Changes In Voter ID: ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸುವ ಸುಲಭ ವಿಧಾನ

Voter ID: ನಿಮ್ಮ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಕುಳಿತಲ್ಲಿಯೇ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಅಂತಹ ಒಂದು ಸರಳ ವಿಧಾನವನ್ನು ಇಲ್ಲಿ ತಿಳಿಸುತ್ತಿದ್ದೇವೆ.

Written by - Yashaswini V | Last Updated : Jul 5, 2022, 01:19 PM IST
  • ಯಾವುದೇ ನಾಗರೀಕರು ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮತದಾರರ ಗುರುತಿನ ಚೀಟಿ ಎಂದರೆ ವೋಟರ್ ಐಡಿಯನ್ನು ಹೊಂದಿರುವುದು ಬಹಳ ಮುಖ್ಯ.
  • ಮತದಾರರ ಗುರುತಿನ ಚೀಟಿಯಲ್ಲಿ ನೀಡಿರುವ ಮಾಹಿತಿಯಲ್ಲಿ ಹೆಸರಿನ ಜತೆಗೆ ನಾಗರಿಕರ ಮನೆಯ ವಿಳಾಸವನ್ನೂ ನಮೂದಿಸಲಾಗಿರುತ್ತದೆ.
  • ಹಾಗಾಗಿ, ನೀವು ಇತ್ತೀಚಿಗೆ ಮನೆ ಬದಲಾಯಿಸಿದ್ದರೆ ವೋಟರ್ ಐಡಿಯನ್ನು ನವೀಕರಿಸುವುದು ಬಹಳ ಮುಖ್ಯ.
Changes In Voter ID: ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸುವ ಸುಲಭ ವಿಧಾನ  title=
How to change address in voter id

ವೋಟರ್ ಐಡಿಯಲ್ಲಿ ವಿಳಾಸ ಬದಲಾವಣೆ ಮಾಡುವ ಸರಳ ವಿಧಾನ: ಭಾರತದಲ್ಲಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರು ಮತದಾನದ ಹಕ್ಕನ್ನು ಹೊಂದಿದ್ದಾರೆ ಮತ್ತು ಅರ್ಹ ಮತದಾರರು ಅವರ/ಅವಳ ನೋಂದಾಯಿತ ಕ್ಷೇತ್ರದಿಂದ ಮಾತ್ರ ಮತ ಚಲಾಯಿಸಲು ಅನುಮತಿಸಲಾಗುತ್ತದೆ. ಯಾವುದೇ ನಾಗರೀಕರು ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮತದಾರರ ಗುರುತಿನ ಚೀಟಿ ಎಂದರೆ ವೋಟರ್ ಐಡಿಯನ್ನು ಹೊಂದಿರುವುದು ಬಹಳ ಮುಖ್ಯ. ಮತದಾರರ ಗುರುತಿನ ಚೀಟಿಯಲ್ಲಿ ನೀಡಿರುವ ಮಾಹಿತಿಯಲ್ಲಿ ಹೆಸರಿನ ಜತೆಗೆ ನಾಗರಿಕರ ಮನೆಯ ವಿಳಾಸವನ್ನೂ ನಮೂದಿಸಲಾಗಿರುತ್ತದೆ. ಹಾಗಾಗಿ, ನೀವು ಇತ್ತೀಚಿಗೆ ಮನೆ ಬದಲಾಯಿಸಿದ್ದರೆ ವೋಟರ್ ಐಡಿಯನ್ನು ನವೀಕರಿಸುವುದು ಬಹಳ ಮುಖ್ಯ. 

ನಿಮ್ಮ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಕುಳಿತಲ್ಲಿಯೇ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಅಂತಹ ಒಂದು ಸರಳ ವಿಧಾನವನ್ನು ಇಲ್ಲಿ ತಿಳಿಸುತ್ತಿದ್ದೇವೆ. ಇದಕ್ಕಾಗಿ ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಅನ್ನು ಬಳಸಿಕೊಂಡು ಆನ್‌ಲೈನ್ ವಿನಂತಿಯನ್ನು ಸಲ್ಲಿಸಬೇಕು. 

