ಸರ್ಕಾರಿ ನೌಕರರಿಗೆ ಡಬಲ್ ಧಮಾಕ ! ಈ ಬಾರಿ ದೀಪಾವಳಿಗೆ ಸಿಗಲಿದೆ ಬೋನಸ್

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ ದೀಪಾವಳಿ ಬೋನಸ್.

Written by - Ranjitha R K | Last Updated : Oct 9, 2023, 10:56 AM IST
  • ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ.
  • ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್.
  • ಹಬ್ಬದ ಸೀಸನ್‌ಗಳಲ್ಲಿ ಬೋನಸ್‌ ಲಭ್ಯ
ಸರ್ಕಾರಿ ನೌಕರರಿಗೆ ಡಬಲ್ ಧಮಾಕ ! ಈ ಬಾರಿ ದೀಪಾವಳಿಗೆ ಸಿಗಲಿದೆ ಬೋನಸ್ title=

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ತುಟ್ಟಿ ಭತ್ಯೆ  ಹೆಚ್ಚಳ ಘೋಷಣೆ ಯಾವಾಗ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ. ಸಾಮಾನ್ಯವಾಗಿ, ನವರಾತ್ರಿಯ ಸಂದರ್ಭದಲ್ಲಿ ಸರ್ಕಾರವು ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುತ್ತದೆ. ಈ ಬಾರಿ ಕೂಡಾ ಹಬ್ಬದ ಅವಧಿಯಲ್ಲಿ ಉದ್ಯೋಗಿಗಳಿಗೆ ಡಿಎ ಹೆಚ್ಚಳವನ್ನು ಉಡುಗೊರೆಯಾಗಿ ನೀಡಲಾಗುವುದು ಎನ್ನಲಾಗಿದೆ. ತುಟ್ಟಿಭತ್ಯೆಯನ್ನು ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಹೆಚ್ಚಿಸಲಾಗುತ್ತದೆ. 

ಇದೇ ವೇಳೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ ದೀಪಾವಳಿ ಬೋನಸ್.

ಇದನ್ನೂ ಓದಿ : ಅಕ್ಟೋಬರ್ 31ರ ನಂತರ ಬಂದ್ ಆಗಲಿದೆ ಈ ಬ್ಯಾಂಕಿನ ಡೆಬಿಟ್ ಕಾರ್ಡ್

ಹಬ್ಬದ ಸೀಸನ್‌ಗಳಲ್ಲಿ ಬೋನಸ್‌ ಲಭ್ಯ : 
ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಪ್ರತಿ ವರ್ಷ ದೀಪಾವಳಿಯ ಆಸುಪಾಸಿನಲ್ಲಿ ಉತ್ಪಾದಕತೆ ಲಿಂಕ್ಡ್ ಬೋನಸ್ (PLB) ನೀಡಲಾಗುತ್ತದೆ. ಇದರಲ್ಲಿ 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ನೀಡಲಾಗುವುದು. ಇದನ್ನು  ಅತ್ಯಂತ ಕಡಿಮೆ ದರ್ಜೆಯ (ಗ್ರೂಪ್ ಸಿ ಮತ್ತು ಗ್ರೂಪ್ ಡಿ) ಉದ್ಯೋಗಿಗಳಿಗೆ ನೀಡಲಾಗುತ್ತದೆ. ಕನಿಷ್ಠ ವೇತನದ ಆಧಾರದ ಮೇಲೆ ಬೋನಸ್ ಮೊತ್ತವನ್ನು ಉದ್ಯೋಗಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಈ ಬಾರಿ ಈ ಮೊತ್ತವನ್ನು ಹೆಚ್ಚಿಸುವಂತೆ ರೈಲ್ವೆ ಫೆಡರೇಷನ್ ಮನವಿ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ರೈಲ್ವೆ ನೌಕರರ ಬೋನಸ್: ಬೋನಸ್ ಕುರಿತು ಒಕ್ಕೂಟದ ಬೇಡಿಕೆ ಏನು?:
ಭಾರತೀಯ ರೈಲ್ವೇ ಉದ್ಯೋಗಿಗಳ ಒಕ್ಕೂಟ (IREF) 7ನೇ ವೇತನ ಶ್ರೇಣಿಯ ಆಧಾರದ ಮೇಲೆ ಪರಿಷ್ಕೃತ ಬೋನಸ್ ಕೋರಿ ರೈಲ್ವೇಗೆ ಪತ್ರ ಬರೆದಿದೆ. ಜನವರಿ 1, 2016 ರಂದು 7 ನೇ ವೇತನ ಆಯೋಗದ ಶಿಫಾರಸುಗಳನ್ನು ರೈಲ್ವೆಯಲ್ಲಿ ಜಾರಿಗೊಳಿಸಲಾಗಿದ್ದರೂ, IREF ನೌಕರರ ಬೋನಸ್ (PLB) 6 ನೇ ವೇತನ ಆಯೋಗವು ನಿಗದಿಪಡಿಸಿದ ಕನಿಷ್ಠ ವೇತನವನ್ನು ಆಧರಿಸಿದೆ. ಹಾಗಾಗಿ ಇದನ್ನೂ  7ನೇ ವೇತನ ಆಯೋಗದ ಅಡಿಯಲ್ಲಿ ನೀಡಬೇಕು ಎನ್ನುವ ಬೇಡಿಕೆ ಇದೆ. 

