕಾರಿ ನೌಕರರು ಸತತ ಎಷ್ಟು ದಿನ ರಜೆ ಪಡೆಯಬಹುದು ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಒಂದು ವೇಳೆ ಹೆಚ್ಚು ರಜೆ ತೆಗೆದುಕೊಂಡರೆ ಅದು ನೌಕರರ ಸೇವೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ.

ಈ ಬಗ್ಗೆ FAQ ಹೊರಡಿಸಿರುವ ಸರ್ಕಾರ ನೌಕರರ ರಜಾದಿನಗಳಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ. ಈ ಮೂಲಕ ರಜೆಗೆ ಸಂಬಂಧಿಸಿದಂತೆ ನೌಕರರ ಗೊಂದಲವನ್ನು ಹೋಗಲಾಡಿಸಿ,  ಸೇವೆಗೆ ಸಂಬಂಧಿಸಿದ ಎಲ್ಲಾ ಷರತ್ತುಗಳ ಬಗ್ಗೆ ತಿಳಿಸುವ ಕೆಲಸವನ್ನು ಮಾಡಿದೆ. 

ಇದನ್ನೂ ಓದಿ :  ಸಿದ್ದರಾಮಯ್ಯ ಬಜೆಟ್ ಮೇಲೆ ಗಡಿಜಿಲ್ಲೆ ಜನರ ಬೆಟ್ಟದಷ್ಟು ನಿರೀಕ್ಷೆ !

FAQ ನಲ್ಲಿ, ವಿವಿಧ ವರ್ಗದ ಉದ್ಯೋಗಿಗಳ ಅರ್ಹತೆಗಳು,  ಲೀವ್ ಟ್ರಾವೆಲ್ ಕನ್ಸೆಷನ್, ರಜೆ ಎನ್‌ಕ್ಯಾಶ್‌ಮೆಂಟ್, EL ಎನ್‌ಕ್ಯಾಶ್‌ಮೆಂಟ್, ಪಿತೃತ್ವ ರಜೆ ಮುಂತಾದ ವಿಷಯಗಳ ಬಗ್ಗೆ ಸರ್ಕಾರದಿಂದ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ.

ವಿದೇಶಿ ಸೇವಾ ಉದ್ಯೋಗಿಗಳಿಗೆ ವಿನಾಯಿತಿ :
FAQ ಪ್ರಕಾರ, ಉದ್ಯೋಗಿಯು ನಿರಂತರವಾಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ರಜೆಯಲ್ಲಿದ್ದರೆ, ಆ ನೌಕರನ ಸೇವೆಯನ್ನು ಕೊನೆಗೊಳಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ವಿದೇಶಿ ಸೇವೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರದ ಸರ್ಕಾರಿ ಉದ್ಯೋಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ರಜೆಯಲ್ಲಿದ್ದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನೌಕರರು ನಿರಂತರವಾಗಿ 5 ವರ್ಷಗಳಿಗಿಂತ ಹೆಚ್ಚು ಕಾಲ ರಜೆ ತೆಗೆದುಕೊಳ್ಳಲು ಅನುಮತಿ ಇಲ್ಲ. 

ಇದನ್ನೂ ಓದಿ :Sovereign Gold Bond: ಆನ್‌ಲೈನ್‌ನಲ್ಲಿ ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಹಂತ-ಹಂತದ ಪ್ರಕ್ರಿಯೆ

ಲೀವ್  ಎನ್ಕ್ಯಾಶ್ ಮೆಂಟ್ ನಿಯಮಗಳೇನು? :
ನೌಕರರು ಮುಂಚಿತವಾಗಿ ರಜೆ ಎನ್ಕ್ಯಾಶ್ಮೆಂಟ್ ಅನುಮೋದನೆಯನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರವು FAQ ನಲ್ಲಿ ಹೇಳಿದೆ. ಇದು LTC ಜೊತೆಗೆ ಸೂಕ್ತವಾಗಿದೆ. ಕೆಲವು ಸಂದರ್ಭಗಳಲ್ಲಿ, ನಿಗದಿತ ಸಮಯದ ನಂತರವೂ ರಜೆ ಎನ್ಕ್ಯಾಶ್ಮೆಂಟ್ ಮಾಡಬಹುದು.

ಮಕ್ಕಳ ಆರೈಕೆ ರಜೆಯನ್ನು ಸಹ ಮಹಿಳೆಯರಿಗೆ ಮಾತ್ರ ಮಗುವಿನ ಆರೈಕೆಗಾಗಿ ನೀಡಲಾಗುತ್ತದೆ. ಮಗು ವಿದೇಶದಲ್ಲಿ ಓದುತ್ತಿದ್ದರೆ ಅಥವಾ ಮಹಿಳಾ ಉದ್ಯೋಗಿ ಅವರನ್ನು ನೋಡಿಕೊಳ್ಳಲು ವಿದೇಶಕ್ಕೆ ಹೋಗಬೇಕಾದರೆ, ಕೆಲವು ಅಗತ್ಯ ಕಾರ್ಯವಿಧಾನಗಳ ನಂತರ  ರಜೆಯನ್ನು ಅನುಮತಿಸಲಾಗುತ್ತದೆ. 

ಅಧ್ಯಯನಕ್ಕೆ ಎಷ್ಟು ದಿನ ರಜೆ ?: 
ಉದ್ಯೋಗಿಗೆ ಅಧ್ಯಯನ ರಜೆ ಅಗತ್ಯವಿದ್ದರೆ, ಅವರು ತಮ್ಮ ಸಂಪೂರ್ಣ ಸೇವಾ ಅವಧಿಯಲ್ಲಿ ಈ ಉದ್ದೇಶಕ್ಕಾಗಿ 24 ತಿಂಗಳ ರಜೆ ತೆಗೆದುಕೊಳ್ಳಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.ಈ ರಜೆಯನ್ನು ನೌಕರರ ಅನುಕೂಲಕ್ಕೆ ತಕ್ಕಂತೆ ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ತೆಗೆದುಕೊಳ್ಳಬಹುದು.

ಕೇಂದ್ರ ಆರೋಗ್ಯ ಸೇವೆಗೆ ಸಂಬಂಧಿಸಿದ ಉದ್ಯೋಗಿಗಳಿಗೆ ಅಧ್ಯಯನ ರಜೆಗಾಗಿ 36 ತಿಂಗಳ ಸಮಯವನ್ನು ನೀಡಲಾಗುತ್ತದೆ. ಸ್ನಾತಕೋತ್ತರ ವಿದ್ಯಾರ್ಹತೆಗಾಗಿ 36 ತಿಂಗಳ ರಜೆಯನ್ನೂ ತೆಗೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News