Digital currency: ಇಂದಿನಿಂದಲೇ ಭಾರತದ ಮೊದಲ ಡಿಜಿಟಲ್ ರೂಪಾಯಿ ಆರಂಭ

ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (CBDC) ಎಂಬುದು ಕೇಂದ್ರೀಯ ಬ್ಯಾಂಕ್ ಹೊರಡಿಸಿದ ಕರೆನ್ಸಿ ನೋಟುಗಳ ಡಿಜಿಟಲ್ ರೂಪವಾಗಿದೆ.

Written by - Puttaraj K Alur | Last Updated : Nov 1, 2022, 03:47 PM IST
  • ಪ್ರಸ್ತುತ ಸರ್ಕಾರಿ ಬಾಂಡ್‍ಗಳಲ್ಲಿನ ಸೆಕೆಂಡರಿ ಮಾರ್ಕೆಟ್‌ ವಹಿವಾಟುಗಳ ಪಾವತಿಗೆ ಡಿಜಿಟಲ್ ಕರೆನ್ಸಿ ಉಪಯೋಗ
  • SBI, HDFC ಸೇರಿ 9 ಬ್ಯಾಂಕ್‍ಗಳು ಸರ್ಕಾರಿ ಬಾಂಡ್‍ಗಳ ವಹಿವಾಟುಗಳಿಗೆ ವರ್ಚುವಲ್ ಕರೆನ್ಸಿ ವಿತರಿಸಲಿವೆ
  • CBDC ಎಂಬುದು ಕೇಂದ್ರೀಯ ಬ್ಯಾಂಕ್ ಹೊರಡಿಸಿದ ಕರೆನ್ಸಿ ನೋಟುಗಳ ಡಿಜಿಟಲ್ ರೂಪವಾಗಿದೆ
Digital currency: ಇಂದಿನಿಂದಲೇ ಭಾರತದ ಮೊದಲ ಡಿಜಿಟಲ್ ರೂಪಾಯಿ ಆರಂಭ title=
ಭಾರತದ ಮೊದಲ ಡಿಜಿಟಲ್‌ ರೂಪಾಯಿ

ನವದೆಹಲಿ: ಭಾರತದ ಮೊದಲ ಡಿಜಿಟಲ್‌ ರೂಪಾಯಿಯ ಪ್ರಾಯೋಗಿಕ ಬಳಕೆ ಇಂದಿನಿಂದಲೇ(ನವೆಂಬರ್ 1) ಆರಂಭವಾಗಲಿದೆ ಎಂದು ವರದಿಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಒಟ್ಟು 9 ಬ್ಯಾಂಕ್‍ಗಳು ಸರ್ಕಾರಿ ಬಾಂಡ್‍ಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್‌ ಕರೆನ್ಸಿಯನ್ನು ವಿತರಿಸಲಿವೆ.

ಸದ್ಯ ಸಗಟು ವಲಯದಲ್ಲಿ ಮಾತ್ರ ಅಂದರೆ ಸರ್ಕಾರಿ ಬಾಂಡ್‍ಗಳಲ್ಲಿನ ಸೆಕೆಂಡರಿ ಮಾರ್ಕೆಟ್‌ ವಹಿವಾಟುಗಳ ಪಾವತಿಗೆ ಡಿಜಿಟಲ್ ಕರೆನ್ಸಿ ಉಪಯೋಗಿಸಲಾಗುತ್ತದೆ. ಚಿಲ್ಲರೆ ಕ್ಷೇತ್ರದಲ್ಲಿ ಡಿಜಿಟಲ್‌ ರೂಪಾಯಿಯ ಮೊದಲ ಪ್ರಾಯೋಗಿಕ ಬಳಕೆಯು 1 ತಿಂಗಳೊಳಗೆ ಆಯ್ದ ಪ್ರದೇಶಗಳಲ್ಲಿ ಆರಂಭವಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಹಿತಿ ನೀಡಿದೆ.

ಇದನ್ನೂ ಓದಿ: Investment Tips: ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವುದನ್ನು ಬಿಟ್ರೆ, ನೀವು ಕೋಟ್ಯಾಧೀಶರಾಬಹುದು ಗೊತ್ತಾ?

ಈ ಆರಂಭಿಕ ಪ್ರಾಯೋಗಿಕ ಬಳಕೆಯ ಫ‌ಲಿತಾಂಶವನ್ನಾಧರಿಸಿ ಮುಂದಿನ ಹಂತದಲ್ಲಿ ಇತರೆ ಸಗಟು ವಹಿವಾಟು ಮತ್ತು ಗಡಿಯಾಚೆಗಿನ ಪಾವತಿಯಲ್ಲೂ ಡಿಜಿಟಲ್‌ ರೂಪಾಯಿ ಬಳಕೆ ಆರಂಭಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಫೆಬ್ರವರಿ 1, 2022ರಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಭಾರತ ಸರ್ಕಾರವು 2022-23ರ ಆರ್ಥಿಕ ವರ್ಷದಿಂದ ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು.

ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (CBDC) ಎಂಬುದು ಕೇಂದ್ರೀಯ ಬ್ಯಾಂಕ್ ಹೊರಡಿಸಿದ ಕರೆನ್ಸಿ ನೋಟು(ವರ್ಚುವಲ್‌ ಕರೆನ್ಸಿ)ಗಳ ಡಿಜಿಟಲ್ ರೂಪವಾಗಿದೆ. ಇದಕ್ಕೂ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಹಣಕಾಸು ಅಕ್ರಮ ಮತ್ತು ಹಣದ ದುರ್ಬಳಕೆ ತಡೆಗಟ್ಟಲು ಶೀಘ್ರವೇ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಪ್ರಾರಂಭಿಸುವುದಾಗಿ ಆರ್​ಬಿಐ ಈ ಹಿಂದೆ ಹೇಳಿತ್ತು.

ಇದನ್ನೂ ಓದಿ: GPF New Rule: ಸರ್ಕಾರಿ ನೌಕರರಿಗೊಂದು ಮಹತ್ವದ ಸುದ್ದಿ, ತಪ್ಪದೆ ಓದಿ

ದೇಶದ ಹಣಕಾಸಿನ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಡಿಜಿಟಲ್ ರೂಪಾಯಿ ಬಳಕೆ ಮಾಡಲಾಗುವುದು. ಇದಕ್ಕೆ ಸಂಬಂಧಿದ ಕಾರ್ಯವ್ಯಾಪ್ತಿಯನ್ನು ಶೀಘ್ರವೇ ನಿರ್ಧರಿಸಲಾಗುವುದು. ಇದೀಗ ಹಂತ ಹಂತವಾಗಿ ಡಿಜಿಟಲ್ ಕರೆನ್ಸಿ ಅನುಷ್ಠಾನಗೊಳಿಸುವ ಕಾರ್ಯತಂತ್ರಗಳ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಅಂತಾ ಆರ್​ಬಿಐ ಹೇಳಿಕೊಂಡಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News