ಇದನ್ನೂ ಓದಿ ಇನ್ನು ಏರಿಕೆಯಾಗುವುದಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ ! ಇದಕ್ಕೆ ಕಾರಣವೂ ಇದೆ

ಯಾವ ಉದ್ಯೋಗಿಗಳು ಬೋನಸ್‌ ನಿರೀಕ್ಷಿಸಬಹುದು? : 
ಈ ಬೋನಸ್ ಅನ್ನು ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ ಹಬ್ಬ ಹರಿದಿನಗಳಲ್ಲಿ ನೀಡಲಾಗುತ್ತದೆ. ರೈಲ್ವೇ ಸಚಿವಾಲಯವು ಎಲ್ಲಾ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ (ಗುಂಪು C ಮತ್ತು ಗುಂಪು D) PLB ಅನ್ನು ಪಾವತಿಸುತ್ತದೆ. ಇದರಲ್ಲಿ, ಉದ್ಯೋಗಿಯ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಮೊತ್ತವನ್ನು ನೀಡಲಾಗುತ್ತದೆ. ಬೋನಸ್ ಅನ್ನು ಕಡಿಮೆ ದರ್ಜೆಯ (ಗುಂಪು ಡಿ) ನೌಕರರ ಕನಿಷ್ಠ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಬೋನಸ್ ಮೊತ್ತವಾಗಿ ಎಷ್ಟು ಹಣ ಸಿಗಲಿದೆ ? : 
ಆರನೇ ವೇತನ ಶ್ರೇಣಿಯಲ್ಲಿ ಗ್ರೂಪ್ ಡಿ ನೌಕರರಿಗೆ ಕನಿಷ್ಠ ವೇತನ 7000  ರೂ. 7ನೇ ವೇತನ ಆಯೋಗ ಜಾರಿಗೆ ಬಂದ ನಂತರ ನೌಕರರ ಕನಿಷ್ಠ ವೇತನವನ್ನು  18,000 ರೂ.ಗೆ ಹೆಚ್ಚಿಸಲಾಯಿತು. 6ನೇ ವೇತನ ಶ್ರೇಣಿಯ ಕನಿಷ್ಠ ವೇತನ 7000 ರೂ. ಯನ್ನು ಆಧರಿಸಿ ಎಲ್ಲಾ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರು ಕೇವಲ 17,951 ರೂ. ಬೋನಸ್ ಪಡೆಯುತ್ತಾರೆ ಎಂದು ರೈಲ್ವೇ ನೌಕರರ ಒಕ್ಕೂಟ ಹೇಳುತ್ತದೆ. ಆದರೆ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನದ ಆಧಾರದ ಮೇಲೆ ಬೋನಸ್ ಮೊತ್ತವನ್ನು 46,159 ರೂ.ಗೆ ಹೆಚ್ಚಿಸಬೇಕು ಎನ್ನುವ ಆಗ್ರಹ ರೈಲ್ವೆ ನೌಕರರ ಫೆಡರೇಷನ್ ನದ್ದು. ಇದಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ : ಪಿಎಂ ಕಿಸಾನ್ 15ನೇ ಕಂತಿನ ಹಣ ಖಾತೆಗೆ ವರ್ಗಾಯಿಸಲು ಫಿಕ್ಸ್ ಆಯ್ತು ಮುಹೂರ್ತ, ಈ ದಿನ ಬರಲಿದೆ ಹಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News