ಇದನ್ನೂ ಓದಿ- ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಈ ಕೆಲಸ ಮಾಡಿದರೆ ಸಿಗುತ್ತೆ ಕನ್ಫರ್ಮ್ ಟಿಕೆಟ್

ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸಲು ಇಲ್ಲಿದೆ ಹಂತಹ ಹಂತದ ಪ್ರಕ್ರಿಯೆ:
1. ಮೊದಲಿಗೆ ಅಧಿಕೃತ ವೆಬ್‌ಸೈಟ್ https://www.nvsp.in/ ಗೆ ಭೇಟಿ ನೀಡಿ .
2. ನಿಗದಿತ ಜಾಗದಲ್ಲಿ ಲಾಗಿನ್ ಆಗಿ.
3. ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ನೋಂದಾಯಿಸಿಕೊಳ್ಳಿ.
4. ಲಾಗಿನ್ ಪರದೆಯ ಕೆಳಭಾಗದಲ್ಲಿ ನೀಡಲಾದ ಬಟನ್ ಅನ್ನು ಒತ್ತಿ ಮತ್ತು ಲಾಗಿನ್ ಆಗಿ.
5. ಲಾಗಿನ್ ಆದ ನಂತರ, ಆಯ್ಕೆಗಳಿಗೆ ಹೋಗಿ.
6. ಅಲ್ಲಿ 'Migration to another place' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
7. ಈಗ ನೀವು ನಿಮ್ಮ ವೋಟರ್ ಐಡಿ ಅಥವಾ ಫ್ಯಾಮಿಲಿ ವೋಟರ್ ಐಡಿಯನ್ನು ಬದಲಾಯಿಸಲು ಬಯಸುತ್ತೀರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
8. ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ನೀವು ಬದಲಾವಣೆಗಳನ್ನು ಮಾಡುತ್ತಿದ್ದರೆ ನಂತರ ನೀವು 'ಸ್ವಯಂ' ಆಯ್ಕೆಯನ್ನು ಆರಿಸಿಕೊಳ್ಳಿ.
9. ಈಗ ನೀವು ನಿಮ್ಮ ಬದಲಾದ ವಿಳಾಸವನ್ನು ನಮೂದಿಸಬೇಕು. 
10. ನಿಮ್ಮ ಕ್ಷೇತ್ರದ ಮಾಹಿತಿಯನ್ನು ನೀಡಿ.
11. ಪರದೆಯ ಮೇಲೆ ಫಾರ್ಮ್ 6 ಅಪ್ಲಿಕೇಶನ್ ಕಾಣಿಸುತ್ತದೆ.
12. ಈಗ ನಿಮ್ಮ ಪ್ರಸ್ತುತ ರಾಜ್ಯ, ವಿಳಾಸ, ಕ್ಷೇತ್ರ ಮತ್ತು ಇತರ ಮಾಹಿತಿಯನ್ನು ಇಲ್ಲಿ ನಮೂದಿಸಿ. ಇದಲ್ಲದೆ, ನೀವು ವೈಯಕ್ತಿಕ ಮಾಹಿತಿ, ಅಂಚೆ ವಿಳಾಸ, ಶಾಶ್ವತ ವಿಳಾಸ ಇತ್ಯಾದಿಗಳನ್ನು ನೀಡಬೇಕಾಗುತ್ತದೆ.
13. ಈ ಮಾಹಿತಿಯನ್ನು ನಮೂದಿಸಿದ ನಂತರ, ನಿಮ್ಮ ಫೋಟೋ ಮತ್ತು ವಯಸ್ಸಿನ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಿ.
14. ಸ್ವಯಂ ಘೋಷಣೆಯನ್ನು ನೀಡಿ ಮತ್ತು ಕ್ಯಾಪ್ಚಾವನ್ನು ನಮೂದಿಸುವ ಮೂಲಕ ವಿನಂತಿಯನ್ನು ಸಲ್ಲಿಸಿ. 

ಇದನ್ನೂ ಓದಿ- Indian Railways: ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಪ್ರಮುಖ ಬದಲಾವಣೆ

ಇದರ ನಂತರ ನೀವು ಬದಲಾವಣೆಗಳನ್ನು ಮಾಡಲಾಗಿದೆ ಎಂಬ ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ಹೊಸ ಮತದಾರರ ಗುರುತಿನ ಚೀಟಿಯನ್ನು ನಿಮ್ಮ ಪ್ರಸ್ತುತ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News